Tuesday 28 October 2014

ಸುಭದ್ರ ಸಮಾಜಕ್ಕೆ ಕೌಟುಂಬಿಕ ವ್ಯವಸ್ಥೆ ಅಗತ್ಯ : ಪಾಟೀಲ

           ಸುಭದ್ರ ಸಮಾಜಕ್ಕೆ ಕೌಟುಂಬಿಕ ವ್ಯವಸ್ಥೆ ಅಗತ್ಯ : ಪಾಟೀಲ


ಮಂಡ್ಯ,ಅ.28- ಸುಭದ್ರ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆ ಅತ್ಯಗತ್ಯ ವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿ.ಕಾ.ಷೇ.ಪ್ರಾ ಅಧ್ಯಕ್ಷರಾದ ಚಂದ್ರಶೇಖರ್ ಪಾಟೀಲ ತಿಳಿಸಿದರು.
ನಗರದ ಹರ್ಡಿಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಲಾಗಿದ್ದ “ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ನಿಯಮ 2006ರ ಅನುಷ್ಟಾನ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನದಲ್ಲಿ ಕೌಟುಂಬಿಕ ವ್ಯವಸ್ಥೆಯು ಎದ್ದು ಕಾಣುತ್ತಲಿರುವುದರಿಂದ ಭಾರತವು ಸುಭದ್ರವಾಗಿದೆ. ಸಂಸಾರಗಳಲ್ಲಿ ಸಣ್ಣ ಪುಟ್ಟ ವ್ಯತಿರಿಕ್ತ ಭಾವನೆಗಳಿಗೆ ಒಳಗಾಗಿ ಅಹಿತರಕರ ಘಟನೆಗಳು ನಡೆಯುತ್ತಲೆ ಇರುತ್ತವೆ. ಇದನ್ನು ದೊಡ್ಡದನ್ನಾಗಿಸಿ ಹೊರ ತರುವುದು ಸರಿಯಲ್ಲ ಎಂದರು.
ಸಣ್ಣ ಸಣ್ಣ ಕೌಟುಂಬಿಕ ಕಲಹಗಳನ್ನು ಠಾಣೆಗಳ ಮತ್ತು ನ್ಯಾಯಾಲಯಗಳ ಮೆಟ್ಟಿಲೇರಿಸದೇ ಸಮಾಧಾನವಾಗಿ ಕುಳಿತು ಬಗೆ ಹರಿಸಿಕೊಳ್ಳುವುದು ಮತ್ತರವಾದ ಪಾತ್ರವನ್ನು ವಹಿಸುತ್ತವೆ ಎಂದು ಕಿವಿ ಮಾತನ್ನು ಹೇಳಿದರು.
ಸಂವಿಧಾನ ರಚನೆಗೂ ಮುನ್ನ ಮಹಿಳೆಯರಿಗೆ ಯಾವುದೇ ವಿಶೇಷ ಸ್ಥಾನ ಮಾನಗಳಿರಲಿಲ್ಲ, ಸಂವಿಧಾನ ಜಾರಿಯಾದ ನಂತರವಷ್ಟೇ ಅನೇಕ ಕಾಯ್ದೆಗಳು ಮತ್ತು ಮಹಿಳೆಯರಿಗೆ ವಿಶೇಷ ಹಕ್ಕುಗಳು ಜಾರಿಯಾದವು ಎಂದು ತಿಳಿಸಿದರು.
ದೌರ್ಜನ್ಯಗಳ ತಡೆಗೆ, ದೌರ್ಜನ್ಯಗಳಿಗೆ ಒಳಗಾದವರಿಗೆ, ಮಹಿಳೆಯರ ರಕ್ಷಣೆಗೆ ಕಾಯ್ದೆಗಳು ಜಾರಿಯಾಗಿದ್ದು ಇವನ್ನು ಅರ್ಥೈಸಿಕೊಳ್ಳಬೇಕಾದಂತಹ ಅವಶ್ಯಕತೆ ಎಲ್ಲರಿಗೂ ಇರುತ್ತದೆ.
ಮಹಿಳೆಯರಿಗೆ ಇರುವಂತಹ ಕಾಯ್ದಗಳನ್ನು ತಿಳಿದುಕೊಂಡು ಸುಭದ್ರ ಸಮಾಜವನ್ನು ಕಟ್ಟುವಲ್ಲಿ ಎಲ್ಲರೂ ಸಹಕಾರಿಯಾಗಿ ಭಾಗವಹಿಸುವಂತೆ ಕರೆ ನೀಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾನಂದ ದೊಡ್ಡಮನಿ ಮಾತನಾಡಿ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯಲು ಕಾರಣ ಅವರಲ್ಲಿ ಅವರ ಹಕ್ಕುಗಳ ಅರಿವು ಇಲ್ಲದೆ ಇರುವುದೇ ಕಾರಣ, 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಒಂದರೂ ಸಹ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆಗಳಂತಹ ಅಮಾನುಷ ಕೃತ್ಯಗಳು ನಡೆಯುತ್ತಲೆ ಇವೆ ಎಂದು ವಿಷಾಧಿಸಿದರು.
ಮಹಿಳಾದೌರ್ಜನ್ಯ ಕಾಯ್ದೆ 2005ರಲ್ಲಿ 35 ಕಾನೂನುಗಳಿದ್ದು, ಮಹಿಳಾ ದೌರ್ಜನ್ಯದ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಯ ಪಾತ್ರ , ವೈದ್ಯರ ಪಾತ್ರ ಸೇರಿದಂತೆ ಹಲವಾರು ನಿಮಯಮಗಳನ್ನು ತಿಳಿಸಲಾಗಿದೆ.
ಕಾನೂನಿನ ಚೌಕಟ್ಟಿನಲ್ಲಿ ಪ್ರತಿಯೊಬ್ಬರೂ ನಡೆದಾಗ ದೇಶದಲ್ಲಿ ಎಷ್ಟೋ ದೌರ್ಜನ್ಯಗಳು, ಹಲ್ಲೆಗಳನ್ನು ತಡೆಯಬಹುದು ಇದರಿಂದ ಒಳ್ಳೆಯ ಜೀವನವನ್ನು ನಡೆಸಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರಯ್ಯ, ಜಿಲ್ಲಾಧಿಕಾರಿ ಅಜಯ್‍ನಾಗಭೂಷಣ್, ವಕೀಲ ಸಂಘದ ಅಧ್ಯಕ್ಷ ಬಸವರಾಜು, ಮತ್ತು ವಕೀಲ ಬಿ.ಟಿ.ವಿಶ್ವನಾಥ್ ಇತರರಿದ್ದರು.



No comments:

Post a Comment