ಸಲ್ಮಾನ್‍ಖಾನ್ ಈಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾಗುತ್ತಿದ್ದಾನೆ.
ಸಲ್ಮಾನ್‍ಖಾನ್ ಈಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಾಗುತ್ತಿದ್ದಾನೆ. ಇಂಗ್ಲಿಷ್, ಮಲೆಯಾಳಿ, ಮರಾಠಿ, ಪಂಜಾಬಿ, ಗುಜರಾತಿ, ಫ್ರೆಂಚ್, ಅರಬ್, ತುಳು, ಬಂಗಾಲಿ, ಭೋಜಪುರಿ, ರಾಜಸ್ತಾನಿ, ತೆಲುಗು, ತಮಿಳು ಸೇರಿದಂತೆ 18 ಭಾಷೆಗಳಿಗೆ ಹಿಂದಿಯಿಂದ ಡಬ್ ಆಗುತ್ತಿರುವ ಈ ಚಿತ್ರದ ಡಬ್ಬಿಂಗ್ ಕಾರ್ಯ ಮುಂಬೈ ಹಾಗೂ ಚೆನ್ನೈ ಸ್ಟುಡಿಯೋಗಳಲ್ಲಿ ಸಾಗುತ್ತಿದೆ. ಆನಂದ್ ಅಪ್ಪುಗೋಳ ನಿರ್ಮಾಣದ ಈ ಚಿತ್ರ ಏಪ್ರಿಲ್ ಮಾಸಾಂತ್ಯದಲ್ಲಿ ತೆರೆ ಕಾಣಲಿದೆ.
ಕನ್ನಡದಲ್ಲಿ ಚೆನ್ನಮ್ಮಳ ಪಾತ್ರವಹಿಸಿದ್ದ ಜಯಪ್ರದಾ ಹಿಂದಿಯಲ್ಲೂ ಅದೇ ಪಾತ್ರದಲ್ಲಿ ಮಿಂಚಲಿದ್ದಾರೆ. ಯುದ್ಧ ಸನ್ನಿವೇಶಗಳನ್ನು ಜೈಪುರ ಅರಮನೆಯಲ್ಲಿ ಶೂಟಿಂಗ್ ಮಾಡಲಾಗುತ್ತಿದ್ದು, ಇನ್ನುಳಿದ ಭಾಷೆಗಳಲ್ಲಿ ದರ್ಶನ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರವನ್ನು ಡಬ್ಬಿಂಗ್ ಮಾಡಲಾಗುತ್ತಿದೆ. ಇದೇ ವರ್ಷ ಸಂಗೊಳ್ಳಿ ರಾಯಣ್ಣ ಸಿನಿಕಂಬೈನ್ಸ್ `ಬಾಳುಮಾಮಾ' ಹೆಸರಿನ ದೇವರ ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಆ ಬಳಿಕ ವೀರ ಸಿಂಧೂರಲಕ್ಷ್ಮಣ,
ವೀರರಾಣಿ ಕಿತ್ತೂರ ಚೆನ್ನಮ್ಮ ಚಿತ್ರಗಳನ್ನು ನಿರ್ಮಿಸಿ ಈ ವರ್ಷದ ಅಂತ್ಯದಲ್ಲಿ ಬಿಡುಗಡೆ ಮಾಡುವ ಆಸೆ ಅಪ್ಪುಗೋಳ ಅವರದ್ದು. ಅಷ್ಟೇ ಅಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುದಂತೆ ಮಾನಸಿಕ ಸ್ಥೈರ್ಯ ತುಂಬುವಂತಹ ಚಿತ್ರವೊಂದನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುಂದಿನ ವರ್ಷ ನಿರ್ಮಾಣ ಮಾಡುವ ಉದ್ದೇಶ ನಿರ್ಮಾಪಕರದ್ದು. ಮಾನವ ಕುಲಕ್ಕೆ ಉತ್ತಮ ಸಂದೇಶ ನೀಡುವ, ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರಕ್ಕೆ ಸರ್ವತಯಾರಿ ನಡೆದಿದ್ದು, ಚಿತ್ರದ ಟೈಟಲ್ ಸದ್ಯಕ್ಕೆ ಸಸ್ಪೆನ್ಸ್ ಅಂತೆ.
No comments:
Post a Comment