ಪೊಲೀಸ್ ಠಾಣೆಯಲ್ಲಿರುವ ವಾಹನಗಳನ್ನು ಪಡೆದುಕೊಳ್ಳಲು ಮಾಲೀಕರಿಗೆ ಮನವಿ
ಮಂಡ್ಯ, ಮಾ. ನಾಗಮಂಗಲ
ಟೌನ್ ಪೊಲೀಸ್ ಠಾಣೆಯಲ್ಲಿ ವಿವಿಧ ಮಾದರಿ 18 ದ್ವಿಚಕ್ರ ವಾಹನಗಳಿದ್ದು, ಮಾಲೀಕರು ಪತ್ತೆ ಆಗದಿರುವುದರಿಂದ ವಿಲೇವಾರಿಯಾಗದೆ ನಿಂತಿವೆ. ಈ ವಾಹನಗಳ ಮಾಲೀಕರು ವಾಹನಗಳ ಆರ್.ಸಿ. ದಾಖಲಾತಿಗಳನ್ನು ವಾಹನ ಪಡೆದುಕೊಳ್ಳಬಹುದು ಎಂದು ನಾಗಮಂಗಲ ಟೌನ್ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಹನಗಳ ವಿವರ ಇಂತಿದೆ.
ಸಿಕೆಎನ್ 8291 ಟಿವಿಎಸ್ 50, ಕೆಎ 09 ಆರ್ 2671 ಕಿನೆಟಿಕ್, ಕೆಎ02 ಆರ್ 5375 ಟಿವಿಎಸ್ ಎಕ್ಸ್‍ಎಲ್ 50, ಕೆಎ 03 ಇ 4859 ಟಿವಿಎಸ್ ಎಕ್ಸ್‍ಎಲ್ 50, ಕೆಎ09 ಇ 3047 ಕಿನೆಟಿಕ್ ಲೂನಾ ಸೂಪರ್, ಕೆಎ 05 ಇಬಿ 6624 ಟಿವಿಎಸ್ ವಿಕ್ಟರ್ ಜಿ.ಎಲ್, ಕೆಎ 02 ವಿ 8340 ಟಿವಿಎಸ್ ಚಾಂಪ್, ಸಿಕೆಡಿ 6381 ಟಿವಿಎಸ್ ಎಕ್ಸ್‍ಎಲ್, ಕೆಎ 01 ಇಜೆ 9181 ಟಿವಿಎಸ್ ಎಕ್ಸ್‍ಎಲ್ ಹೆವಿಡ್ಯೂಟಿ, ಕೆಎ 14 ಜೆ 897 ಹೀರೋ ಹೊಂಡಾ ಸಿಡಿ100, ಕೆಎ 02 ಇವಿ 9427 ಬಜಾಜ್ ಸಿಟಿ 100, ಕೆಎ 02 ಜೆ 4202 ಹೀರೋ ಹೊಂಡಾ ಸಿಡಿ 100 ಡಿಲೆಕ್ಸ್, ಕೆಎ 45 ಕೆ 7641 ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್, ಕೆಎ 02 ಇಯು 886 ಟಿವಿಎಸ್ ವಿಕ್ಟರ್ ಜಿ.ಎಕ್ಸ್, ಕೆಎ 51 ಎಲ್ 8115 ಬಜಾಬ್ ಪಲ್ಸರ್ 150, ಕೆಎ 41 ಹೆಚ್ 1624 ಟಿವಿಎಸ್ ಸ್ಟಾರ್‍ಸಿಟಿ ಡಿಎಲ್‍ಎಕ್ಸ್, ಕೆಎ 20 ಡಬ್ಲ್ಯು 5149 ಹೊಂಡಾ ಆಕ್ಟೀವಾ, ರಿಜಿಸ್ಟ್ರೇಷನ್ ಇಲ್ಲದ ಒಂದು ಟಿವಿಎಸ್ ಚಾಂಪ್.
ಈ ವಾಹನಗಳ ಮಾಲೀಕರು ಹೆಚ್ಚಿನ ಮಾಹಿತಿಗಾಗಿ ನಾಗಮಂಗಲ ಟೌನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಅವರು ಮನವಿ ಮಾಡಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ತರಬೇತಿ
ಸಹಾಯಕ ಪ್ರಾಧ್ಯಾಪಕರ ನೇಮಕ ಪರೀಕ್ಷೆಗೆ ‘ಕರಾಮುವಿ’ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಮುಂದಿನ ಮೇ ತಿಂಗಳ ಕೊನೆಯ ವಾರದಲ್ಲಿ ಕರ್ನಾಟಕ ಸರ್ಕಾರ ನಡೆಸಲು ಉದ್ದೇಶಿಸಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರÀ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ 40 ದಿನಗಳ ತರಬೇತಿ ನೀಡಲು ನಿರ್ಧರಿಸಲಾಗಿದೆ.
ತರಬೇತಿಯಲ್ಲಿ ಕಡ್ಡಾಯ ಕನ್ನಡ, ಕಡ್ಡಾಯ ಇಂಗ್ಲಿಷ್ ಮತ್ತು ಸಾಮಾನ್ಯ ಅಧ್ಯಯನ ವಿಷಯಗಳಿಗೆ ಆದ್ಯತೆ ನೀಡಲಾಗುವುದು. ದಾಖಲಾತಿ ಅವಧಿಯನ್ನು ದಿನಾಂಕ: 10.04.2015ರ ವರೆÀಗೆ ವಿಸ್ತರಿಸಲಾಗಿದ್ದು,ಆಸಕ್ತರು ಈ ದಿನಾಂಕಗೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಬೆಳಿಗ್ಗೆ 10.00 ಗಂಟೆ ಯಿಂದ ಸಂಜೆ 5.00 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಪಿ.ಎಸ್.ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 0821-2515944 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.
*****
No comments:
Post a Comment