ಅಂತರ್ ರಾಷ್ಟ್ರೀಯ ಮಹಿಳಾ ದಿನದ ಸಂಧರ್ಭದಲ್ಲಿ ಪ್ರಧಾನ ಮಂತ್ರಿ ಯವರ ಸಂದೇಶ
ಅಂತರ್ ರಾಷ್ಟ್ರೀಯ ಮಹಿಳಾ ದಿನದ ಸಂಧರ್ಭದಲ್ಲಿ ನಾನು ಧೈರ್ಯಶಾಲೀ ಹಾಗೂ ಸಾಧನೆ ಮಾಡಿದ ಮಹಿಳೆಯರಿಗೆ ನಮಸ್ಕರಿಸ ಬಯಸುತ್ತೇನೆ .
ಅಭಿವೃದ್ಧಿಯ ನಮ್ಮ ಹಾದಿಯಲ್ಲಿ ಮಹಿಳೆಯರನ್ನು ನಮ್ಮ ಸಮನಾದ ಹಾಗೂ ಜತೆಗೂಡಿದ ಪಾಲುದಾರ ರೆಂಬ ನಮ್ಮ ನಂಬುಗೆಯನ್ನು ಪುನರ್ ಉಚ್ಚರಿಸ ಬಯಸುತ್ತೇನೆ . ನಮ್ಮ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ , ಅವರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರ ಬಯಸಿದೆ . ಇದು ಭಾರತದ ವಿಕಾಸ ದ ಕೇಂದ್ರ ಅಂಶ . ಎಲ್ಲ ನಾಗರೀಕjUÉ ಅವಕಾಶ ,ಸೂಕ್ತ ಗೌರವ ದೊರಕಬೇಕೆಮ್ಬುದು ನಮ್ಮ ಆಶಯ .
"ಬೇಟಿ ಬಚಾವೋ , ಬೇಟಿ ಪಡಾವೋ" ಯೋಜನೆ ಹೆಣ್ಣು ಮಗುವಿನ ಕುರಿತ ನೋಟದಲ್ಲಿ ಬದಲಾವಣೆ ಹಾಗೂ ಆಕೆಯ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ಬಯಸುತ್ತದೆ. ಸುಕನ್ಯಾ ಸಮೃದ್ದಿ ಯೋಜನೆ ಯುವತಿಯರ ಮದುವೆ ಹಾಗೂ ಶಿಕ್ಷಣ ಕ್ಕೆ ಬೆಂಬಲ ನೀಡುತ್ತದೆ. ಮುದ್ರಾ ಬ್ಯಾಂಕು ಸಾವಿರಾರು ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯನ್ನು ಒದಗಿಸುತ್ತದೆ .
ಇತ್ತೀಚಿಗೆ ಮಂಡಿಸಲಾದ ಕೇಂದ್ರ ಮುಂಗಡ ಪತ್ರವು ಹಲವಾರು ಭಾರೀ ಯೋಜನೆಗಳನ್ನು ಪ್ರಸ್ತಾಪಿಸಿದೆ .ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನಾ , ಪ್ರಧಾನ ಮಂತ್ರಿ ಜೀವನ ವಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯಂಥಹ ಸಾಮಾಜಿಕ ಸುರಕ್ಷಾ ಯೋಜನೆಗಳು ಮಹಿಳೆಯರಿಗೆ ದೊಡ್ಡ ರೀತಿಯಲ್ಲಿ ಸಹಾಯಕ ವಾಗಲಿವೆ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಬಗ್ಗೆ ಕೇಳಿದಾಗಲೆಲ್ಲ ಅವಮಾನದಿಂದ ನಾವು ತಲೆ ತಗ್ಗಿಸುವನ್ಥಾಗುತ್ತದೆ .ಎಲ್ಲ ರೀತಿಯ ಮಹಿಳಾ ತಾರತಮ್ಯ ಹಾಗೂ ದೌರ್ಜನ್ಯದ ವಿರುದ್ದ ನಾವು ಹೆಗಲಿಗೆ ಹೆಗಲು ಕೊಟ್ಟು ಹೋರಾಡಬೇಕು . ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಲು , ನ್ಯಾಯಿಕ ಸಹಾಯ ,ಸಲಹೆ -ಸಹಕಾರ ಸೌಲಭ್ಯಗಳು ಸಿಗುವ "ಒಂದೇ ಸೂರಿನ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸು ತ್ತಿದೆ . ೧೮೧ ಸಂಖ್ಯೆಯ ಮೊಬೈಲ್ ಸಹಾಯವಾಣಿಯನ್ನು ಸರ್ಕಾರ ಆರಂಭಿಸುತ್ತಿದ್ದು ,ಅದು ಮಹಿಳೆಯರಿಗೆ ಸಹಾಯ ಒದಗಿಸಲಿದೆ.
ನಮ್ಮ ನೋಟವನ್ನು ಸಾಕಾರ ಗೊಳಿಸುವತ್ತ ಎಲ್ಲರ ಬೆಂಬಲವನ್ನು ನಾನು ಕೋರುತ್ತಿದ್ದೇನೆ .
No comments:
Post a Comment