Monday 20 October 2014

ಅಕ್ಟೋಬರ್ ಅಂತ್ಯದೊಳಗೆ ವಕ್ಫ್ ಆಸ್ತಿ ಸರ್ವೇ ಪೂರ್ಣಗೊಳಿಸಲು ಸಚಿವರ ಸೂಚನೆ


                 ಅಕ್ಟೋಬರ್  ಅಂತ್ಯದೊಳಗೆ ವಕ್ಫ್ ಆಸ್ತಿ ಸರ್ವೇ ಪೂರ್ಣಗೊಳಿಸಲು ಸಚಿವರ ಸೂಚನೆ
     ಮೈಸೂರು,ಅ.20. ವಕ್ಫ್‍ಗೆ ಸೇರಿದ ಆಸ್ತಿಯ ಸರ್ವೇಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ರಾಷ್ಟ್ರದಲ್ಲೇ ಸರ್ವೇ ಪೂರೈಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪ್ರಾತರಾಗಲು ಅಧಿಕಾರಿಗಳು ಕ್ರಮವಹಿಸಬೇಕೆಂದು ಪೌರಾಡಳಿತ ಸಾರ್ವಜನಿಕ ಉದ್ದಿಮೆಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್ ಸಚಿವ ಡಾ| ಖಮರುಲ್ ಇಸ್ಲಾಂ ತಿಳಿಸಿದರು.
    ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಮೈಸೂರು ವಿಭಾಗ ಮಟ್ಟದ ನಗರ ಸ್ಥಳೀಯ ಸಂಸ್ಥೆಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ರಾಜ್ಯದಲ್ಲಿ 33 ಸಾವಿರ ವಕ್ಫ್ ಆಸ್ತಿ ಇದ್ದು, ಇದರಲ್ಲಿ 20 ಸಾವಿರ ಆಸ್ತಿಯನ್ನು ಸರ್ವೇ ಮಾಡಲಾಗಿದೆ. ಗುಲ್ಬರ್ಗಾ,  ಯಾದಗಿರಿ, ಬೀದರ್, ರಾಯಚೂರು ಹಾಗೂ ಕೊಡುಗು ಜಿಲ್ಲೆಗಳ ತಾಲೂಕುಗಳಲ್ಲಿ ಸರ್ವೇ ಕಾರ್ಯವೂ ಬಹುತೇಕ ಪೂರ್ಣಗೊಂಡಿದೆ. ವಕ್ಫ್ ಆಸ್ತಿ ಸರ್ವೇ ಕಾರ್ಯವನ್ನು ಖಾಸಗಿ ಸರ್ವೇರೆಗಳಿಂದ ಮಾಡಿಸದೆ,  ಸರ್ಕಾರಿ ಹಾಗೂ ಜಿಲ್ಲಾಡಳಿತ ನಿಯೋಜಿಸುವ ಸರ್ಕಾರಿ ನಿವೃತ್ತ ಸರ್ವೇರೇಗಳಿಂದಲೇ ಮಾಡÀಬೇಕು ಎಂದು ಸಚಿವರು ಹೇಳಿದರು.
   ಸÀರ್ಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರೂಪಿಸಲಾಗಿರುವ ಹಲವು ಯೋಜನೆಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸಲು ಪ್ರತಿ ಜಿಲ್ಲೆಗೆ ಮೌಲಾನ ಆಜಾದ್ ಹೆಸರಿನಲ್ಲಿ ಭವನ ನಿರ್ಮಾಣ ಮಾಡಲು ಮುಂದಾಗಿದೆ. ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ನಿಗಧಿ ಪಡಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಭೂಮಿಯನ್ನು ಗುರುತಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಸಚಿವರು ಹೇಳಿದರು.
    ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ವಿವಿಧ ಯೋಜನೆಯಡಿಯಲ್ಲಿ ಅನುದಾನಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಸರ್ಕಾರಕ್ಕೆ ಈ ಸಂಸ್ಥೆಗಳ ವತಿಯಿಂದ ನಿರೀಕ್ಷಿಸಿದ ಮಟ್ಟದಲ್ಲಿ ತೆರಿಗೆ ಸೇರಿದಂತೆ ಯಾವುದೇ ಮೂಲಗಳಿಂದ ಕಂದಾಯ ಬರುತ್ತಿಲ್ಲ. ಅಧಿಕಾರಿಗಳು ಆದ್ಯತೆ ಮೇರೆಗೆ ಸರ್ಕಾರಕ್ಕೆ ಸೇರಬೇಕಾಗಿರುವ ಕಂದಾಯವನ್ನು ಬರುವಂತೆ ಮಾಡಲು ಶೀಘ್ರ ಕ್ರಮವಹಿಸಬೇಕೆಂದು ತಿಳಿಸಿದರು.
    ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಯಾವುದೇ ಕಾರಣಕ್ಕೂ ಅನುದಾನಗಳು ಹಿಂತಿರುಗಿ ಹೋಗದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಕಾಮಗಾರಿಗಳ ಪರಿಶೀಲನೆ ಮಾಡಲಾಗುವುದು. ತಪ್ಪು ಮಾಡಿರುವುದು ಕಂಡುಬಂದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ದಾಕ್ಷಿಣ್ಯವಾಗಿ ಸಂಬಂಧ ಅಧಿಕಾರಿಯನ್ನು ಅಮಾನತ್ತು ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದರು.
    ಎಸ್.ಎಫ್.ಸಿ. ಅಡಿಯಲ್ಲಿ ನೀಡಲಾಗುವ 22.75% ಮತ್ತು 7.25% ಅನುದಾನಗಳು ಸಂಪೂರ್ಣವಾಗಿ ಸದ್ಬಳಕೆಯಾಗಬೇಕು. ಈ ಯೋಜನೆಯಡಿ ನೀಡಲಾಗುವ ಅನುದಾನಗಳು ವೆಚ್ಚ ಮಾಡುವಲ್ಲಿ ಅಧಿಕಾರಿಗಳಿಗೆ ಗೊಂದಲವಿದ್ದಲ್ಲಿ ಸರ್ಕಾರದ ವತಿಯಿಂದ ಮಾರ್ಗಸೂಚಿಯನ್ನು ಆದೇಶಿಸಲಾಗುವುದು ಎಂದರು.
   ಪ್ರಾದೇಶಿಕ ಆಯುಕ್ತೆ ರಶ್ಮಿಮಹೇಶ್,  ಪೌರಾಡಳಿತ ಇಲಾಖೆಯ ನಿರ್ದೇಶಕಿ ಮಂಜುಳ, ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಶೇಖರಪ್ಪ, ಅಪರ ಪ್ರಾದೇಶಿಕ ಆಯುಕ್ತೆ ಗಾಯತ್ರಿ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು. 
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಅರ್ಜಿ ಆಹ್ವಾನ
     ಮೈಸೂರು,ಅ.20.ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು ಯಕ್ಷಗಾನ(ತೆಂಕು, ಬಡಗು ಮತ್ತು ಘಟ್ಟದಕೋರೆ), ಮೂಡಲಪಾಯ ಯಕ್ಷಗಾನ, ಗೊಂಬೆಯಾಟ(ಸೂತ್ರದ ಮತ್ತು ತೊಗಲುಗೊಂಬೆ), ಶ್ರೀಕೃಷ್ಣಪಾರಿಜಾತ, ಸಣ್ಣಾಟ, ದೊಡ್ಡಾಟ ಇತ್ಯಾದಿ ಕಲಾಪ್ರಕಾರಗಳಿಗೆ ಸಂಬಂಧಿಸಿದ 2013ರಲ್ಲಿ ಪ್ರಕಟಿಸಿರುವ ಪುಸ್ತಕಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲು ಲೇಖಕರಿಂದ ಅರ್ಜಿ ಆಹ್ವಾನಿಸಿದೆ.
     ಆಯ್ಕೆಯಾದ ಪುಸ್ತಕಕ್ಕೆ ರೂ. 5000/-ಗಳ ಬಹುಮಾನವನ್ನು ನೀಡಲಾಗುವುದು. ಯಕ್ಷಗಾನ ಮತ್ತು ಬಯಲಾಟದ ವಿವಿಧ ಆಯಾಮಗಳ ಬಗ್ಗೆ (ಸಂಗೀತ, ಆಹಾರ್ಯ, ಅಭಿನಯ ಇತ್ಯಾದಿ), ಸಂಶೋಧನೆ, ವಿಮರ್ಶೆ, ಜೀವನಚರಿತ್ರೆ, ಪ್ರಸಂಗ ಪುಸ್ತಕ ಇತ್ಯಾದಿ ಪ್ರಕಾರಗಳನ್ನು ಒಳಗೊಂಡ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಿದೆ, ಪುಸ್ತಕ ಬಹುಮಾನಕ್ಕೆ ಸಲ್ಲಿಸುವ ಪುಸ್ತಕವನ್ನು ಪಠ್ಯಕ್ಕಾಗಿ ಸಿದ್ಧಪಡಿಸಿರಬಾರದು. ಸಂಪಾದಿತ, ಅಭಿನಂದನಾ ಕೃತಿಯಾಗಿರಬಾರದು, ಸ್ವರಚಿತವಾಗಿರಬೇಕು. ಪ್ರಥಮ ಮುದ್ರಣ ಆವೃತ್ತಿಯಾಗಿರಬೇಕು.
     ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡಭವನ, ಎರಡನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-560002, ಇವರಿಗೆ ಅಕ್ಟೋಬರ್ 30 ರೊಳಗೆ ಅರ್ಜಿಯೊಂದಿಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸುವುದು.
    ಹೆಚ್ಚಿನ ವಿವರ ಹಾಗೂ ಅರ್ಜಿ ನಮೂನೆಯನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಲ್ಲಿ ಪಡೆಯಬಹುದು.
ಕರ್ನಾಟಕ ಕಲಾಮಂದಿರ: ಸಾರ್ವಜನಿಕರ ಬಳಕೆಗೆ ಆಹ್ವಾನ
    ಮೈಸೂರು,ಅ.20.ಕರ್ನಾಟಕ ಕಲಾಮಂದಿರವನ್ನು ನವೆಂಬರ್ 2 ರಿಂದ ಸಾರ್ವಜನಿಕರ ಬಳಕೆಗೆ ಕಾಯ್ದಿರಿಸಲಾಗುತ್ತಿದೆ. ಸಾರ್ವಜನಿಕರು ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮೈಸೂರು ಇವರನ್ನು ಸಂಪರ್ಕಿಸಿ ಕಾಯ್ದಿರಿಸಿಕೊಳ್ಳಬಹುದೆಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 21 ರಂದು ಸಿ.ಎಸ್.ಐ.ಆರ್-ಸಿ.ಎಫ್.ಟಿ.ಆರ್.ಐ ಸ್ಥಾಪನಾ ದಿನ
     ಮೈಸೂರು,ಅ.20.ಮೈಸೂರಿನ ಸಿ.ಎಫ್.ಐ.ಆರ್ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ಸಿ.ಎಸ್.ಐ.ಆರ್-ಸಿ.ಎಫ್.ಟಿ.ಆರ್.ಐ ಸ್ಥಾಪನಾ ದಿನ ಅಕ್ಟೋಬರ್ 21 ರಂದು ಸಂಜೆ 4 ರಿಂದ 5-30 ಗಂಟೆಗೆ ಸಿ.ಎಫ್.ಐ.ಆರ್ ಸಭಾಂಗಣದಲ್ಲಿ ನಡೆಯಲಿದೆ.
     ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥಸ್ವಾಮಿ ಅವರು ದಿವ್ಯ ಸಾನಿಧ್ಯ ವಹಿಸುವರು. ವಿಧಾನ ಪರಿಷತ್‍ನ ವಿರೋಧ ಪಕ್ಷದ ಮುಖ್ಯ ಸಜೇತಕರು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಸಿ.ಎಫ್.ಐ.ಆರ್ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನಿರ್ದೇಶಕ ಪ್ರೋ. ರಾಮ್ ರಾಜಶೇಖರನ್ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 
ಅಕ್ಟೋಬರ್ 25 ರಂದು ವಾರ್ಷಿಕ ವಿಶೇಷ ಶಿಬಿರ
     ಮೈಸೂರು,ಅ.20.ಟಿ.ನರಸೀಪುರ ತಾಲ್ಲೂಕಿನ ಬನ್ನೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಅಕ್ಟೋಬರ್ 22 ರಿಂದ 28 ರವರೆಗೆ ಮೇಗಳಕೊಪ್ಪಲುವಿನಲ್ಲಿ ಆಯೋಜಿಸಲಾಗಿದೆ.
    ಅಕ್ಟೋಬರ್ 25 ರಂದು ಬೆಳಗ್ಗೆ 10 ಗಂಟೆಗೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಕೃಷ್ಣೇಗೌಡ ಅವರು ಧ್ವಜಾರೋಹಣ ಮಾಡುವರು. ಬನ್ನೂರಿನ ಗ್ರೀನ್ ಲ್ಯಾಂಡ್ ಲಯನ್ಸ್ ಕ್ಲಬ್  ಅಫ್ ನಿಂದ ಕಣ್ಣಿನ ತಪಾಸಣೆ ಶಿಬಿರ ನಡೆಸುವರು. ಸಂಜೆ 4 ಗಂಟೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬೀದಿನಾಟಕ ಮತ್ತು ಚಲನ ಚಿತ್ರ ಪ್ರದರ್ಶನ ನಡೆಯಲಿದೆ. ನೀರು ಬಳಕೆದಾರರ ಸಂಘದ ಕೃಷ್ಣೇಗೌಡ ಅವರು ಅಧ್ಯಕ್ಷತೆ ವಹಿಸುವರು.
    ಗ್ರಾಮದ ಯಜನಮಾನರು ರಂಗೇಗೌಡ ರಂಗಣ್ಣ ಹಾಗೂ ಮಾಯಿಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅಕ್ಟೋಬರ್ 21 ರಂದು ಪೊಲೀಸ್ ಹುತ್ಮಾತರ ದಿನಾಚರಣೆ
ಮೈಸೂರು,ಅ.20.ಮೈಸೂರು ನಗರ, ಮೈಸೂರು ಜಿಲ್ಲೆ ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಕೆ.ಎಸ್.ಆರ್.ಪಿ. ಘಟಕಗಳಿಂದ ಪೊಲೀಸ್ ಹುತ್ಮಾತರ ದಿನಾಚರಣೆಯನ್ನು ಅಕ್ಟೋಬರ್ 21 ರಂದು ಬೆಳಗ್ಗೆ 8-30 ಗಂಟೆಗೆ ಮೈಸೂರು ಜಿಲ್ಲಾ ಪೊಲೀಸ್ ಕಚೇರಿ ಪಕ್ಕದಲ್ಲಿರುವ ಪೊಲೀಸ್ ಹುತ್ಮಾತರ ಸ್ಮಾರಕ ಉದ್ಯಾನವನದಲ್ಲಿ ನಡೆಯಲಿದೆ.
 ಪ್ರಾಜೆಕ್ಟ್  ಟೈಗರ್ ಮೈಸೂರಿನ ಎಪಿಸಿಸಿಎಫ್ ಸಿ. ಶ್ರೀನಿವಾಸನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  
ಅಪರಿಚಿತ ವ್ಯಕ್ತಿಯ ಶವ ಪತ್ತೆಗಾಗಿ ಮನವಿ
ಮೈಸೂರು,ಅ.20.ಮೈಸೂರು ರೈಲುನಿಲ್ದಾಣದ ವೇದಿಕೆ ನಂ. 6ರಲ್ಲಿ ಅಕ್ಟೋಬರ್  13 ರಂದು   ಸುಮಾರು 70 ವರ್ಷ ಅಪರಿಚಿತ ವ್ಯಕ್ತಿಯ ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಅಪರಿಚಿತ ವ್ಯಕ್ತಿಯ  ಐದುಕಾಲು ಅಡಿ ಎತ್ತರ, ಗೋಧಿ ಮೈಬಣ್ಣ, ತೆಳುವಾದ ಶರೀರ, ಕೋಲು ಮುಖ, ತಲೆಯಲ್ಲಿ ಸುಮಾರು 2 ಅಡಿ ಉದ್ದದ ಬಿಳಿ ಕೂದಲು ಮುಖದಲ್ಲಿ 1 ಇಂಚು ಉದ್ದದ ಬಿಳಿಯ ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾರೆ. ಮೃತದೇಹವನ್ನು ಆಸ್ಪತ್ರೆಯ ಬಿಳಿ ಬಣ್ಣದ ಬಟ್ಟೆಯಿಂದ ಮುಚ್ಚಿರುತ್ತದೆ.
ಮೃತ ವ್ಯಕ್ತಿ ದೇಹವÀನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ  ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.

No comments:

Post a Comment