Friday 17 October 2014

ಎಪಿಎಂಸಿಗೆ ರೇಮ್ಸ್‍ ಕಂಪನಿಯ ಪ್ರತಿನಿಧಿ : ಆಕ್ರೋಶ

ಅ.18- ಬೆಲ್ಲ ಮಾರಾಟ ಕುರಿತಂತೆ ಕರೆದಿದ್ದ ಎಪಿಎಂಸಿ ಅಧಿಕಾರಿಗಳು, ವರ್ತಕರು, ಆಲೆಮನೆ ಮಾಲೀಕರು ಹಾಗೂ ರೈತರ ಸಭೆಗೆ ಸಭೆಯ ನಿಯಮ ಉಲ್ಲಂಘಿಸಿ ಹಾಜರಾಗಿದ್ದ ರೇಮ್ಸ್ ಸಾಫ್ಟ್‍ವೇರ್ ಕಂಪನಿಯ ಪ್ರತಿನಿಧಿಗಳನ್ನು ಭಾಗವಹಿಸಿದನ್ನು ಕಂಡು ಕುಪಿತಗೊಂಡ ಸಭಿಕರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದು ವಾರದಿಂದ ಬೆಲ್ಲ ಮಾರಾಟ ಸ್ಥಗಿತಗೊಂಡಿರುವುದರ ವಿಚಾರವಾಗಿ ಮಂಡ್ಯ ಜಿಲ್ಲಾ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಇಂತಹ ಅನಿರೀಕ್ಷಿತ ಘಟನೆ ನಡೆಯಿತಲ್ಲದೆ ರೇಮ್ಸ್ ಸಾಪ್ಟ್‍ವೇರ್ ಪ್ರತಿನಿಧಿಯು ಸಭೆಯಲ್ಲಿ ಜರುಗುತ್ತಿದ್ದಂತಹ ಘಟನೆಯನ್ನು ತನ್ನ ಮೊಬೈಲ್‍ನಲ್ಲಿ ರೆಕಾರ್ಡ್ ಮಾಡುತ್ತಿದ್ದಂತಹ ಘಟನೆ ಜರುಗಿತು. ಇದನ್ನು ಕಂಡ ಸಭಿಕರು ಆತನ ಮೊಬೈಲ್‍ನ್ನು ವಷಕ್ಕೆ ಪಡೆದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿ ಒಪ್ಪಿಸಿ ನಂತರ ರೆಕಾರ್ಡ್ ಮಾಡಲಾದ ಸಂಗತಿಯನ್ನು ತೆಗೆಯಲಾಯಿತು. ಎಪಿಎಂಸಿ ಅಧಿಕಾರಿ ರಾಣಿ ಮಾತನಾಡಿ, ಗೋದಾಮಿನಲ್ಲಿರುವ ಬೆಲ್ಲವನ್ನು ಖಾಲಿ ಮಾಡಲು ಬಹಿರಂಗ ಹರಾಜಿನಲ್ಲೇ ನೀವು ಪ್ರಕ್ರಿಯೆಯನ್ನು ಮುಂದುವರಿಸಿ ಎಂದು ಹೇಳಿದರು. ನಾವು ಇ-ಟೆಂಡರ್ ಪದ್ಧತಿಯನ್ನು ನೀವು ನಡೆಸಬೇಕು ಎಂದಾಗ ಯಾವುದೇ ರೀತಿಯ ತಕರಾರು ನೀಡದೆ ಅದನ್ನು ಬದ್ಧವಾಗಿ ಕಾರ್ಯವನ್ನು ನಿರ್ವಸಿದೆವು. ಇದಕ್ಕೆ ಸಂಬಂಧಿಸಿದೆ ಕೆಲವು ಹೋರಾಟಗಳನ್ನು ಸಹ ಮಾಡಿದೆವು. ಇನ್ನು ಮುಂದೆ ಈ ರೀತಿಯ ತಪ್ಪು ಮಾಡಲು ನಾವು ಸಿದ್ಧರಿಲ್ಲ ನಮಗೆ ಬಹಿರಂಗ ಹರಾಜು ಮಾಡಬಹುದು ಎಂದು ಲಿಖಿತ ರೂಪದಲ್ಲಿ ಬರೆದು ನೀಡಬೇಕು ಎಂದು ವರ್ತಕರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ರಾಣಿ ನಾವು ಲಿಖಿತ ರೂಪದಲ್ಲಿ ನೀಡಲು ಆಗುವುದಿಲ್ಲ ನೀವು ಬಹಿರಂಗವಾಗಿ ಬೆಲ್ಲವನ್ನು ವಹಿವಾಟಿನಲ್ಲಿ ಪ್ರಾರಂಭಿಸಬಹುದು ಎಂದು ಹೇಳಿದಕ್ಕೆ ವರ್ತಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಚಾಮರಾಜನಗರ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಲ್ಲವನ್ನು ಬಹಿರಂಗ ಹರಾಜು ಮಾಡಬಹುದು ಎಂದು ಲಿಖಿತ ರೂಪದಲ್ಲಿ ನೀಡಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲೂ ಸಹ ಲಿಖಿತ ರೂಪದಲ್ಲಿ ನೀವು ನಮಗೆ ನೀಡಿದರೆ ನಾವು ನಮ್ಮ ಕಾರ್ಯವನ್ನು ಮುಂದುವರಿಸುತ್ತೇವೆ ಎಂದು ಆಗ್ರಹಿಸಿದರು. ಆಲೆಮನೆ ಮಾಲೀಕ ಮಾತನಾಡಿ, ಕೆಲವು ದಿನಗಳಿಂದ ಬೆಲ್ಲವನ್ನು ಮಾರಾಟ ಮಾಡದೆ ಅಪಾರ ನಷ್ಟದಲ್ಲಿದ್ದೇವೆ. ಎಪಿಎಂಸಿ ಅಧಿಕಾರಿಗಳು ಯಾವುದೋ ಕಂಪನಿಗೆ ಮಣೆಹಾಕಿಕೊಂಡು ಸರಿಯಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಬೆಲ್ಲವನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಪಿಎಂಸಿ ವರ್ತಕ ಮಹೇಶ್‍ಕುಮಾರ್ ಮಾತನಾಡಿ, ಸುಮಾರು 7-8 ವರ್ಷಗಳಿಂದ ಜಿಲ್ಲಾ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದೇನೆ. ಲೈಸೆನ್ಸ್‍ಗೆ ಅರ್ಜಿಯನ್ನು ಸಲ್ಲಿಸಿದ್ದು, ಲೈಸೆನ್ಸ್ ಬಂದಿದ್ದರು ಸಹ 2008 ರಿಂದ ನನಗೆ ಲೈಸೆನ್ಸ್‍ನ ಪ್ರತಿಯನ್ನು ನೀಡದೆ ವಂಚಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇತ್ತೀಚೆಗೆ ಬ್ಯಾಂಕ್ ಖಾತೆಗೆ ಲೈಸೆನ್ಸ್ ನೀಡಬೇಕು ಎಂದು ಕೇಳಿದಾಗ ನಾನು ಬಂದು ಲೈಸೆನ್ಸ್ ಕೇಳಿದಾಗ ನಾನ್ನ ಲೈಸೆನ್ಸ್ ಸೇರಿದೆತ ಉಳಿದ ಸುಮಾರು 80 ಮಂದಿಗೆ ವರ್ತಕರ ಲೈಸೆನ್ಸ್‍ಗೆ ಸಹಿ ಮಾಡಿಲ್ಲ. ಆದರೆ ಪ್ರತಿವರ್ಷ ಇಂತಿಷ್ಟು ಎಂದು ಹಣವನ್ನು ಮಾತ್ರ ಕಟ್ಟಿಸಿಕೊಳ್ಳುತ್ತಿದ್ದಿದ್ದಾರೆ. ಈ ಕುರಿತಂತೆ ಎಪಿಎಂಸಿ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗುವದು ಎಂದು ತಿಳಿಸಿದರು. ಸಭೆಯಲ್ಲಿ ಎಪಿಎಂಸಿ ಅಧಿಕಾರಿ ಪುಷ್ಪ ಸೇರಿದಂತೆ ಅನೇಕ ವರ್ತಕರು, ಆಲೆಮನೆ ಮಾಲೀಕರು ಹಾಗೂ ರೈತರು ಪಾಲ್ಗೊಂಡಿದ್ದರು.

No comments:

Post a Comment