ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಾಳ್ಮೆ ಕಳೆದುಕೊಳ್ಳಬಾರದು. ತಾಳ್ಮೆಯಿಂದ ಇದ್ದರೆ ಸಿಎಂ ಅಥವಾ ಡಿಸಿಎಂ ಹುದ್ದೆ ಅವರನ್ನು ಅರಸಿಕೊಂಡು ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಕಿವಿಮಾತು ಹೇಳಿದ್ದಾರೆ.
ಡಾ.ಪರಮೇಶ್ವರ್ ಒಳ್ಳೆಯ ನಾಯಕರು. ಉನ್ನತ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಆ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ, ಎಲ್ಕ್ಕೂಲದಕ್ಕೂ ಸಮಯ ಕೂಡಿ ಬರಬೇಕು ಎಂದಿದ್ದಾರೆ.
ದಲಿತ ಮುಖ್ಯಮಂತ್ರಿ ಹುದ್ದೆ ವಿಚಾರವೇ ಇಂದು ಅಪ್ರಸ್ತುತ ಎಂದು ಪುನರುಚ್ಚರಿಸಿದ ಅವರು, ದಲಿತ ಸಿಎಂ ವಿಚಾರವನ್ನು ಕೆಲವರು ಯಾವ ಉದ್ದೇಶಕ್ಕಾಗಿ ಪ್ರಸ್ತಾಪ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಸಿಎಂ ಅಥವಾ ಡಿಸಿಎಂ ಹುದ್ದೆಗಳು ಖಾಲಿ ಇಲ್ಲ ಎಂದು ದಲಿತ ಮುಖಂಡರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ಆಯೋಜಿಸಿದ್ದ ಕುಶಲಕರ್ಮಿಗಳಿಗೆ ಅರ್ಹತಾ ಪತ್ರ ವಿತರಣೆ ಸಮಾರಂಭದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಚರ್ಮೋದ್ಯೋಗದಲ್ಲಿ ತರಬೇತಿ ಪಡೆದ ಕುಶಲಕರ್ಮಿಗಳಿಗೆ ನಿಗಮದ ಪರವಾಗಿ ಅರ್ಹತಾ ಪತ್ರಗಳನ್ನು ಸಚಿವ ಆಂಜನೇಯ ವಿತರಿಸಿದರು
.
No comments:
Post a Comment