ಮಂಡ್ಯ ಮಾ. 11_ ದಿನಾಂಕಃ 14-02-2015 ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಸಂಗಮದ ಬಳಿ ಹೆಲಿಕಾಪ್ಟರ್‍ವೊಂದು ಕಂಡು ಬಂದಿದ್ದು, ಸದರಿ ಹೆಲಿಕಾಪ್ಟರ್ ಡೆಕ್ಕನ್ ಚಾಟರ್ಸ್ ಎಂಬ ಕಂಪನಿಗೆ ಸೇರಿದ್ದಾಗಿದ್ದು, ಅದು ದಿನಾಂಕಃ 14-02-2015 ರಂದು ಬೆಳಿಗ್ಗೆ 0850 ಗಂಟೆಗೆ ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟು ಮತ್ತೆ ಸುಮಾರು 1003 ಗಂಟೆಗೆ ಜಕ್ಕೂರು ವಿಮಾನ ನಿಲ್ದಾಣ ತಲುಪಿರುತ್ತದೆ. ಸದರಿ ಹೆಲಿಕಾಪ್ಟರ್‍ನಲ್ಲಿ ಇಬ್ಬರು ಪೈಲಟ್ ಹಾಗೂ ನಾಲ್ವರು ಪ್ರಯಾಣಿಕರಿರುತ್ತಾರೆ. ಸದರಿ ಹೆಲಿಕಾಪ್ಟರ್ ಏರ್‍ಟ್ರಾsಪಿsಕ್ ಕಂಟ್ರೋಲ್ ಮತ್ತು ಏರ್ ಡಿಪೆsನ್ಸ್ ಕ್ಲಿಯರೆನ್ಸ್ ಪಡೆದು, ಎಲ್ಲಾ ಅಗತ್ಯ ರಹದಾರಿಗಳನ್ನು ಪಡೆದಿರುತ್ತದೆ ಹಾಗೂ ಎಲ್ಲಾ ರೀತಿಯ ರಕ್ಷಣಾ ತಪಾಸಣೆಗೊಳಪಟ್ಟಿರುತ್ತದೆ. ಯಾವುದೇ ರೀತಿಯ ಆಕ್ಷೇಪಾರ್ಹ ವಸ್ತುಗಳು ಸದರಿ ಹೆಲಿಕಾಪ್ಟರ್‍ನಲ್ಲಿ ಇರಲಿಲ್ಲ.
No comments:
Post a Comment