ಜಾತಿಗಣತಿ ನಂತರ ಬಲಿಜ ಸಮುದಾಯ 2ಎ ಗೆ ಸೇರ್ಪಡೆ.
ಬೆಂಗಳೂರು: ಬಲಿಜ ಸಮುದಾಯವನ್ನು 2 (A) ಸೇರಿಸಬೇಕೆಂಬ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಲು ಮುಂದಾಗಿದ್ದು, ಜಾತಿಗಣತಿ ಬಳಿಕ ಈ ಸಮುದಾಯವನ್ನು 2(ಎ)ಗೆ ಸೇರಿಸುವ ಕುರಿತು ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬಲಿಜ ಸಮುದಾಯದ ನಿಯೋಗದೊಂದಿಗೆ ಚರ್ಚೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ ಬಲಿಜ ಸಮುದಾಯಕ್ಕೆ ಶೈಕ್ಷಣಿಕ ಸಂಸ್ಥೆ
ಸ್ಥಾಪನೆಗೆ ನಿವೇಶನ ಹಾಗೂ ಅನುದಾನ ನೀಡಲು ಕ್ರಮ ಕೈಗೊಳ್ಳುವ ಭರವಸೆ ಯನ್ಕೂನೂಕೂಡ ನೀಡಿದ್ದಾರೆ ಎಂದು ತಿಳಿದುಬಂದಿದೆ. ಶಾಸಕ ಆರ್.ವಿ.ದೇವರಾಜ್ ನೇತೃತ್ವದಲ್ಲಿ ಬಲಿಜ ಸಂಘದ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು ಮತ್ತಿತರರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸಿದರು.
1995ರವರೆಗೂ ಬಲಿಜ ಸಮುದಾಯ 2(ಎ) ಅಡಿ ಮೀಸಲಾತಿ ಪಡೆಯುತ್ತಿತ್ತು. ಅನಂತರ ಇದನ್ನು ಕೈ ಬಿಡಲಾಗಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಶೈಕ್ಷಣಿಕ ಉದ್ದೇಶಕ್ಕಾಗಿ ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಬೇಕು. ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ತಪ್ಪಿಸಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಉದ್ದೇಶಕ್ಕೆ ಪ್ರವರ್ಗ 2(ಎ) ಅಡಿ ಮೀಸಲಾತಿ ಒದಗಿಸಬೇಕು ಎಂದು ಅವರ ಆಗ್ರಹಿಸಿದರು. ಜಾತಿ ಜನಗಣತಿ ನಂತರ ಎಲ್ಲ ಸಮುದಾಯದ ಆರ್ಥಿಕ ಸ್ಥಿತಿಗತಿ ತಿಳಿದು ಬರಲಿದ್ದು, ಅನಂತರ ಮೀಸಲಾತಿ ಪಟ್ಟಿಗೆ ಬಲಿಜ ಸಮುದಾಯವನ್ನು ಸೇರಿಸಲು ಪರಿಶೀಲನೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
No comments:
Post a Comment