Thursday, 26 March 2015

ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ
      ಮೈಸೂರು,ಮಾ.26-ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 2015-16ನೇ ಸಾಲಿಗೆ ಒಟ್ಟು 6460.5 ಕೋಟಿ ರೂ.ಗಳ ಜಿಲ್ಲಾ ವಾರ್ಷಿಕ ಸಾಲ ಯೋಜನೆಯನ್ನು ಇಂದು ಬಿಡುಗಡೆ ಮಾಡಿದೆ.
     ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ವಾರ್ಷಿಕ ಸಾಲ ಯೋಜನೆ ಬಿಡುಗಡೆ ಮಾಡಿದರು.
     ಇದೇ ಸಂದರ್ಭದಲ್ಲಿ ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಖ್ಯ ವ್ಯವಸ್ಥಾಪಕ ಶಿವÀಲಿಂಗಯ್ಯ ಅವರು ಮಾತನಾಡಿದ ಒಟ್ಟು ಆದ್ಯತಾ ವಲಯಕ್ಕೆ 5183.80 ಕೋಟಿ ರೂ. ಹಾಗೂ ಆದ್ಯತೇತರ ವಲಯಕ್ಕೆ 1276.70 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಕಳೆದ ಸಾಲಿಗಿಂತ ಆದ್ಯತಾ ವಲಯಗಳಿಗೆ 729.40 ಕೋಟಿ ಹಾಗೂ ಆದ್ಯತೇತರ ವಲಯಕ್ಕೆ 156.20 ಕೋಟಿ ರೂ.ಗಳÀಷ್ಟು ಹೆಚ್ಚಿನ ಸಾಲ ನೀಡುವ ಗುರಿ ಹೊಂದಲಾಗಿದೆ. ಬಹು ಮುಖ್ಯವಾದ ಬೆಳೆ ಸಾಲಕ್ಕೆ 1822.97 ಕೋಟಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸರ್ಕಾರಿ ವಲಯಕ್ಕೆ 3624.60 ಕೋಟಿ ಹಾಗೂ ಖಾಸಗಿ ವಲಯಕ್ಕೆ 625.86 ಕೋಟಿ, ಪ್ರದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ 560.74 ಕೋಟಿ, ಕರ್ನಾಟಕ ರಾಜ್ಯ ಹಣಕಾಸು ನಿಗಮಕ್ಕೆ 43.20 ಕೋಟಿ ಹಾಗೂ ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ 375 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.
     2015-16ನೇ ಸಾಲಿಗೆ ಬಿಡುಗಡೆ ಮಾಡಿರುವ ವಾರ್ಷಿಕ ಸಾಲ ಯೋಜನೆಯಲ್ಲಿ ಕೃಷಿ, ತೋಟಗಾರಿಕೆ,  ಸಣ್ಣ ನೀರಾವರಿ, ಪಶುಸಂಗೋಪನಾ ಚಟುವಟಿಕೆಗಳಿಗಾಗಿ ಹೆಚ್ಚಿನ ಹಣ ಕಾಯ್ದಿರಿಸಿದ್ದು, ಸಣ್ಣ ನೀರಾವರಿಗೆ 3900 ಲಕ್ಷ ರೂ. ಭೂ ಅಭಿವೃದ್ದಿಗೆ 9800 ಲಕ್ಷ ರೂ. ಕೃಷಿ ಯಾಂತ್ರೀಕರಣ 7500 ಲಕ್ಷ ರೂ. ತೋಟಗಾರಿಕೆ 10000 ಲಕ್ಷ ರೂ. ಹೈನುಗಾರಿಕೆಗೆ 10500 ಲಕ್ಷ ರೂ. ಕೋಳಿ ಸಾಕಣಿಗೆ 7000 ಲಕ್ಷ ರೂ. ಇತರೆ ಪಶು ಸಂಗೋಪನೆ ಚಟುವಟಿಕೆಗೆ 2000 ಲಕ್ಷ ರೂ. ಮೀನುಗಾರಿಕೆ 600 ಲಕ್ಷ ರೂ. ಅರಣ್ಯೀಕರಣಕ್ಕೆ 500 ಲಕ್ಷ ರೂ.  ಹಾಗೂ ಇತರ ಕೃಷಿಪೂರಕ ಚಟುವಟಿಕೆ ಸೇರಿದಂತೆ ಒಟ್ಟು 67675 ಲಕ್ಷ ರೂ ಕಾಯ್ದಿರಿಸಲಾಗಿದೆ.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪಿ.ಎ.ಗೋಪಾಲ್ ಮಾತನಾಡಿ ಜಿಲ್ಲಾ ಸಾಲ ಯೋಜನೆ ಯಶಸ್ವಿಯಾಗಲು ಬ್ಯಾಂಕುಗಳು ಜಿಲ್ಲಾ ಆಡಳಿತ ವ್ಯಾಪ್ತಿಯ ಇಲಾಖೆಗಳ ನಡುವೆ ಸಮನ್ವಯ ಉತ್ತಮ ಬಾಂಧ್ಯವ ಅಗತ್ಯವಿದೆ. ಇಲಾಖೆಗಳು ಬ್ಯಾಂಕುಗಳೊಂದಿಗೆ ಕೈಜೋಡಿಸಿ ಯೋಜನೆ ಜಾರಿ ಅನುಷ್ಠಾನಗೊಳಿಸಲಿವೆ ಎಂದರು.
     ನೀರಾವರಿ ಬೆಳೆಗಳಿಗೆ ಪ್ರಾಮುಖ್ಯತೆ ನೀಡುವುದರ ಜೊತೆಯಲ್ಲಿ ಒಣ ಬೇಸಾಯಕ್ಕೆ  ಹಾಗೂ ತಂಬಾಕಿಗೆ ಪರಿಯಾಯ ಬೆಳೆಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆಯನ್ನು ಸಾಲ ಯೋಜನೆಯಲ್ಲಿ ನೀಡುವಂತಾಗಬೇಕು. ಕುಡಿಯುವ ನೀರಿನ ಪೂರೈಕೆ ಸೌಕರ್ಯಕ್ಕೂ ಹಣ ಒದಗಿಸುವಂತಾಗಬೇಕು ಎಂದು ಗೋಪಾಲ್ ಸಲಹೆ ಮಾಡಿದರು.
      ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ಮಾತನಾಡಿ ಹೈನುಗಾರಿಕೆ, ಕುರಿ ಸಾಕಾಣಿಕೆ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಸಾಲ ನೀಡಲು ಬ್ಯಾಂಕುಗಳು ಮುಂದಾಗಬೇಕು. ಅಲ್ಲದೇ ಸ್ವ ಉದ್ಯೋಗ ಮಾಡುವವರಿಗೆ ಆದ್ಯತೆ ಮೇಲೆ ಸಾಲ ನೀಡಿದಲ್ಲಿ ಇನ್ನಷ್ಟು ಜನರಿಗೆ ಉದ್ಯೋಗಾವಕಾಶ ಸೃಷ್ಟಿಸಿದಂತಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ತಮಗೆ ದೊರೆತಿರುವ ಹಣಕಾಸು ಅಧಿಕಾರವನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಅರ್ಹರಿಗೆ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
      ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸಿದ್ಧ ನಂಜನಗೂಡು ರಸಬಾಳೆ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಆದ್ದರಿಂದ ರಸಬಾಳೆ ಬೆಳೆಯಲು ಸೂಕ್ತ ಸ್ಥಳಗಳನ್ನು ಗುರುತಿಸಿ ಬೆಳೆಯನ್ನು ಬೆಳೆಯುವ ಅಗತ್ಯವಿದೆ. ಇದಕ್ಕೆ ಬ್ಯಾಂಕುಗಳು ಹಣಕಾಸು ನೆರವು ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರಲ್ಲದೆ, ಮೈಸೂರು ಜಿಲ್ಲೆಯಲ್ಲಿ ಇತರ ಕ್ಷೇತ್ರಗಳಿಗಿಂತ ಪ್ರವಾಸೋದ್ಯಮ ಕ್ಷೇತ್ರಕ್ಕೆ  ಹೆಚ್ಚು ಅವಕಾಶಗಳಿರುವುದನ್ನು ಮನಗಂಡು ಈ ಕ್ಷೇತ್ರಕ್ಕೆ ಸಾಲ ನೀಡಿಕೆಯಲ್ಲಿ ಆದ್ಯತೆ ನೀಡುವ ಅಗತ್ಯವಿದೆ ಎಂದರು.
   ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಮೈಸೂರು ವಲಯದ ಡಿ.ಜಿ.ಎಂ ಪಿ.ಬಾಲಕೃಷ್ಣನ್, ರಿಸರ್ವ್ ಬ್ಯಾಂಕ್ ಎಲ್.ಡಿ.ಒ ಸುಜಾತ ಶ್ರೀಕಂಠಯ್ಯ, ನಬಾರ್ಡ್‍ನ ಮೈಸೂರು ವಿಭಾಗದ ಡಿ.ಡಿ.ಎಂ. ಎನ್.ಅರವಮುಧನ್ ಹಾಗೂ ಇನ್ನಿತರರು ಭಾಗವಹಿಸಿದರು.
ಟೆಂಡರ್ ಆಹ್ವಾನ
      ಮೈಸೂರು,ಮಾ.26-ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನವ ಕಾನೂನು ಪದವೀಧರರಿಗೆ ವಕೀಲ ವೃತ್ತಿಗೆ ಸಂಬಂಧಿಸಿದ ರೂ. 1.20 ಲಕ್ಷ ಮೌಲ್ಯದ ಕಾನೂನು ಪುಸ್ತಕ ಒದಗಿಸಲು ನೋಂದಾಯಿತ ಸಂಸ್ಥೆ/ ಏಜೆನ್ಸಿಗಳಿಂದ  ಟೆಂಡರ್ ಆಹ್ವಾನಿಸಿದೆ.
       ಇಎಂಡಿ ರೂ. 2750/- ನ್ನು ಜಿಲ್ಲಾಧಿಕಾರಿಗಳು, ಮೈಸೂರು ಇವರ ಹೆಸರಿಗೆ ಡಿ.ಡಿ. ರೂಪದಲ್ಲಿ ಸಲ್ಲಿಸಬೇಕಿದ್ದು, ಮೊಹರು ಮಾಡಿದ ಟೆಂಡರ್ ಫಾರಂಗಳನ್ನು ದಿನಾಂಕ 10-04-2015ರ ಸಂಜೆ 5 ಗಂಟೆಯೊಳಗಾಗಿ ಜಿಲ್ಲಾಧಿಕಾರಿಗಳು, ಮೈಸೂರು ಇವರಿಗೆ ಸಲ್ಲಿಸುವುದು. ಪುಸ್ತಕಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ನೇರ ಫೋನ್-ಇನ್- ಕಾರ್ಯಕ್ರಮ
     ಮೈಸೂರು,ಮಾ.ಮೈಸೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ  ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಿನಾಂಕ: 27.03.2015  ರಂದು ಶುಕ್ರವಾರ  ಬೆಳಿಗ್ಗೆ 10-00 ಗಂಟೆಯಿಂದ 11.00 ಗಂಟೆಯವರೆವಿಗೆ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಮೈಸೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು  ನೇರ ಫೋನ್-ಇನ್- ಕಾರ್ಯಕ್ರಮ ನಡೆಸಲಿದ್ದಾರೆ.
     ಸಾರ್ವಜಿಕರು ದೂರವಾಣಿ ಸಂಖ್ಯೆ: 0821-2414433 ಗೆ ಕರೆ ಮಾಡಿ ತಮ್ಮ ಕುಂದುಕೊರತೆಗಳ ಬಗ್ಗೆ ಚರ್ಚಿಸಬಹುದಾಗಿರುತ್ತದೆ.

ಮಾ. 28 ರಂದು ಜಿಲ್ಲಾ  ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ
     ಮೈಸೂರು,ಮಾ.26. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯು ಮಾರ್ಚ್ 28 ರಂದು ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ.ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                
ಮಾರ್ಚ್ 30 ರಂದು ಬಡ್ಜೆಟ್ ಕೌನ್ಸಿಲ್ ಸಭೆ
     ಮೈಸೂರು,ಮಾ.26.(ಕ.ವಾ.)-ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಮಾರ್ಚ್ 30 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಬಡ್ಜೆಟ್ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕ ಪರೀಕ್ಷೆಗೆ ತರಬೇತಿ
    ಮೈಸೂರು,ಮಾ.26.(ಕ.ವಾ.)-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ಮೇ ತಿಂಗಳ ಕೊನೆಯ ವಾರದಲ್ಲಿ ನಡೆಯಲಿರುವ ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರÀ ಹುದ್ದೆಗಳ ನೇಮಕಾತಿ ಪರೀಕ್ಷೆ’ಗೆ 40 ದಿನಗಳ ತರಬೇತಿ  ನೀಡಲಾಗುವುದು.
     ಆಸಕ್ತರು ದಿನಾಂಕ: 10.04.2015ರ ರೊಳಗಾಗಿ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ‘ಮುಕ್ತ ಗಂಗೋತ್ರಿ’ ಆವರಣದಲ್ಲಿರುವ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ಕಛೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 ಯನ್ನು ಸಂಪರ್ಕಿಸುವುದು ಎಂದು   ಕುಲಸಚಿವ ಪ್ರೊ. ಪಿ.ಎಸ್.ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
       ಮೈಸೂರು,ಮಾ.26.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿರುವ ಪ್ರತಿಭಾವಂತ ಕ್ರೀಡಾಪಟುಗಳಿಗೆ  ವಾರ್ಷಿಕ ರೂ 10,000-00 ದಂತೆ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಮಾಧ್ಯಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ ರಾಜ್ಯ ಕ್ರೀಡಾ ಪ್ರಾಧಿಕಾರದ ನೊಂದಾಯಿ ಕ್ರೀಡಾ ಸಂಸ್ಥೆಗಳು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಗ್ರಾಮೀಣ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ, ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ  ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳು 2014ನೇ ಜನವರಿ ಮಾಹೆಯಿಂದ 2014ನೇ ಡಿಸೆಂಬರ್ ಮಾಹೆವರೆಗೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಬೇಕು ಅಥವಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿರಬೇಕು.
ನಿಗಧಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ 26-04-2015 ರೊಳಗೆ ಸಲ್ಲಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179ರ ಮೂಲಕ ಸಂಪರ್ಕಿಸಬಹುದಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಿ
      ಮೈಸೂರು,ಮಾ.26.ಮೈಸೂರು ನಗರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದಂತಹ 12  ಅಂಗನವಾಡಿ ಸಹಾಯಕಿಯ ಹುದ್ದೆಗೆ ಆಯ್ಕೆಯಾಗಿರುವವರ  ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮೈಸೂರು ನಗರ, ಬಾಲಭವನ, ಬನ್ನಿಮಂಟಪ, ಮೈಸೂರು ಇಲ್ಲಿ ಪ್ರಕಟಣ ಫಲಕದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಇದ್ದಲ್ಲಿ ಪೂರಕ ದಾಖಲಾತಿಗಳೊಂದಿಗೆ ಏಪ್ರಿಲ್ 4 ರ ಸಂಜೆ 5-30 ಗಂಟೆಯೊಳಗೆ ಸದರಿ ಕಚೇರಿಗೆ ಸಲ್ಲಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.      

ಏಪ್ರಿಲ್ 1 ರಂದು ನಂಜನಗೂಡು ಶ್ರೀಕಂಠೇಶ್ವರರ ರಥೋತ್ಸವ
ಮೈಸೂರು,ಮಾ.26.ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ದೊಡ್ಡ ಜಾತ್ರಾ ಮಹೋತ್ಸವವು 2015ರ ಮಾರ್ಚ್ 25 ರಿಂದ ಏಪ್ರಿಲ್ 5 ರವರೆಗೆ ಜರಗುಲಿದೆ. ಮಾರ್ಚ್ 27 ರಂದು ಚಂದ್ರಮಂಡಲಾರೋಹಣೋತ್ಸವ, ಮಾರ್ಚ್ 28 ರಂದು ಅನಂತ ಪೀಠಾರೋಹಣೋತ್ಸವ, ಮಾರ್ಚ್ 29 ರಂದು ಮಂಟಪಾರೋಹಣೋತ್ಸವ, ಮಾರ್ಚ್ 30 ರಂದು ವೃಷಭಾರೋಹಣೋತ್ಸವ, ಮಾರ್ಚ್ 31 ರಂದು ವಸಂತೋತ್ಸವ ಪೂರ್ವಕ ಗಜಾರೋಹಣೋತ್ಸವ, ಏಪ್ರಿಲ್ 1 ರಂದು ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರಾ ಶ್ರೀ ಗೌತಮ ಪಂಚಮಹಾರಥೋತ್ಸವ ಹಾಗೂ ಏಪ್ರಿಲ್ 2 ರಂದು ಮಹಾಭೂತಾರೋಹಣೋತ್ಸವ ದೇವಿ ಪ್ರಣಯ ಕಲಹ ಸಂಧಾನೋತ್ಸವ, ಏಪ್ರಿಲ್ 3 ರಂದು ರಾತ್ರಿ 7 ಗಂಟೆಗೆ ಶ್ರೀಕಂಠೇಶ್ವರ ತೆÀಪ್ಪೋತ್ಸವ ನಡೆಯಲಿದೆ.
ಏಪ್ರಿಲ್ 4 ರಂದು ಕೈಲಾಸಯಾನಾರೋಹಣೋತ್ಸವ, ಏಪ್ರಿಲ್ 5 ರಂದು ಮಹಾಸಂಪ್ರೋಕ್ಷಣಿ ಪೂರ್ವಕ ನಂದಿವಾಹನೋತ್ಸವಗಳು ನಡೆಯಲಿವೆ. ಭಕ್ತಾದಿಗಳು ಈ ಜಾತ್ರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ರೂಪ ಅವರು ಕೋರಿದ್ದಾರೆ.

ಏಪ್ರಿಲ್ 1 ರಂದು ಸಾಮಾನ್ಯ ಸಭೆ
ಮೈಸೂರು,ಮಾ.26-ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 1 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರ
ಮೈಸೂರು,ಮಾ.26ನವದೆಹಲಿಯ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನಶ್ಚೇತನ ಮಂತ್ರಾಲಯ, ಹಾಗೂ ಮೈಸೂರು ಜಿಲ್ಲಾಡಳಿತದ ವತಿಯಿಂದ ಮಾರ್ಚ್ 27 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಹಮಾರ ಜಲ್ - ಹಮಾರ ಜೀವನ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
2015-16ನೇ ಸಾಲನ್ನು ದೇಶಾದ್ಯಾಂತ್ಯ ಜಲ ಕ್ರಾಂತಿ ವರ್ಷ ಎಂದು ಆಚರಿಸಲಾಗುತ್ತಿದೆ.      ಹಮಾರ ಜಲ್ - ಹಮಾರ ಜೀವನ್ ಉಪಕ್ರಮವು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲ ಸಮಸ್ಯೆಗಳಿಗೆ ಮತ್ತು ನೀರಿನ ಸಂರಕ್ಷಣೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ವಿಜ್ಞಾನಿಗಳು, ಇಂಜಿನಿಯರ್‍ಗಳು ಮತ್ತು ಇತರೆ ಸಂಘ ಸಂಸ್ಥೆಗಳು ತೊಡಗಿಸಿಕೊಳ್ಳುವ ಕಾರ್ಯಕ್ರಮ.  ಸದರಿ ಕಾರ್ಯಕ್ರಮವು ನೀರಿನ ಕೊರತೆ ಹಾಗೂ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದಾಗಿರುತ್ತದೆ.

ಇಡೀ ಭೂಮಿಯ ಬಹುಪಾಲು ನೀರಿನಿಂದ ಆವರಿಸಿದ್ದರೂ ಹನಿ ನೀರಿಗೂ ಬವಣೆ ಪಡುತ್ತಾ ಆಕಾಶ ನೋಡುವ ದುಸ್ಥಿತಿ ನಮ್ಮದಾಗಿದೆ.  ನೀರು ಇಡೀ ಜೀವಜಗತ್ತಿನ ಅಮೂಲ್ಯ ಜೀವದಾತು.  ನಿಸರ್ಗದ ಅಸಮಾನತೆಯಿಂದ ಒಂದು ಕಡೆ ಅತಿವೃಷ್ಠಿ ಮತ್ತೊಂದು ಕಡೆ ಅನಾವೃಷ್ಠಿ ಸಂಭವಿಸುತ್ತದೆ ಹಾಗಾಗಿ ಜೀವ ಜಗದ ಜೀವಂತಿಗೆಯನ್ನು ಉಳಿಸಿಕೊಳ್ಳುವ ಮಹತ್ವದ ಹೊಣೆ ನಮ್ಮದು.  ನಾವು ಪೋಲು ಮಾಡುವ ಒಂದು ಹನಿ ಇನ್ನೊಂದು ಜೀವಕ್ಕೆ ಜೀವ ಕೊಡುತ್ತದೆ ಎಂಬುದನ್ನು ಮರೆಯಬಾರದು.

ಜಲ ನಮ್ಮ ಸಂಪತ್ತು, ಕಾವೇರಿ, ಕಪಿಲೆ, ಕೃಷ್ಣೆ, ತುಂಗಭದ್ರೆ ಮೈತುಂಬಿ ಹರಿವ ನಾಡಿದು, ನಿತ್ಯ ಹರಿದ್ವರ್ಣವನ್ನು ನೆನಪಿಸುವ ಪಶ್ಚಿಮ ಫಟ್ಟಗಳು ನಮ್ಮ ನೆಲದ ಹಸಿರಿನ ಸಂಕೇತಗಳು, ಆದರೂ ಮಳೆಗಾಲ ಕಳೆದ ಬೇಸಿಗೆ ಪ್ರಾರಂಭವಾಗುತ್ತಲೆ, ನೀರಿಗಾಗಿ ಆಹಾಕಾರ ಶುರುವಾಗುತ್ತದೆ, ಇದಕ್ಕೆ ಮುಖ್ಯ ಕಾರಣ ಜಲ ಸಂಪತ್ತಿನ ಅಸಮರ್ಪಕ ನಿರ್ವಹಣೆ ಹಾಗೂ ಜಲ ಸಂರಕ್ಷಣೆ ಮಾಡದಿರುವುದು.

ಸಮೃದ್ಧವಾಗಿರುವ ಕಡೆ ನೀರನ್ನು ಬೇಕಾಬಿಟ್ಟಿ ಪೋಲು ಮಾಡುತ್ತೇವೆ, ಅದೇ ಇಲ್ಲದ ಕಡೆ ಕಿಲೋಮೀಟರ್‍ಗಟ್ಟಲೇ ನೀರನ್ನು ಹೊತ್ತು ತರುತ್ತೇವೆ ಇಂತ ವಿಪರ್ಯಾಸಗಳನ್ನು ತಡೆಗಟ್ಟಲು ಮೊದಲು ನಮಗೆ ಜಲ ಸಂಪತ್ತಿನ ಸಂರಕ್ಷಣೆಯ ಅರಿವು ಮೂಡಬೇಕು.

ಅನಗತ್ಯವಾಗಿ ನೀರನ್ನು ಪೋಲು ಮಾಡದಂತೆ ಎಚ್ಚರಿಕೆ ವಹಿಸಬೇಕು. ಕೊರತೆ ಇರುವ ಕಡೆ ಮಿತವಾಗಿ ಬಳಕೆಮಾಡಿ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು.  ಮಳೆಗಾಲದಲ್ಲಿ ಜಲಸಂಗ್ರಹಗಳನ್ನು ನಿರ್ಮಿಸಿ ಅಭಾವದ ಸಂದರ್ಭಕ್ಕೆ ಸೂಕ್ತವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಾಗಿದೆ.

No comments:

Post a Comment