Thursday, 26 March 2015

ಟೀಂ ಇಂಡಿಯಾಗೆ 329 ರನ್ ಗಳ ಬೃಹತ್ ಗುರಿ


ಸಿಡ್ನಿ: 
ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ 329 ರನ್ ಗಳ ಬೃಹತ್ ಮೊತ್ತ ನೀಡಿದೆ.

ಭಾರತ ಆಸ್ಟ್ರೇಲಿಯಾ ನಡುವಿನ ಹೈವೋಲ್ಟೋಜ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಆಘಾತದಿಂದ ಚೇತರಿಸಿಕೊಂಡಿದೆ. ಆರಂಭಿಕ ಆಟಗಾರ ಫಿಂಚ್ ಮತ್ತು ಸ್ಮಿತ್ ಶತಕದ ಜತೆಯಾಟ ಆಸ್ಟ್ರೇಲಿಯಾ ಉತ್ತಮ ರನ್ ಪೇರಿಸಲು ಸಾಧ್ಯವಾಗಿದೆ.

ಆರಂಭಿಕರಾದ ಡೇವಿಡ್ ವಾರ್ನರ್ 12 ರನ್ ಗಳಿಸಿದರೆ ಫಿಂಚ್ 81 ರನ್ ಗಳಿಸಿ ಔಟಾದರು. ಸ್ಫೋಟಕ ಬ್ಯಾಟ್ಸ್ ಮನ್ ಸ್ಮಿತ್ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದು, 93 ಎಸೆತಗಳಲ್ಲಿ 105 ಗಳಿಸಿದರು.

ಬಳಿಕ ಮ್ಯಾಕ್ಸ್ ವೆಲ್ 23, ವಾಟ್ಸನ್ 28, ಕ್ಲಾರ್ಕ್ 10 ಪ್ಲುಕ್ನರ್ 21 ರನ್ ಗಳಿಸಿ ಔಟಾದರೆ, ಹಡ್ಡಿನ್ ಅಜೇಯ 7 ರನ್ ಹಾಗೂ ಜಾನ್ಸನ್ 27 ರನ್ ಗಳಿಸಿದ್ದಾರೆ.

ಭಾರತ ಪರ ಉಮೇಶ್ ಯಾದವ್ 4 ವಿಕೆಟ್ ಪಡೆದರೆ, ಮೋಹಿತ್ ಶರ್ಮಾ 2 ವಿಕೆಟ್ ಹಾಗೂ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ
.

No comments:

Post a Comment