Sunday, 8 March 2015

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಪರಿಷತ್, ಮಂಡ್ಯ ಹಾಗೂ ಗ್ರಾಮೀಣ ಕ್ರೀಡೋತ್ಸವ ಸಂಘಟನಾ ಸಮಿತಿ ವತಿಯಿಂದ ಗ್ರಾಮೀಣ ಕ್ರೀಡೋತ್ಸವವನ್ನು ಮಂಡ್ಯ ಜಿಲ್ಲೆಯ 21 ಗ್ರಾಮೀಣ ಕೇಂದ್ರದಲ್ಲಿ ಏಕಕಾಲದಲ್ಲಿ  ಸಂಘಟಿಸಲಾಗುತ್ತಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಂಜುಳ ಹುಲ್ಲಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.21 ಗ್ರಾಮೀಣ ಕೇಂದ್ರಗಳ ವಿವರ ಈ ಕೆಳೆಕಂಡಂತಿದೆ ಇದೆ.
ತಾಲ್ಲೂಕು
ಕೇಂದ್ರಗಳು
ಸಂಘಟಿಸುವವರ ಹೆಸರು
ಮಂಡ್ಯ
ಕೆರಗೋಡು
ಅನುಪಮಾ, ಶಿಲ್ಪ

ಬಸರಾಳು
ಕೃಷ್ಣೇಗೌಡ,            ಗೊರವಾಲೆ ಚಂದ್ರಶೇಖರ್

ಕೊತ್ತತ್ತಿ
ಶಂಕರೇಗೌಡ
ಮದ್ದೂರು
ಕೊಪ್ಪ
ಅನಿಲ್‍ಕುಮಾರ್

ಕೆಸ್ತೂರು
ರಮಾನಂದ.ಬಿ

ಹೊನ್ನಲಗೆರೆ
ಹುಣಸೇಮರದ ದೊಡ್ಡಿ ಸ್ವಾಮಿ
ನಾಗಮಂಗಲ
ದೇವಲಾಪುರ
ಸೌಂದರ್ಯ, ನಾಗರಾಜು

ಬಿಂಡಿಗನವಿಲೆ
ವಿಜಯ್‍ಕುಮಾರ್, ವಸಂತಕುಮಾರ್

ಬ್ರಹ್ಮದೇವರಹಳ್ಳಿ
ಧನಂಜಯ್, ಚೇತನ್
ಮಳವಳ್ಳಿ
ಕಿರುಗಾವಲು
 ತಳಗವಾಡಿ ನಾಗರಾಜು

ಹಲಗೂರು
ಶಾಗ್ಯ ಕೆಂಪಯ್ಯ

ಬಿ.ಜಿ.ಪುರ
ಕುಮಾರ್
ಕೆ.ಆರ್.ಪೇಟೆ
ಕಿಕ್ಕೇರಿ
ಸರಸ್ವತಿ

ಬೂಕನಕೆರೆ
ರವಿ

ಶೀಳನೆರೆ
ಪರಮೇಶ್.ಎನ್
ಶ್ರೀರಂಗಪಟ್ಟಣ
ಅರಕೆರೆ
ಚಂದ್ರಕಿರಣ

ಕೆ ಶೆಟ್ಟಹಳ್ಳಿ
ಲಾಲಿಪಾಳ್ಯ ಮಹಾದೇವು

ಬೆಳಗೊಳ
ಮುನಿಸ್ವಾಮಿ
ಪಾಂಡವಪುರ
ಚಿನಕುರಳಿ
ಕೊಡಾಲ ಶಶಿಕುಮಾರ್

ಮೇಲುಕೋಟೆ
ಗುಣಶೇಖರ್

ಕ್ಯಾತನಹಳ್ಳಿ
ರವಿಕುಮಾರ್.ಕೆ.ಪಿ
 ....2
-2-
ಮಂಡ್ಯ ಜಿಲ್ಲೆ ಅನೇಕ ವೈಶಿಷ್ಯಗಳನ್ನು ತನ್ನೋಳಗೆ ಹುದುಗಿಸಿಕೊಂಡಿದೆ. ಅದರಲ್ಲಿ ಮುಖ್ಯವಾದುದ್ದು ಹಳ್ಳಿಗಳ ಮೂಲೆ ಮೂಲೆಗಳಲ್ಲಿ ಪ್ರಚಲಿತವಿರುವ ಜನಪದ ಆಟಗಳು. ಈ ಆಟಗಳು ನಮ್ಮ ಪರಂಪರೆ, ಸಂಸ್ಕøತಿಯ ದ್ಯೋತಕಗಳು. ಆದಿಮಾನವನ ಕೈಕಾಲು ಚಲನೆಗಳು ರೂಪುಗೊಂಡಂದಿನಿಂದಲೇ ಜನಪದ ಆಟಗಳು ಮೈತಳೆದಿವೆ. ನಮ್ಮ ದೈಹಿಕ ಹಾಗೂ ಮಾನಿಸಿಕ ಚಟುವಟಿಕೆಗಳು ಈ ರೀತಿಯಲ್ಲಿ ಆಟಕ್ಕೆ ಹೊಂದಿಕೊಂಡಿದ್ದರಿಂದಲೇ ಬದುಕಿನ ಎಲ್ಲಾ ಕಾರ್ಯಗಳನ್ನು ಆಟದಂತೆ ಕಾಣುವ ಮನೋಭಾವವೂ ನಮಗಿದೆ. ಈ ಕಾರಣಕ್ಕೇ ಕನ್ನಡ ಭಾಷಾ ಕ್ರಿಯಾಪದಗಳು ಕುಣಿದಾಟ, ನಲಿದಾಟ, ಓಡಾಟ, ಹೊಡೆದಾಟ, ಮೆರದಾಟ, ಹರಿದಾಟ ಹೀಗೆ ವಿಪುಲ ಸಂಖ್ಯೆಯಲ್ಲಿ "ಅಟ"ವನ್ನು ಒಳಗೊಂಡಿವೆ.ಹೀಗಾಗಿ ನಮ್ಮ ಗ್ರಾಮೀಣ ಕ್ರೀಡೆಗಳು ಮಾನವ ಜೀವಿಗೆ ಮನರಂಜನೆ ಬೇಕನಿಸಿದ ಕಡೆಗಳಲ್ಲೆಲ್ಲ ವಿವಿಧ ರೀತಿಗಳಲ್ಲಿ ವಿವಿಧ ರೂಪಗಳಲ್ಲಿ ಮೈದಳೆದಿವೆ. ಹಾಗೆ ನೋಡುವುದಾದರೆ ಇಂದಿನ ಆಧುನಿಕ ಕ್ರೀಡೆಗಳ ಮೂಲದ್ರವ್ಯವೂ ಈ ಜನಪದ ಆಟಗಳೇ. ಹಣ ವೆಚ್ಚ ಮಾಡಿ ಸಾಮಾಗ್ರಿ ತಂದು ಆಡು ಎನ್ನುವುದಕ್ಕಿಂತ ಸುಲಭವಾಗಿ ಕೈಗಟುಕುವ ಸಲಕರಣೆಗಳ ಮೂಲಕವೇ ಮನೆಯ ಒಳಗ ಹೊರಗೆ ಆಡಲಾಗುವ ನಮ್ಮ ಗ್ರಾಮೀಣ ಆಟಗಳಿಗೆ ಸರಿಸಾಟಿ ಎಂಬುದೇ ಇಲ್ಲ. ಇಂಥ ಪಾರಂಪರಿಕ ಆಟಗಳಿಗೆ ಹೊಸ ಮೆರುಗು ನೀಡುವ ಉದ್ದೇಶದಿಂದ ಈ ವರ್ಷದಿಂದ ಗ್ರಾಮೀಣ ಕ್ರೀಡೋತ್ಸವ ಆಚರಿಸಲಾಗುತ್ತಿದೆ. ಈಗ ಪ್ರಾಯೋಗಿಕವಾಗಿ ಈ ಕೆಳ ಕಾಣಿಸಿದ ಆಟಗಳನ್ನು ಆಯ್ದುಕೊಂದು ಜಿಲ್ಲೆಯಾದ್ಯಂತ 21 ಗ್ರಾಮೀಣ ಕೇಂದ್ರಗಳಲ್ಲಿ ಏಕ ಕಾಲದಲ್ಲಿ "ಗ್ರಾಮೀಣ ಕ್ರೀಡೋತ್ಸವ" ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸರ್ವರ ಹಾರ್ದಿಕ ಬೆಂಬಲ ಅತಿ ಅವಶ್ಯಕ. ಆಟದಲ್ಲಿ ಭಾಗವಹಿಸುವ ಸ್ಪಧಿಗಳು ಸ್ಥಳದಲ್ಲೇ ಅರ್ಧ ಗಂಟೆ ಮೊದಲು ಆಗಮಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಒಂದು ಆಟದಲ್ಲಿ ಬಹುಮಾನ ಪಡೆದವರು ಮುಂದಿನ ಆಟಗಳನ್ನು ಉಳಿದವರಿಗೆ ಬಿಟ್ಟುಕೊಡಲು ಕೋರಲಾಗಿದೆ.
ಕ್ರ. ಸಂ
ವಿವರ
ಆಟದ ವಿವರ
1
16 ವರ್ಷ ಮೇಲ್ಪಟ್ಟ ಪುರುಷರು
ಗೋಣಿ ಚೀಲ ಓಟ, ಮೂಟೆ ಹೊರೆ ಓಟ, ಹಿಮ್ಮುಖ ನಡಿಗೆ
2
16 ವರ್ಷ ಮೇಲ್ಪಟ್ಟ ಮಹಿಳೆಯರು
ರಂಗೋಲಿ, ನೀರು ಹೊರೋ ಸ್ಪರ್ಧೆ, ಸಂಗೀತ ಕುರ್ಚಿ
3
16 ವರ್ಷ ಒಳಗಿನ ಗಂಡು ಮಕ್ಕಳು
ಸ್ಲೋ ಸೈಕಲ್ ರೇಸ್, ಕುಂಟು ಮುಟ್ಟಾಟ.
4
16 ವರ್ಷ ಒಳಗಿನ ಹೆಣ್ಣು ಮಕ್ಕಳು
ಸಂಗೀತ ಕುರ್ಚಿ, ಕುಂಟು ಮುಟ್ಟಾಟ.
ಸರ್ವರೂ ಉತ್ಸಾಹದಿಂದ ಭಾಗವಹಿಸಲು ಕೋರಲಾಗಿದೆ.
ವಿಜೇತರಿಗೆ ಪ್ರಥಮ ಬಹುಮಾನ ರೂ.1000/- ದ್ವಿತೀಯ ರೂ.750/- ತೃತೀಯ ರೂ.500/-ಬುಹುಮಾನ ಕೊಡಲಾಗುವುದು.

  

No comments:

Post a Comment