ಮಂಡ್ಯ :ಕೇಂದ್ರ ಸರ್ಕಾರವು ತರುತ್ತಿರುವ ಭೂಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ಹೋರಾಟಕ್ಕೆ ವೇದಿಕೆಯನ್ನು ಸಜ್ಜುಗೊಳಿಸಿರುವುದಾಗಿ ಮಾಜಿ ಸಂಸದ ಹೆಚ್.ವಿಶ್ವನಾಥ್ ತಿಳಿಸಿದರು.ಮಂಡ್ಯ ಪ್ರವಾಸಿಮಂದಿರದಲ್ಲಿ ಏರ್ಪಡಿಸಿದ್ದ ಭೂಸ್ವಾಧೀನ ತಿದ್ದುಪಡಿ ವಿರೋಧಿ ಸಮಿತಿಯವರು ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ಮಾರ್ಚ್ ೧೧ರಿಂದ ಮೈಸೂರು ಜಿಲ್ಲೆಯ ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಹುಟ್ಟಿತು ಕಲ್ಲಹಳ್ಳಿಯಿಂದ ಬೆಂಗಳೂರಿನವರೆಗೆ ಜಾತವನ್ನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ರಾಜ್ಯವು ಸೇರಿದಂತೆ ನವದೆಹಲಿ ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ನೂತನ ಭೂಸ್ವಾಧೀನ ಸುಗ್ರೀವಾಜ್ಙೆ ವಿರುದ್ಧ ಮಾಡಲಾಗುತ್ತದೆ.ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.ಸಮಿತಿಯ ಮತ್ತೊಬ್ಬ ಮುಖಂಡ ಎಂ.ಲಷ್ಮಣ ಮಾತನಾಡಿ ಮಸೂದೆ ಅಂಗೀಕಾರವಾದರೆ ಮುಂದಿನ ದಿನಗಳಲ್ಲಿ ಸರ್ಕಾರವೇ ಭೂಮಿಯ ಒಡೆಯನಾಗತ್ತದೆ.೩೦ದಿನಗಳಲ್ಲಿ ಕೃಷಿ ಭೂಮಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.ರೈತ ಮುಖಂಡರಾದ ರಾಮಕೃಷ್ಣಯ್ಯ,ನಾಗೇಂದ್ರ,ಕೋಣಸಾಲೆ ನರಸರಾಜು,ಬೋರೇಗೌಡ,ಟಿ.ಎಸ್.ಸತ್ಯಾನಂದ,ನರಸಪ್ಪ ಹಗ್ಗಡೆ,ಕೊತ್ತತ್ತಿ ಸಿದ್ದಪ್ಪ,ಎಲ್.ಸಂದೇಶ್ ಪಾಲ್ಗೊಂಡಿದ್ದರು.
No comments:
Post a Comment