ದೇವಲಾಪುರ ಗ್ರಾಮ ಪಂಚಾಯಿತಿ
ನಮ್ಮ ಗ್ರಾಮ ನಮ್ಮ ಸ್ವಚ್ಛತೆಗೆ ಕವಡೆ ಕಾಸಿನ ಕಿಮ್ಮತಿಲ್ಲ.
ದೇವಲಾಪುರ ಫೆ: ದೇವಲಾಪುರ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಲ ಭಾರತ ಸ್ವಚ್ಛಭಾರತ ಗ್ರಾಮ ಯೋಜನೆಗೆ ಶೌಚಾಲಯ ನಿರ್ಮಾಣಮಾಡಿದರು ಇದುವರೆಗೆ ಹಣ ನೀಡದೆ ಇರುವುದು ಫಲಾನುಭವಿಗಳಲ್ಲಿ ಬೇಸರ ತಂದಿದ್ದು ರಾಜ್ಯ ಸರ್ಕಾರದ ಶೌಚಾಲಯ ನಿರ್ಮಾಣದ ಸ್ವಚ್ಚಭಾರತ ಯೋಜನೆಯಡಿ ಪ್ರತಿ ಕುಟುಂಬಕ್ಕೊಂದು ಶೌಚಾಲಯ ಕಟ್ಟಿ ಎನ್ನುವ ಮಾತು ಅಕ್ಷರ ಸಹ ಸತ್ಯಕ್ಕೆ ದೂರು ಎನ್ನುವ ಮಾತು ದೇವಲಾಪುರ ಗ್ರಾಮಪಂಚಾಯಿತಿ ಈ ಯೋಜನೆಯಿಂದ ಅತಿ ದೂರದಲ್ಲಿ ಉಳಿದಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ.
ನಾಗಮಂಗಲ ತಾಲ್ಲೂಕು, ದೇವಲಾಪುರ ಗ್ರಾಮಪಂಚಾಯಿತಿಯಲ್ಲಿ ಒಮ್ಮೆಯಾದರೂ ಅಧಿಕಾರಿಗಳು ಈ ಪಂಚಾಯಿತಿಯ ಪಾರುಪತ್ಯದ ಸತ್ಯವನ್ನು ಪರಿಶೀಲಿಸಿದರೆ ಅಬ್ಬಬ್ಬಾ ಎನ್ನುವಂತೆ ಇಲ್ಲಿನ ಅವ್ಯವಸ್ಥೆಯ ಆಗರದ ಬ್ರಹ್ಮಾಂಡ ಎದ್ದು ತೋರುತ್ತಿದ್ದರು. ಅದೇಕೋ ಅಧಿಕಾರಿಗಳು ಇವರು ಮಾಡಿದ್ದೇ ಸೈ ಎಂದು ಹೇಳಿ ಹೋರಟೇ ಹೋಗುತ್ತಾರೆ.
ರಾಜ್ಯದ ಮಾನ್ಯ ಪಂಚಾಯತ್ ರಾಜ್ಯ ಸಚಿವರಾದ ಎಚ್.ಕೆ.ಪಾಟೀಲ್‍ರವರ ಗಾಂಧಿ ಕಂಡ ಕನಸಿನ ರಾಜ್ಯದ ಪರಿಕಲ್ಪನೆ ಚಾಲನೆ ನೀಡುತ್ತಿದ್ದರೆ ಈ ಪಂಚಾಯಿತಿಯಲ್ಲಿ ಶೌಚಾಲಯ ಕಟ್ಟಿದ್ದರೂ ಫಲಾನುಭವಿಗಳಿಗೆ ವರ್ಷವಾದರೂ ಹಣ ನೀಡದೆ ಇಲ್ಲಿನ ಅಭಿವೃದ್ದಿ ಅಧಿಕಾರಿಗಳ ದುಂಡಾವರ್ತನೆ ಮಾನ್ಯ ಮಂತ್ರಿಗಳು ಯೋಜನೆಯ ವಿರುದ್ದವಾಗಿ ಕೆಲಸ ನಿರ್ವಹಿಸುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಖಾಯಂ ಅಭಿವೃದ್ದಿ ಅಧಿಕಾರಿಗಳಿಲ್ಲ:- ಇಲ್ಲಿನ ಗ್ರಾಮಪಂಚಾಯಿತಿಗೆ ಅಭಿವೃದ್ದಿ ಅಧಿಕಾರಿಯಾಗಲೀ, ಕಾರ್ಯದರ್ಶಿಗಳಾಗಲೀ, ಯಾರೂ ಎಂಬುದು ಜನಸಾಮಾನ್ಯರಿಗೆ ತಿಳಿಯದಾಗಿದೆ.
ಪಂಚಾಯಿತಿ ಬಿಟ್ಟು ಪರಾರಿ:- ಇಲ್ಲಿನ ಗ್ರಾಮಪಂಚಾಯಿತಿ ಕಾರ್ಯದರ್ಶಿ ಅಭಿವೃದ್ದಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೃಷ್ಣಮೂರ್ತಿ ಎಂಬುವರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿನ ವೈಫಲ್ಯತೆ, ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದಿರುವುದು ಹಾಗೂ ಶೌಚಾಲಯ ನಿರ್ಮಾಣವಾಗಿದ್ದು, ಹಣ ನೀಡದೆ ಸಬೂಬು ಹೇಳಿ ಈ ಪಂಚಾಯಿತಿಯಿಂದ ಬೇರೆಡೆ ಕೆಲಸ ನಿರ್ವಹಿಸುತ್ತಿದ್ದಾರೆ.
ನಿಯೋಜನೆ ಅಭಿವೃದ್ದಿ ಅಧಿಕಾರಿಗಳು:- ಶಿವಲಿಂಗಯ್ಯ, ಚಾಮರಾಜು, ಸೋಮಶೇಖರ್‍ರವರುಗಳು ನಿಯೋಜನೆ ಮಾಡಿದ್ದು, ಇವರ್ಯಾರು ಖಾಯಂ ಅಧಿಕಾರಿಗಳಲ್ಲ. ಇಷ್ಟಾದರೂ ಕಾರ್ಯ ನಿರ್ವಾಹಣಾಧಿಕಾರಿಗಳು ತಾತ್ಸರದ ಮಾತುಗಳನ್ನಾಡಿ ಜನರನ್ನು ಕಳುಹಿಸುತ್ತಿದ್ದಾರೆ.
ಉಡಾಫೆ ಉತ್ತರ:- ಇತ್ತಿಚೆಗೆ ನಿಯೋಜನೆಗೊಂಡ ಸೋಮಶೇಖರ ಅಭಿವೃದ್ದಿ ಅಧಿಕಾರಿಗಳು ಜನಸಾಮಾನ್ಯರಿಗೆ ಉಡಾಫೆ ಉತ್ತರ ನೀಡಿ ಜನಸಾಮಾನ್ಯರಿಗೆ ಸ್ಪಂದಿಸುತ್ತಿಲ್ಲ.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಯೋಜನೆಗೆ ಎಳ್ಳುನೀರು:- ಮಂಡ್ಯ ಜಿಲ್ಲಾ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳಾದ ರೋಹಿಣಿ ಸಿಂದೂರಿ ರವರ ದೂರದೃಷ್ಟಿ ಯೋಜನೆಯ ಮಹಿಳಾ ಸಬಲೀಕರಣದ ಕನಸಿನ ಕೂಸಿಗೆ ಈ ಪಂಚಾಯಿತಿಯಲ್ಲಿ ಎಳ್ಳುನೀರು ಬಿಟ್ಟಿದ್ದಾರೆ.
ಈ ಎಲ್ಲಾ ಅವ್ಯವಸ್ಥೆ ಆಗರವಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರತಿಕ್ರಿಯೇ ನೀಡದಿರುವುದು ಜನಸಾಮಾನ್ಯರಿಗೆ ಸಂಶಯವಾಗಿದ್ದು, ಹಾಗೂ ಬಡವ ಬಡ್ಡಿಗೆ ಹಣತಂದು ಶೌಚಾಲಯ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳ ಪಾಡೇನು ಎಂಬುದು ಎಲ್ಲರ ಮುಂದಿರುವ ಪ್ರಶ್ನೆಯಾಗಿದೆ.
ಇಷ್ಟೇಲ್ಲ ದೇವಲಾಪುರ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಶೌಚಾಲಯ ಹಣವನ್ನು ನೀಡದೆ ಇರುವುದು ಇಲ್ಲಿ ಕಾರ್ಯನಿರ್ವಹಿಸಿರುವ ಅಭಿವೃದ್ದಿಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ತೋರುತ್ತಿದ್ದು, ಸಂಬಂಧಪಟ್ಟ ಪಂಚಾಯಿತಿ ಸದಸ್ಯರುಗಳು ಅಭಿವೃದ್ದಿ ಅಧಿಕಾರಿಗಳಿಗೆ ಹಸಿರು ನಿಶಾನೆ ನೀಡಿದ್ದರೂ ಇವರ ಮಾತಿಗೂ ಎಳ್ಳುನೀರು ಬಿಟ್ಟಿದ್ದು ಈ ಪಂಚಾಯಿತಿಯ ದೌರ್ಬಾಗ್ಯ ಎನ್ನಬಹುದು. ಈ ಎಲ್ಲಾ ಸಮಸ್ಯೆಗಳಿಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಈಗಲಾದರೂ ಸಮಸ್ಯೆಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುವರೇ ಎಂಬುದು ಜನಸಾಮಾನ್ಯನ ಆಶಯವಾಗಿದೆ.

No comments:
Post a Comment