Friday, 27 March 2015


ಮೈಸೂರಲ್ಲಿ ಆಟೋಬಂದ್: ಗಲಾಟೆ, ನ್ಯಾನೋ ಟ್ಯಾಕ್ಷಿಗೆ ಕಲ್ಲುತೂರಾಟ; ಪ್ರಕ್ಷುಬ್ದ
ಮೈಸೂರು,ಮಾ.27- ನ್ಯಾನೋ ಮತ್ತು ಓಲೋ ಟ್ಯಾಕ್ಷಿಗಳನ್ನು ನಗರದೊಳಗೆ  ಓಡಿಸಲು ಜಿಲ್ಲಾಡಳಿತ ಅನುಮತಿ ನೀಡಿರುವುದನ್ನು ವಿರೋಧಿಸಿ  ಇಂದು ನಗರದಾದ್ಯಮತ ಆಟೋ ಬಮದ್‍ಗೆ ಕರೆ ನೀಡಲಾಗಿತ್ತು, ಬಹುತೇಕ ಆಟೋಬಮದ್ ಯಶಸ್ವಿಯಾಗಿದೆ.
 ಆಟೋ ಚಾಲಕರಲ್ಲೇ  ಎರಡು ಬಣಗಳಿದ್ದು, ಬಸ್ ನಿಲ್ಲಧಣ ಸೇರಿದಂತೆ ಕೆಲವುಕಡೆ ಆಟೋಗಳು  ಸಂಚರಿಸುತ್ತಿದ್ದರಿಂದ  ಆಟೋಚಾಲಕರ ಸಂಘದವರಲ್ಲೇ  ಗಲಾಟೆ ನಡೆದು ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿತು.್ತ ಕೆಲವು ಆಟೋಚಾಲಕರು ಕದ್ದುಮುಚ್ಚಿ  ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದುದರಿಂದ   ಒಮದು ಬಣದ ಆಟೋ ಚಾಲಕರು ಗುಂಪುಗೂಡಿ  ಸಬರ್‍ಬನ್ ಮುಕ್ಯ ಬಸ್ ನಿಲ್ಲದಾಣದ ಬಳಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ  ಎರಡು ಬನಗಲ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು, ಪೊಲೀಸರ ಮದ್ಯ ಪ್ರವೇಶದಿಂದಾಗಿ   ಆಟೋಚಾಲಕರು ಸಮಾದಾನಗೊಮಡರು.
 ನಗರದ  ಬಸ್ ನಿಲ್ದಾಣದ ಬಳಿ ಇರುವ  ಪ್ರೀ ಪೇಯಿಡ್ ಆಟೋ ಮಲೀಗೆಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುತ್ತಿದ್ದರು. ಕೆಲ ಪ್ರಯಾಣಿಕರು ಟಾಂಗಾ ಗಾಡಿಗಳನ್ನು ಹಿಡಿದು ಪ್ರಯಾಣಿಸಿದರೆ, ಇನ್ನೂ ಕೆಲವರು ನಗರ ಸಮಚಾರಿ ಬಸ್‍ಗಳಿಗಾಗಿ ಕಾಯುತ್ತಾ ನಿಂತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಸ್ ನಿಲ್ದಾಣಗಳ ಬಳಿ ಬಿಗುವಿನ ವಾತಾವರಣ ಕೂಡಿದ್ದರಿಂದ  ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
 ನಗರದ  ಸೆಮಟ್ ಫಿಲೋಮಿನಾ  ಚರ್ಚ್  ಬಳಿ ಇರುವ ಲೂರ್ದು ನಗರದಲ್ಲಿ ನ್ಯಾನೋಟಾಕ್ಸಿವೊಂದಕ್ಕೆ  ಕೆಲ ಆಟೋ ಚಾಲಕರು ಕಲ್ಲುತೂರಿ  ಅದರ ಗಾಜುಗಳನ್ನು ಒಡೆದು ನಾಶಪಡೆಸಿದ ಘಟನೆಯೂ ನಡೆದಿದ್ದರಿಂದ ಪರಿಸ್ಥಿತಿ ಪ್ರಕ್ಷುಬ್ದ ವಾತಾವರಣಕ್ಕೆ ತಿರುಗಿತು ಇದನ್ನರಿತ ಪೊಲೀಸರು ಎಚ್ಚೆತ್ತುಕೊಂಡು ಆ ಸ್ಥಳದಲ್ಲಿ  ಲಾಠಿ ಪ್ರಹಾರಕ್ಕೆ ಮುಂದಾಗಿ ಗುಂಪ-ನ್ನು ಚದುರಿಸಿದರು.
ಇದೇ ಅಲ್ಲದೆ ನಗರಬಸ್ ನಿಲ್ದಾಣ, ಕುವೆಮಪುನಗರ, ವಿಜಯನಗರ  ಮೋಡಿಮೊಹಲ್ಲಾ, ಕೆ.ಆರ್. ಆಸ್ಪತ್ರೆ, ರೈಲು ನಿಲ್ದಾಣ ಸೇರಿದಂತೆ ಇನ್ನೂ ಹಲವಾರು ಕಡೆಗಳಲ್ಲಿ  ಆಟೋಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.
 ಒಟ್ಟಿನಲ್ಲಿ ನ್ಯಾನೋಟ್ಯಾಕ್ಷಿ ವಿರುದ್ಧದ ಇಮದಿ ಆಟೋಬಂದ್ ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಬಿಸಿ ಮುಟ್ಟಿಸಿದೆ ಎಮದು ಹೇಳಿದರೆ ತಪ್ಪಾಗಲಾರದು.

ಮಾದಿಗ ಜನಾಂಗಕ್ಕೆ  ಸವಲತ್ತು ನೀಡುವಲ್ಲಿ ಸಿದ್ದು ಸರ್ಕಾರ ವಿಫಲ-ಆರೋಪ
ಮೈಸೂರು, ಮ.27- ರಾಜ್ಯದಲ್ಲಿ ಮಾದಿಗರು, ಪರಿಶಿಷ್ಟರಿಗೆ  ಸಿಗಬೇಕಾದ ಮೀಸಲಾತಿಯನ್ನು ತಪಿಸಿ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ ಎಂದು ವಿದಾನ ಪರಿಷತ್‍ನ ಮಾಜಿ ಸದಸ್ಯ ಸಿ. ರಮೇಶ್ ಹಾಗೂ ಮಾಜಿ ಮೇಯರ್ ಕೃಷ್ಣ ಆರೋಪಿಸಿದರು.
 ಪತ್ರಕರ್ತರ ಭವನದಲ್ಲಿ ಸುದ್ಧಿಘೋಷ್ಟಿಯಲ್ಲಿ ಮಾತನಾಡಿದ ಅವರು  ಸಿದ್ದರಾಮಯ್ಯ ಆವರು ಈ ಹಿಂದೆ ರಚನೆಯಾಗಿರುವ  ಸದಾಶಿವ ಆಯೋಗದ ವರದಿಯನ್ನು ಅನುಷ್ಠನಕ್ಕೆ ತರುವ ಬದಲು, ಅದನ್ನು ಮರೆಮಾಚಿ ಹೊಸದಾಗಿ ಕಾಂತರಾಜು ಆಯೋಗದ ವರದಿಯನ್ನು  ಜಾರಿಗೆ ತಂದು ಆ ಮೂಲಕ ಜಾತಿಗಣತಿ ನಡೆಸಲು ಆದೇಶಿಸಿದ್ದಾರೆ, ಇದರಿಮದ  ನಿಜವಾದ ಪರಿಶಿಷ್ಟರಿಗೆ ಅನ್ಯಾಯವಾಗಲಿದೆ, ಕೆನೆಪದರ  ಮೀಸಲಾತಿ ತಪ್ಪಿದಂತಾಗುತ್ತದೆ, ಆಗ ನಿಜವಾಗಿಯೂ  ಮಾದಿಗ ಜನಾಂಗದವರಿ ಅನ್ಯಾಯಕ್ಕೆ ಒಳಗಾಗುತ್ತಾರೆ  ಆದ್ದರಿಮದ ಮೊದಲು ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿ ಆನಂತರ ಕಾಂತರಾಜು ಆಯೋಗದ ವರದಿಯನ್ನು ಅನುಷ್ಠಾನಗೊಲಿಸಿ ಎಮದು ಒತ್ತಾಯಿಸಿದರು.
  ಜನಗಣತಿಗೆ ಮನೆಮುಂದೆ ಬಂದಾಗ  ಮಾದಿಗ ಸಮುದಾಯದವರು  ಮಾದಿಗ ಎಂದೆ ನಮೂದಿಸಬೇಕೆಂದು ತಮ್ಮ ಸಮುದಾಯದವರಿಗೆ ಕರೆ ನೀಡಿದರು.
ಪತ್ರಿಕಾ ಗೋಷ್ಟಿಯಲ್ಲಿ ಕೃಷ್ಣಮೂರ್ತಿ, ಪ್ರಸನ್ನ ಉಪಸ್ಥಿತರಿದ್ದರು.

No comments:

Post a Comment