ಗಂಡನ ಕೊಲೆ ಮಾಡಿದ್ದ ಪತ್ನಿ ಸೇರಿ ಮೂವರ ಬಂಧನ
ಮೈಸೂರು,ಮಾ.24- ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನು ಕೊಲೆಮಾಡಿದ್ದ ಆರೋಪದ ಮೇಲೆ ಪತ್ನಿ ಸೇರಿ ಮೂವರನ್ನು ಟಿ. ನರಸೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲ್ಲೂಕು ಮಾಂಬಳ್ಳಿ ಗ್ರಾಮ ವಾಸಿ ಲೀಲಾವತಿ, ಆಕೆಯ ಪ್ರಿಯಕರ ಸಿದ್ದರಾಜು ಮತ್ತು ಸಹಚರ ರೇವಣ್ಣ ಎಂಬುವವರೇ ಬಂಧಿತ ಕೊಲೆ ಆರೋಪಿಗಳಾಗಿದ್ದಾರೆ. ಲೀಲಾವತಿ ಕಳೆದ 8 ವರ್ಷಗಳ ಹಿಂದೆ ಮಾಂಬಳ್ಳಿಯ ಬಸವರಾಜು ಎಂಬಾತನನ್ನು ವಿವಾಹವಾಗಿದ್ದಳು, ಇವರಿಗೆ 6ವರ್ಷದ ಹೆಣ್ಣುಮಗಳು ಇದ್ದಾಳೆ, ಲೀಲಾವತಿಗೆ ಅದೇಗ್ರಾಮದ ಸಿದ್ದರಾಜು ಪರಿಚಯವಾಗಿ ಆತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು, ಈ ವಿಷಯ ಪತಿ ಬಸವರಾಜನಿಗೆ ಗೊತ್ತಾಗಿ ಹೆಂಡತಿ ಜೊತೆ ಜಗಳವಾಡುತ್ತಿದ್ದ , ಪ್ರತಿದಿನ ಇಬ್ಬರ ನಡುವೆ ಗಲಾಟೆ ನಡೆ3ಯುತ್ತಿತ್ತು. ಇದನ್ನು ಸಹಿಸಿಕೊಳ್ಳದ ಲೀಲಾವತಿ ಇತ್ತೀಚೆಗೆ ಕೆಲ ದಿನಗಳ ಹಿಂದೆ ತನ್ನ ಪ್ರಿಯಕರ ಸಿದ್ದರಾಜುಗೆ ಹೇಳಿ ಕೊಲೆ ಸಂಚು ರೂಪಿಸಿದ್ದಾಳೆ, ಸಿದ್ದರಾಜು ಪ್ರಿಯತಮೆಯ ಮಾತುಕೇಳಿ ತನ್ನ ಸ್ನೇಹಿತ ರೇವಣ್ಣನನ್ನು ಜೊತೆಗೆ ಸೇರಿಸಿಕೊಂಡು ಆಯುಧಗಳಿಂದ ಹೊಡೆದು ಕೊಲೆಮಾಡಿ ತಂದು ಟಿ.ನರಸೀಪುರದ ಕಪಿಲಾ ನದಿಯ ಸೇತುವೆಯ ಕೆಳಗೆ ಬಿಸಾಕಿ ತಲೆಮರೆಸಿಕೊಂಡಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಟಿ.ನ.ಪುರ ಪೊಲೀಸರು, ಮೊದಲು ಸತ್ತವ್ಯಕ್ತಿಯ ಗುರುತು ಗ್ರಾಮವನ್ನು ಪತ್ತೆಹಚ್ಚಿ ತನಿಖೆ ನಡೆಸಿದಾಗ ಬಸವರಾಜುವಿನ ಮಗಳು ನೀಡಿದ ಸುಳುವಿನ ಮೇರೆಗೆ ಆರೋಪಿಗಳನ್ನು ಪತ್ಯೆಹಚ್ಚಿ ಅವರುಗಳನ್ನು ಬಂಧಿಸಿ ಕರೆತಂದು ವಿಚಾರಿಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿರುತ್ತಾರೆ ಎಂದು ಹೇಳಲಾಗಿದೆ.
ಮಹಿಳೆಯ ಚಿನ್ನದ ಸರ ಅಪಹರಣ
ಮೈಸೂರು,ಮಾ.24- ವಿಳಾಸ ಕೇಳೂವ ನೆಪ0ದಲ್ಲಿ ಬಂದ ಸರಗಳ್ಳರು ಮಹಿಳೆಯೊಬ್ಬರ ಕತ್ತಿನಲ್ಲಿದ್ದ 100ಗ್ರಾಂ ತೂಕದ ಚಿನ್ನದ ಸರಕಿತ್ತು ಪರಾರಿಯಾಗಿರುವ ಘಟನೆ ಮೈಸೂರಿನ ನೇತಾಜಿ ನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಅದೇ ಬಡಾವಣೆಯ ವಾಸಿ ಸುಶೀಲ(40) ಎಂಬುವರೇ ಸರ ಕಳೆದುಕೊಂಡ ಮಹಿಳೆಯಾಗಿದ್ದಾರೆ. ಇಂದು ಬೆಳಿಗ್ಗೆ ಸುಮಾರು 9ರ ಸಮಯದಲ್ಲಿ ಮನೆಯಮುಂದೆ ಇದ್ದ ಸುಶೀಲ ಬಳಿಗೆ ಬಂದ ಆಗಂತುಕರು ಯಾವುದೋ ವಿಳಾಸ ಕೇಳಿದ್ದಾರೆ, ನಂತರ ಆಕೆಯನ್ನು ಬೆದರಿಸಿ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತು ಕ್ಷಣಾರ್ಧದಲ್ಲಿ ಪರಾರಿಯಗಿದ್ದಾರೆ ಇದರಿಂದ ಆತಂಕಗೊಂಡ ಮಹಿಳೆ ಕಿರುಚಿಕೊಂಡು ಅಕ್ಕ ಪಕ್ಕದವರಿಗೆ ವಿಷಯ ತಿಳಿಸಿ ನಂತರ ತಮ್ಮ ಮನೆಯವರ ಮುಖಾಂತರ ನಜರ್‍ಬಾದ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರು ದಾಖಲಿಸಿ ಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
----------------------------------------------------------------
ಮಾ.26ರ ಮದ್ಯರಾತ್ರಿಯಿಂದ ಆಟೊರಿಕ್ಷಾ ಬಂದ್
ಮೈಸೂರು,ಮಾ.24- ಮೈಸೂರು ಜಿಲ್ಲಾಡಳಿತ ಹಾಗೂ ಆರ್.ಟಿ.ಒ. ಅಧಿಕಾರಿಗಳು ನಗರದೊಳಗೆ ನ್ಯಾನೋ ಟ್ಯಾಕ್ಸಿ ಕಾರುಗಳನ್ನು ಓಡಿಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಮಾ. 26ರ ಮಧ್ಯರಾತ್ರಿಯಿಂದ 27ರ ಮದ್ಯರಾತ್ರಿವರೆಗೆ ನಗರದ ಎಲ್ಲಾ ಆಟೋರಿಕ್ಷಾಗಳನ್ನು ರಸ್ತೆಗಿಳಿಯಲು ಬಿಡದೆಬಂದ್ ಆಟೋ ಬಂದ್ ನಡೆಸಲಾಗುವುದು ಎಂದು ಆಟೋ ಸಂಘದ ಗೌ. ಆಧ್ಯಕ್ಷ ಎನ್. ಲಕ್ಷಣ್ಮ್ ತಿ9ಳಿಸಿದರು.
ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಗ್ಗೆ ಹಲವಾರು ಬಾರಿ ಜಿಲ್ಲಾಧಿಕಾರಿ ಜೊತೆ ಸಮಾಲೋಚನೆ ನಡೆಸಿ ಈ ಆದೇಶ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದರೂ ಸಹ ಜಿಲ್ಲಾ ಧಿಕಾರಿಗಳು ಈ ಬಗ್ಗೆ ಮೃದು ಧೋರಣೆ ಅನುಸರಿಸುತ್ತಿದ್ದಾರೆ, ಯಾವುದೆ ಕಾರಣಕ್ಕೂ ಈ ಆದೇಶ ಹಿಂಪ0ಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ,
ಓಲಾ, ಟ್ಯಾಕ್ಸಿ ಪಾರ್ ಸ್ಯೂರ್, ಹುಂಬರ್ ನಂತಹ ಟ್ಯಾಕ್ಸಿಗಳು ನಗರದಿಂದ 25 ಕಿ.ಮೀ. ದೂರಕ್ಕೆ ಮಾತ್ರ ಕೆರೆದೊಯ್ಯಲು ಅವಕಶವಿರುತ್ತದೆ ಆದರೆ ಇವರುಗಳು ನಗರದೊಳಗೆ ಪ್ರಯಾಣಿಕರನ್ನು ಕರೆದೊಯ್ಯುವುದರಿಂದ ಸ್ಥಳೀಯ ಆಟೋಚಾಲಕರಿಗೆ ತೊಮದರೆಯಾಗುತ್ತಿದೆ, ಇಲ್ಲಿ 35 ಸಾವಿರ ಆಟೋ ಚಾಲಕರಿದ್ದು, ಸುಮಾರು ಒಂದು ಲಕ್ಷ ಕುಟುಂಬಗಳು ಇದನ್ನೇ ನಂಬಿ ಜೀವನ ಸಾಗಿಸುತ್ತಿವೆ ಆದ್ದರಿಮದ ಜಿಲ್ಲಾಧಿಕಾರಿಗಳು ಕೂಡಲೇ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಆಟೊಸಂಘದ ಪ್ರತಿನಿಧಿಗಳಾದ ಎಡ್ವಿನ್‍ವಿಲ್ಸನ್, ಬಿ.ಟಿ.ರಾಜು ಹಾಗೂ ಆಟೋಚಾಲಕರುಗಳು ಸಂಘದ ಪದಾಧಿಕಾರಿಗಳು ಉಪಸ್ಥೀತರಿದ್ದರು.

No comments:
Post a Comment