ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ : 02-03-2015ರಂದು ಸೋಮುವಾರ ಸಂಜೆ 4:00 ಗಂಟೆ ಮೈಸೂರು ಮಹಾನಗರ ಪಾಲಿಕೆಯ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿ ಒಳಪಟ್ಟಂತೆ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಕಸವಿಲೇವಾರಿ, ಹಳೇ ಮರಗಳನ್ನು ಕಡಿಯುವ ಸಮಸ್ಯೆ, ಉದ್ಯಾನವನಗಳ ಸಮಸ್ಯೆಯ ಬಗ್ಗೆ ಸಭೆ ನಡೆಸಲಾಗುತ್ತದೆ ಈ ಸಂಧರ್ಭದಲ್ಲಿ ನಗರ ಪಾಲಿಕೆ ಆಯುಕ್ತರು, ನೀರು ಸರಬರಾಜು ಮತ್ತು ಒಳಚರಂಡಿ ಅಧಿಕಾರಿಗಳು, ಅಧೀಕ್ಷಕ ಅಭಿಯಂತರರು,ಅಭಿವೃದ್ಧಿ ಅಧಿಕಾರಿ, ವಲಯ ಅಧಿಕಾರಿಗಳು ಭಾಗವಹಿಸಲಿದ್ದಾರೆ . ಆದ್ದರಿಂದ ವರದಿಗಾರರು ಹಾಗೂ ಛಾಯಗ್ರಾಹಕರು ಕಾರ್ಯಕ್ರಮಕ್ಕೆ ಹಾಜರಾಗಿ ವರದಿಮಾಡಲು ಶಾಸಕರ ಆಪ್ತ ಸಹಾಕ ರೇವಣ್ಣ ಕೋರಿದ್ದಾರೆ.
No comments:
Post a Comment