ಜಿಂಬಾಬ್ವೆ ಮೊದಲು ಬ್ಯಾಟಿಂಗ್: ಭಾರತಕ್ಕೆ 288 ರನ್ ಗುರಿ
ಈಡನ್ ಪಾರ್ಕ್-ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ 287 ರನ್ ಗೆ ಆಲೌಟ್ ಆಗಿದ್ದು, ಭಾರತಕ್ಕೆ 288 ರನ್ ಗಳ ಗುರಿ ನೀಡಿದೆ.
ಈಡನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇದರಿಂದಾಗಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾಗಿ ಬಂದ ಚಮ್ಮು ಚಿಬಾಬಾ 7 ಗಳಿಸಿದರೆ, ಹಮಿಲ್ಟನ್ 2 ರನ್ ಗಳಿಸಿ ಔಟಾದರು. ನಂತರ ಬಂದ ಸೋಲೊಮನ್ ಮೀರೆ ಸಹ 9 ರನ್ ಗಳಿಸಿ ಅಲ್ಪ ಮೊತ್ತಕ್ಕೆ ಔಟಾದರು.
ಈ ವೇಳೆ ಜತೆಯಾದ ಸಿನ್ ವಿಲಿಯಮ್ಸ್ ಹಾಗೂ ಟೇಲರ್ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಸುಸ್ಥಿತಿಯತ್ತ ಮುನ್ನಡಿಸಿದರು. ಸಿನ್ ವಿಲಿಯಮ್ಸ್ 50 ರನ್ ಗಳಿಸಿದರೆ ಸ್ಫೋಟಕ ಆಟವಾಡಿದ ಟೇಲರ್ ಶತಕ ಸಿಡಿಸಿದರು. 110 ಎಸೆತಗಳನ್ನು ಎದುರಿಸಿದ ಟೇಲರ್ ಭರ್ಜರಿ 138 ರನ್ ಗಳಿಸಿದರು. ಇರ್ವಿನ್ 27, ರಾಝ 28, ಚಕಾಬ್ವೆ 10, ಪನ್ಯಾಂಗರ 6, ಚಾಟರ ಶೂನ್ಯ ಗಳಿಸಿದರೆ ಮುಪರೀವ ಅಜೇಯ 1 ರನ್ ಗಳಿಸಿದ್ದಾರೆ.
ಭಾರತ ಪರ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಮೋಹಿತ್ ಶರ್ಮಾ ತಲಾ 3 ವಿಕೆಟ್ ಗಳಿಸಿದರೆ, ಆರ್. ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ.
No comments:
Post a Comment