Wednesday 8 October 2014

 ದ್ವಿಚಕ್ರ ವಾಹನ ಕಳ್ಳನ ಬಂಧನ:   4 ದ್ವಿಚಕ್ರ ವಾಹನ ವಶ.
   
ಮೈಸೂರು: ದ್ವಿಚಕ್ರವಾಹನ ಕಳ್ಳನೊಬ್ಬನನ್ನು ಬಂಧಿಸಿರುವ  ನರಸಿಂಹರಾಜ ಠಾಣೆಯ ಪೊಲೀಸರು, ಆತನಿಂದ 1.59 ಲಕ್ಷ ರೂ ಬೆಲೆ ಬಾಳುವ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಬಾಣೂರು ಗ್ರಾಮದ ನಿವಾಸಿ ಶ್ರೀನಿವಾಸ ಬಂಧಿತ ಆರೋಪಿ . ಈತ  ಮೈಸೂರು-ಬೆಂಗಳೂರು ರಸ್ತೆಯ ಸರ್ಕಾರಿ ಐಟಿಐ ಕಾಲೇಜ್ ಬಳಿ ಒಂದು ಹೊಂಡಾ ಆಕ್ಟೀವಾ ಸ್ಕೂಟರನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಕಾರ್ಯಚರಣೆ ನಡೆಸಿದ ಪೊಲೀಸರು ಆತನನ್ನು ಹಿಡಿದು ವಿಚಾರ ಮಾಡಿದಾಗ, ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 01 ದ್ವಿ ಚಕ್ರ ವಾಹನ, ಮಂಡಿ ಠಾಣಾ ವ್ಯಾಪ್ತಿಯಲ್ಲಿ 02 ದ್ವಿ ಚಕ್ರ ವಾಹನಗಳನ್ನು ಹಾಗೂ ಬೆಂಗಳೂರಿನ ಇಂದಿರಾ ನಗರ ಮೋಟಪ್ಪನ ಪಾಳ್ಯದಲ್ಲಿ ಒಂದು ದ್ವಿ ಚಕ್ರ ವಾಹನ ಒಟ್ಟು 04 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದು, ಈತನಿಂದ ಒಟ್ಟು 1,59ಲಕ್ಷ ರೂ  ಬೆಲೆಯ ಹೊಂಡಾ ಆಕ್ಟಿವಾ ಸ್ಕೂಟರ್-3, ಬಜಾಜ್ ಪಲ್ಸರ್ ಬೈಕ್ – 1 ಗಳನ್ನು ಒಟ್ಟು 04 ದ್ವಿ ಚಕ್ರ ವಾಹನಗಳನ್ನು  ವಶಪಡಿಸಿಕೊಂಡಿದ್ದು, ಲಷ್ಕರ್ ಪೊಲೀಸ್ ಠಾಣೆಯ 01 ಪ್ರಕರಣ, ಮಂಡಿ ಠಾಣೆಯ 02 ಪ್ರಕರಣ ಹಾಗೂ ಬೆಂಗಳೂರಿನ 01 ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ    ಪತ್ತೆ   ಕಾರ್ಯದಲ್ಲಿ ನರಸಿಂಹರಾಜ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್‍ರವರಾದ ಗಜೇಂದ್ರ ಪ್ರಸಾದ್, ಪಿ.ಎ.ಸ್.ಐ.ರವರುಗಳಾದ ರಾಜೇಂದ್ರ ಪ್ರಸಾದ್,  ಶಬ್ಬೀರ್ ಹುಸೇನ್ ಎ.ಎಸ್.ಐ.ಶ್ರೀ.ಸಣ್ಣಭೈರ, ಮುಖ್ಯಪೇದೆ ವಸಂತ ಸಹೋದ್ಯೋಗಿಗಳಾದ ರಮೇಶ, ಮಂಜುನಾಥ, ಮಹದೇವ, ಪುರುಷೋತ್ತಮ ರವರುಗಳು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment