Monday, 16 March 2015

ಮೈಸೂರಲ್ಲಿ ಚಿತ್ರನಟ ನವೀನ್ ಕಗ್ಗೊಲೆ

ಮೈಸೂರಲ್ಲಿ ಚಿತ್ರನಟ ನವೀನ್ ಕಗ್ಗೊಲೆ
ಮೈಸೂರು, ಮಾ.16- ಕನ್ನಡ ಚಿತ್ರರಂಗದ ನಾಯಕನಟನೊಬ್ಬ ಮೈಸೂರು ನಗರದಲ್ಲಿ ಕಗ್ಗೊಲೆಯಾಗಿದ್ದಾರೆ.
 “ಹಾಯ್ ಕೃಷ್ಣ”  ಕನ್ನಡ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಬೆಳವಾಡಿಯ ನವೀನ್(29) ಎಂಬುವರೇ ಕೊಲೆಯಾದ ದುರ್ದೈವಿ. ಇವರು ಈ ಚಿತ್ರದಿಂದ ನಾಯಕನಾಗಿ ಮಿಂಚಿದ್ದರು.
 ಕಳೆದ ರಾತ್ರಿ ಸುಮಾರು 11.30ರ ವೇಳೆಗೆ ಮೈಸೂರು ಕೆ.ಆರ್.ಎಸ್. ರಸ್ತೆಯಲ್ಲಿರುವ ಬೆಳವಾಡಿಯ ಮಾರಮ್ಮನ ದೇವಸ್ಥಾನದÀ ಬಳಿ ವ್ಯಕ್ತಿಯೊಬ್ಬ ಭೀಕರವಾಗಿ ಕೊಲೆಯಾಗಿ ಬಿದ್ದಿದ್ದರು ಎನ್ನಲಾಗಿದೆ. ಇಂದು ಬೆಳಿಗ್ಗೆ  ಈ ದೃಶ್ಯ ಕಂಡ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಸುದ್ಧಿ ಮುಟ್ಟಿಸಲಾಗಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಕೊಲೆಯಾಗಿರುವ ವ್ಯಕ್ತಿ ಚಿತ್ರನಟ ನವೀನ್ ಎಂದು ಗುರುತಿಸಲಾಯಿತು.
 ನಟ ನವೀನ್‍ನನ್ನು ಕಣ್ಣಿಗೆ ಕಾರದ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆಮಾಡಿ, ಮಚ್ಚಿನಿಂದ ಕೊಚ್ಚಿ,  ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆಗೈದಿದ್ದಾರೆ.
 ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಠಾಣಾ ಪೊಲೀಸರು ಶವವನ್ನು ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಯ ಶವಗಾವಾಗಾರಕ್ಕೆ ಸಾಗಿಸಿ ಕೊಲೆಗಡುಕರಿಗೆಗಾಗಿ ಬಲೆ ಬೀಸಿದ್ದಾರೆ.
 ಈ ಕೊಲೆಗೆ  ಹಳೆಯ ವೈಸಮ್ಯವೇ ಕಾರಣ ಎನ್ನಲಾಗಿದ್ದು, ಈ ಹಿಂದೆ ನವೀನ್ ಅದೇ ಬಡಾವಣೆಯ ಲೋಕಿ ಎಂಬುವವನ ಮೇಲೆ ಹಲ್ಲೆಮಾಡಿದ್ದ, ನಂತರದ ದಿನಗಳಲ್ಲಿ ಚಿತ್ರಗಳಲ್ಲಿ ನಟಿಸಲು ಅವಕಾಶ ನೀಡುವುದಾಗಿ ಹೇಳಿ ಕೆಲವರಿಂದ ಹಣ ಪಡೆದು ವಂಚಿಸಿದ್ದ ಪ್ರಕರಣ ಇವನ ಮೇಲಿತ್ತು, ಅಲ್ಲದೆ ಕೇಬಲ್ ದಂದೆ ನಡೆಸಿ ಅದರಲ್ಲೂ ಗುರುತಿಸಿಕೊಂಡಿದ್ದ, 2ವರ್ಷ ಸೆರೆವಾಸವನ್ನು ಅನುಭವಿಸಿ ಹೊರಬಂದು  ಚಿತ್ರ ತೆಗೆದು ನಾಯಕನಾಗಿ ನಟಿಸಿದ್ದ ಈ ಕಾರಣಗಳಿಂದ  ಇವನಿಗೆ ಆಗದವರು ಈತನ ವಿರುದ್ಧ ಸೇಡುತೀರಿಸಿಕೊಳ್ಳಲು ಈ ಕುಕೃತ್ಯವೆಸಗಿದ್ದಾರೆ ಎನ್ನಲಾಗಿದೆ.  
 

No comments:

Post a Comment