Monday, 30 March 2015

ಮಂಡ್ಯ: ಮೈಷುಗರ್ ಬಾಯ್ಲರ್ ಬಳಿ ಕೆಲಸ ಮಾಡುತ್ತಿದ್ದ ಗುತ್ತಿಗೆ ನೌಕರನಿಗೆ ಬಿಸಿ ಹಬೆ ತಗುಲಿ ತೀವ್ರ ಸುಟ್ಟಗಾಯಗಳಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ನಗರದ ಎತ್ತಗದಹಳ್ಳಿ ಬೋರೆ ಬಡಾವಣೆಯ ತಿಮ್ಮೇಗೌಡ (42) ಎಂಬಾತನೇ ತೀವ್ರವಾಗಿ ಗಾಯಗೊಂಡಿರುವ ಗುತ್ತಿಗೆ ನೌಕರ.
ಕಳೆದ ಹಲವಾರು ವರ್ಷಗಳಿಂದ ಮೈಷುಗರ್ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬೋರೇಗೌಡ ನಿನ್ನೆ ರಾತ್ರಿ ಬಾಯ್ಲರ್ ಬಳಿ ಕೆಲಸ ನಿರ್ವಹಿಸುವಾಗ ಆಕಸ್ಮಿಕವಾಗಿ ಬಿಸಿ ಹಬೆ ತಗುಲಿ ತೀವ್ರವಾಗಿ ಸುಟ್ಟಗಾಯಗಳಿಗೊಳಗಾದ. ತಕ್ಷಣ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೈಷುಗರ್‍ನಲ್ಲಿ  ಕೂಲಿ ಕೆಲಸದಾಳುಗಳನ್ನು ಒದಗಿಸುವ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಬೋರೇಗೌಡ ಗಾಯಗೊಂಡ ಕಾರ್ಮಿಕ ತಿಮ್ಮೇಗೌಡನನ್ನು ಆಸ್ಪತ್ರೆಗೆ ಕರೆತಂದು ದಾಖಲಿಸಿ ನಂತರ ನಾಪತ್ತೆಯಾಗಿದ್ದಾರೆ. ಈವರೆವಿಗೂ ಅವರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾಗಿಲ್ಲ ಎಂದು ತಿಮ್ಮೇಗೌಡನ ಕಡೆಯವರು ಆರೋಪಿಸಿದ್ದಾರೆ.
ಕಾರ್ಖಾನೆ ಅಧಿಕಾರಿಗಳೂ ಸಹ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಸೌಜನ್ಯ ತೋರಿಲ್ಲ. ತೀವ್ರವಾಗಿ ಗಾಯಗೊಂಡಿರುವ ತಿಮ್ಮೇಗೌಡ ಕುಟುಂಬ ತೀರಾ ಬಡತನದಲ್ಲಿ ಬದುಕು ಸಾಗಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಕೊಡಿಸುವಲ್ಲಿ ವಿಫಲರಾಗಿದ್ದಾರೆ.

No comments:

Post a Comment