Wednesday 8 October 2014


     ನಗರದಲ್ಲಿ ಅದ್ದೂರಿ  ವಾಲ್ಮೀಕಿ ಜಯಂತಿ ಆಚರಣೆ
ಮೈಸೂರು, ಅ.8- ಮೈಸೂರು ನಗರದಲ್ಲಿ ಇಂದು ರಾಮಾಯಣ ಕರ್ತೃ ವಾಲ್ಮೀಕಿಯವರ ಜಯಂತಿ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
    ನಗರದ ಅರಮನೆ ಮುಂದಿರುವ  ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ರವರು ತೆರೆದ ವಾಹನದಲ್ಲಿರಿಸಿದ್ದ ವಾಲ್ಮೀಕಿ ಬಾವಚಿತ್ರಕ್ಕೆ  ಪುಷ್ಪಾರ್ವನೆ ಮಾಡಿ       ಮೆರವಣೀಗೆಗೆ ಚಾಲನೆ ನೀಡಿದರು. ನಂತರ ನಂದಿಕಂಬಕ್ಕೆ  ಪೂಜೆ ಸಲ್ಲಿಸಿ  ಸಾರ್ವಜನಿಕರ ಒತ್ತಾಯದ ಮೇರೆಗೆ ಸಚಿವರು, ಹಾಗೂ ಶಾಸಕರುಗಳಾದ ಜಿ.ಟಿ. ದೇವೇಗೌಡ, ಎಂ. ಕೆ. ಸೋಮಶೆಖರ್ ನಂದಿಕಂಬದ ಮುಂದೆ  ವಾದ್ಯದ ನಾದಕ್ಕೆ  ನಾಲ್ಕು ಹೆಜ್ಜೆ ಹಾಕಿ ಕುಣಿದು ಸಾರ್ವಜನಿಕರ ಸಂತಸ ಪಡಿಸಿದರು.
  ಮೆರವಣಿಗೆಯಲ್ಲಿ ಹಲವಾರು ಕಲಾ ತಂಡಗಳು, ವಾಲ್ಮೀಕಿ  ವೇಶದಾರಿಗಳು,  ವೀರಗಾಸೆ, ಡೊಳ್ಳುಕುಣಿತ  ನಾನಾ ಭಾಗಗಳಿಂದ ಆಗಮಿಸಿದ್ದ ಕಲಾತಂಡಗಳು ಮೆರವಣಿಗೆಯುದ್ದಕ್ಕೂ ಕುಣಿದು ಸಂಭ್ರಮಿಸಿದರು ಹಲವಾರು ವಾಹನಗಳಲ್ಲಿ ವಿವಿಧ ಊರುಗಳಿಂದ ಆಗಮಿಸಿದ್ದ  ವಾಲ್ಮೀಕಿ ಭಾವಚಿತ್ರಗಳನ್ನು ತೆರೆದ ಜಿಪಿನಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
  ಮೆರವಣಿಗೆಯು  ಕಲಾಮಂದಿರದ ವರೆಗೆ ಸಾಗಿ ಅಲ್ಲಿ ನಡೆಯುವ P
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು. 
  ಕಲಾಮಂದಿರದಲ್ಲಿ ನಡೆದ ಕಾರ್ಯಕ್ರದಲ್ಲಿ ವಾಲ್ಮೀಕಿಯವರ ಬೃಹತ್ ಬಾವಚಿತ್ರಕ್ಕೆ ಚಾಮರಾಜ ಕ್ಷೇತ್ರದ ಶಾಸಕ  ವಾಸು ಪುಷ್ಪಾರ್ಚನೆ ಮಾಡಿ ಕಾರ್ಯಕ್ಕೆ ಚಾಲನೆ ನೀಡಿದರೆ, ಸಚಿವ ಪ್ರಸಾದ್ ದೀಪಬೆಳಗಿಸಿ ಉದ್ಘಾಟಿಸಿದರು. ನಂತರ  ವಾಲ್ಮೀಕಿಯವರ ಗುಣಗಾನಮಾಡಿ, ವಾಲ್ಮೀಕಿ ಮೊದಲಿಗೆ  ಬೇಡನಾಗಿದ್ದು, ಆನಂತರ ದೈವ ಪ್ರೇರಣೆಯಿಂದ ತಪಸ್ಸುಮಾಡಿ  ರಾಮಾಯಣದಂತಹ ಮಹಾ ಕಾವ್ಯ  ರಚಿಸಿ ಒಬ್ಬ ಶ್ರೇಷ್ಠ ಕವಿ ಎನಿಸಿಕೊಂಡರು ಎಂದು ವಾಲ್ಮೀಕಿಯ ಜೀವನ ಚರಿತ್ರೆಯನ್ನೇ
ಬಿಚ್ಚಿಡುವ ಮೂಲಕ ವಾಲ್ಮೀಕಿ  ಆದರ್ಶವನ್ನು ಜಿವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು.
 ಈ ಸಮಾರಂಭದಲ್ಲಿ ಶಾಸಕರುಗಳಾದ ಎಂ.ಕೆ. ಸೋಮಶೇಖರ್, ಜಿ.ಟಿ. ದೇವೇಗೌಡ, ವಾಸು, ಚಿಕ್ಕಮಾದು, ಸೇರಿದಂತೆ ಹಲವಾರು  ಕನಪ್ರತಿನಿಧಿಗಳು, ಮತ್ತು ಜಿಲ್ಲಾಧಿಕಾರಿ ಸಿ. ಶಿಖಾ, ಜಿ,ಪಂ.ಅಧ್ಯಕ್ಷೆ ಪುಷ್ಪಾವತಿ, ಹಾಗೂ ಇತರೆ ಅಧಿಕಾರಿಗಳು ಸಾರ್ವಜನಿಕರು  ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು.

            ಚಾಮುಂಡಿಬೆಟ್ಟದಲ್ಲಿ  ಚಾಮುಂಡೇಶ್ವರಿ  ರಥೋತ್ಸವ


ಮೈಸೂರು,ಅ. 8- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ದೇವಿಯ ರಥೋತ್ಸವ ವಿಜೃಂಭಣೆಯಿಂದ  ಜರುಗಿತು. ಸರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ದೇವಿ ದರ್ಶನ ಪಡೆದು ಪುನಿತರಾದರು.
  ಇಂದು ಬೆಳಿಗ್ಗೆ 7.05 ರಿಂದ 7.45ರ ವರೆಗೆ  ಸಲ್ಲುವ ಶುಭ  ತುಲಾ ಲಗ್ನದಲ್ಲಿ ಅಲಂಕರಿಸಲ್ಪಟ್ಟಿದ್ದ ತೇರಿನಲ್ಲಿ ವಿವಿಧ ಬಗೆಯ ಹೂವು, ವಸ್ತ್ರಗಳು, ನಿಂಬೆ ಹಣ್ಣುಗಳಿಂದ ಅಲಂಕರಿಸಿದ್ದ ದೇವಿಯ ವಿಗ್ರಹವನ್ನು  ರಥದೊಳಗೆ ಇರಿಸಲಾಯಿತು, ನಂತರ ಮುಖ್ಯ ಅರ್ಚಕರಾದ ಶಶಿ ಶೇಖರ್ ದೀಕ್ಷಿತ್ ಅವರು ದೇವಿಯ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ತೇರನ್ನು ಎಳೆಯಲು  ಚಾಲನೆ ನೀಡಲಾಯಿತು. ಬೆಳಿಗ್ಗೆ  ತುಂತುರು ಮಳೆಯ ನಡಯವೆಯೂ ನೆರೆದಿದ್ದ ಭಕ್ತರು  ದೇವಸ್ಥಾನದ ಸುತ್ತಲೂ ತೇರವನ್ನು ಎಳೆದು ಸಂಭ್ರಮಿಸಿ ದೇವಿಯಕೃಪೆಗೆ ಪಾತ್ರರಾದರು.
  ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಮೇಯರ್ ಎಂ.ಎನ್.ರಾಜೇಶ್ವರಿ ಯವರು ರಥದ ಹಗ್ಗ ಹಿಡಿದು ಎಳೆದು ಚಾಮುಂಡಿ ಅಮ್ಮನವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅರಸು ಮನೆತನದ ಯಾರೊಬ್ಬರೂ ಹಾಜರಿರಲಿಲ್ಲಿ ಅವರ ಅನುಪಸ್ಥಿತಿಯಲ್ಲೇ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
 ದಸರಾ ಮುಗಿದ  ಮೂರು ದಿನದ ಬಳಿಕ ಚಾಮುಂಡಿ ಬೆಟ್ಟದಲ್ಲಿ ಅಮ್ಮನ
 ರಥೋತ್ಸವ ನಡೆಸುವುದು  ಹಿಂದಿನಿಂದಲೂ ನಡೆದುಬಂದ ಸಂಪ್ರದಾಯ
ಅದರಂತೆಯೇ ಈ ಬಾರಿಯೂ ರಥೋತ್ಸವವನ್ನು ಜಿಲ್ಲಾಡಳಿತ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತಮಂಡಳಿ ವತಿಯಿಂದ ಅಚ್ಚುಕಟ್ಟಾಗಿ ನಡೆಸಲಾಯಿತು.
 ಸಾವಿರಾರು ಮಂದಿ ಭಕ್ತರು  ಮಳೆಯನ್ನೂ ಲೆಕಿಸದೇ ಮುಧ್ಯರಾತ್ರಿಯಿಂದಲೇ ಬೆಟ್ಟದಲ್ಲಿ ನೆರೆದಿದ್ದು, ರಥೋತ್ಸವದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆಯಲು ಕಾತುರರಾಗಿದ್ದರು. ಹರಕೆ ಹೊತ್ತ ಕೆಲಭಕ್ತರು ಸಾರ್ವಜನಿಕರಿಗೆ ಹಲವಾರು ಬಗೆಯ ಪ್ರಸಾದಗಳನ್ನು  ವಿನಿಯೋಗಿಸಿ ತಮ್ಮ ಹರಕೆ ತೀರಿಸಿದರು. ಇನ್ನೂ ಕೆಲವು ಮಹಿಳಾ  ಭಕ್ತರು ಸಾವಿರ ಮೆಟ್ಟಿಲುಗಳಿಗೆ   ಹರಿಸನ, ಕುಂಕುಮ, ಹೂವು ಇಟ್ಟು ಕರ್ಪೂರ ಹೊತ್ತಿಸಿ  ನಮಸ್ಕರಿಸಿ ಹತ್ತುವ ಮೂಲಕ ಹರಕೆ ತೀರಿಸಿ ಭಕ್ತಿ ಭಾವ ಮೆರೆದರು.
ಯಾವುದೇ ಅಹಿತಕರ ಘಟನೆ  ಸಂಭವಿಸದಂತೆ ತಡೆಯಲು  ಸೂಕ್ತ ಬಂದೊ ಬಸ್ತ್ ಏರ್ಪಡಿಸಲಾಗಿತ್ತು.

No comments:

Post a Comment