ವಿಶ್ವಕಪ್೨೦೧೫. ಆಸ್ಟ್ರೇಲಿಯಾ ಮಡಿಗೆ
ಐದನೇ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದ ಕಾಂಗರೂ ಪಡೆ, ಫೈನಲ್ ನಲ್ಲಿ ಸರಣಾದ ಕೀವೀಸ್.
ಆಸ್ಟ್ರೇಲಿಯಾ-ನ್ಯೂಜಿಲೆಂಡ್
ಮೆಲ್ಬೋರ್ನ್: ಅತಿಥೇಯ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಿ 2015ನೇ ಸಾಲಿನ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿಹಿಡಿದೆ.
ನ್ಯೂಜಿಲೆಂಡ್ ನೀಡಿದ 183 ರನ್ ಗಳ ಸಾಧಾರಣ ಮೊತ್ತವನ್ನು ನಿರಾಯಾಸವಾಗಿ ಚೇಸ್ ಮಾಡಿದ ಕ್ಲಾರ್ಕ್ ಬಳಗ 32 ಓವರ್ ಗಳಲ್ಲಿಯೇ 3 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ಮುಟ್ಟಿತು. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ (45 ರನ್) ಸ್ಮಿತ್ (49 ರನ್) ಮತ್ತು ಆಸೀಸ್ ನಾಯಕ ಮೈಕೆಲ್ ಕ್ಲಾರ್ಕ್ ಅವರ ಆಕರ್ಷಕ ಅರ್ಧ ಶತಕ (74 ರನ್)ದ ನೆರವಿನಿಂದ ಆಸ್ಟ್ರೇಲಿಯಾ ತಂಡ 183 ರನ್ ಗಳನ್ನು ಗಳಿಸಿ ಗುರಿ ಮುಟ್ಟಿತು. ಆ ಮೂಲಕ ಐದನೇ ಬಾರಿಗೆ ಆಸಿಸ್ ಪಡೆ ವಿಶ್ವಕಪ್ ಅನ್ನು ತನ್ನ ಪಾಲಾಗಿಸಿಕೊಂಡಿದೆ. ಇನ್ನು ನ್ಯೂಜಿಲೆಂಡ್ ಪರ ಹೆನ್ರಿ 2 ವಿಕೆಟ್ ಪಡೆದರೆ, ಬೌಲ್ಟ್ 1 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಕೇವಲ 45 ಓವರ್ ಗಳಲ್ಲಿ 183 ರನ್ ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಎಲಿಯಟ್ ಮತ್ತು ಟೇಲರ್ ಅವರನ್ನು ಹೊರತು ಪಡಿಸಿದರೆ ಯಾವೊಬ್ಬ ಆಟಗಾರನೂ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ. ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಬರೋಬ್ಬರಿ 4 ಮಂದಿ ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದ್ದು, ನ್ಯೂಜಿಲೆಂಡ್ ಹಿನ್ನಗೆ ಕಾರಣವಾಯಿತು. ಈಡೀ ನ್ಯೂಜಿಲೆಂಡ್ ಇನ್ನಿಂಗ್ಸ್ ನಲ್ಲಿ ಎಲಿಯಟ್ ಮತ್ತು ಟೇಲರ್ ಅವರನ್ನು ಹೊರತು ಪಡಿಸಿ ನಾಯಕ ಮೆಕ್ಕಲಮ್ ಸೇರಿದಂತೆ ಉಳಿದ ಯಾವ ಆಟಗಾರ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ.
ನ್ಯೂಜಿಲೆಂಡ್ ಪರ ಆರಂಭಿಕರಾದ ಮಾರ್ಟಿನ್ ಗಪ್ಟಿಲ್ (15ರನ್), ಮೆಕ್ಕಲಮ್ (0) ಮತ್ತು ವಿಲಿಯಮ್ಸನ್ (12) ಬೇಗನೇ ಔಟಾದರು. ಆ ಬಳಿಕ ಬಂದ ಟೇಲರ್ (40 ರನ್) ಮತ್ತು ಇಲಿಯಟ್ (83 ರನ್) ಉತ್ತಮ ಜೊತೆಯಾಟ ಆಡುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು. ಆದರೆ ಪಂದ್ಯದ 36ನೇ ಓವರ್ ನಲ್ಲಿ ಉತ್ತಮವಾಗಿ ಆಡುತ್ತಿದ್ದ, ಟೇಲರ್ ಹಡ್ಡಿನ್ ವಿಕೆಟ್ ಒಪ್ಪಿಸಿ ಔಟಾದರು. ಆ ಬಳಿಕ ಬಂದ ಆ್ಯಂಡರ್ ಸನ್ ಮತ್ತು ರೋಂಚಿ ಶೂನ್ಯಕ್ಕೆ ಔಟಾದರು. ಬಳಿಕ ಕ್ರೀಸ್ ಗೆ ಆಗಮಿಸಿದ ವೆಟ್ಟೋರಿ, ಎಲಿಯಟ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದರು. ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ವೆಟ್ಟೋರಿ 23 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಜಾನ್ಸನ್ ಬೌಲಿಂಗ್ ನಲ್ಲಿ ಔಟಾದರು. ಆಗ ನ್ಯೂಜಿಲೆಂಡ್ ತಂಡದ ಮೊತ್ತ ಕೇವಲ 171 ರನ್ ಗಳಾಗಿತ್ತು.
ವೆಟ್ಟೋರಿ ಅವರ ಹಿಂದೆಯೇ 83 ರನ್ ಗಳಿಸಿ ಶತಕದ ಅಂಚಿನಲ್ಲಿದ್ದ ಎಲಿಯಟ್ ಕೂಡ ಇಲ್ಲದ ಹೊಡೆತಕ್ಕೆ ಮುಂದಾಗಿ ಫಾಲ್ಕ್ ನರ್ ಎಸೆತದಲ್ಲಿ ಹಡ್ಡಿನ್ ಗೆ ಕ್ಯಾಚ್ ನೀಡಿ ಹೊರನಡೆದರು. ಎಲಿಯಟ್ ಔಟ್ ಆಗುವುದರರೊಂದಿಗೆ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಕೂಡ ಬಹುತೇಕ ಅಂತ್ಯಗೊಂಡಿತ್ತು. ಏಕೆಂದರೆ ಎಲಿಯಟ್ ನಂತರ ಬಂದ ಬಾಲಂಗೋಚಿ ಆಟಗಾರರು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಪರೇಡ್ ಮಾಡುವುದರೊಂದಿಗೆ 183 ರನ್ ಗಳಿಗೆ ಆಲ್ ಔಟ್ ಆಯಿತು.
ಆಸ್ಟ್ರೇಲಿಯಾ ಪರ ಸ್ಟಾರ್ಕ್ 2 ವಿಕೆಟ್, ಫಾಲ್ಕ್ ನರ್ 3 ವಿಕೆಟ್, ಮಿಚೆಲ್ ಜಾನ್ಸನ್ 3 ವಿಕೆಟ್ ಮತ್ತು ಮ್ಯಾಕ್ಸ್ ವೆಲ್ 1 ವಿಕೆಟ್ ಪಡೆದು ನ್ಯೂಜಿಲೆಂಡ್ ತಂಡದ ಪತನಕ್ಕೆ ಕಾರಣವಾದರು.
No comments:
Post a Comment