Friday 17 October 2014

ಐ.ಎ.ಎಸ್‍ ಅಧಿಕಾರಿ ರಶ‍್ಮಿ ಮೇಲಿನ ಹಲ್ಲೆ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ

ಮೈಸೂರು, ಅ.17- ಮೈಸೂರು ವಲಯದ ಪ್ರಾದೇಶಿಕ ಆಯುಕ್ತರೂ, ಎ ಟಿ ಐ ಸಂಸ್ಥೆಯ ಮಹಾ ನಿದೇರ್ಶಕರೂ ಆದ ಐಎಎಸ್ ಆಧಿಕಾರಿ ರಶ್ಮಿ ಮಹೇಶ್ ಆವರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ರಶ್ಮಿ ರವರು ಒಬ್ಬ ನಿಷ್ಠಾವಂತ ಪ್ರಮಾಣಿಕ ಅಧಿಕಾರಿಯಾಗಿದ್ದು, ಎಟಿಐ ಸಂಸ್ಥೆಯಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕಲೆಹಾಕಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದುದೇ ಅವರ ಮೇಲಿನ ಹಲ್ಲೆಗೆ ಕಾರಣವಾಗಿದೆ. ಇವರ ಮೇಲಿನ ಹಲ್ಲೆಗೆ ಎಟಿಐ ಆಧಿಕಾರಿ ವೆಂಕಟೆಶ್ ಆತ್ಮಹತ್ಯೆ ಒಂದು ನೆಪಮಾತ್ರವಷ್ಟೆ, ಇದರ ಹಿಂದೆ ಭ್ರಷ್ಠಾಚಾರಿಗಳ ದೊಡ್ಡ ಜಾಲವೇ ಇದೆ ಆದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ಸರಿಯಾದ ರೀತಿಯ ತನಿಖೆ ನಡೆಸಿ ರಶ್ಮಿ ಯವರಿಗೆ ನ್ಯಾಯ ದೊರಕಿಸಿಕೊಡಬೆಕು, ರಶ್ಮಿ ಯವರ ಮೇಲೆ ಹಲ್ಲೆ ನಡೆಸಿದವರಿಗೆ ತಕ್ಕ ಶಕ್ಷೆ ಆಗಬೇಕು, ಇಂದು ಮುಂದೆ ಯಾವುದೆ ಪ್ರಮಾಣಿಕ ಅಧಿಕಾರಿ ಮೇಲೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೆಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮೈಸೂರಿನ ವಿಶ್ವಮಾನವ ವಿಧ್ಯಾರ್ಥಿ ಯುವ ವೇಧಿಕೆ, ಒಡನಾಡಿ ಸೇವಸಂಸ್ಥೆ ಕಾರ್ಯಕರ್ತರು, ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳ ಕ್ಷೇಮಾಭಿವೃದ್ಧಿ ಸಂಘ, ಬಹುಜನ ವಿಧ್ಯಾರ್ಥಿ ಸಂಘ, ಪ್ರತಿಬಟನೆ ನಡೆಸಿದರೆ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಪತ್ರಿಕಾ ಘೋಷ್ಠಿ ನಡೆಸಿ ಖಂಡನೆ ವ್ಯಕ್ತ ಪಡಿಸಿತು. ಪಾಥಿಫೌಂಡೆಷನ್ ವತಿಯಿಂದಲೂ ಸುದ್ಧಿಘೋಷ್ಠಿಯಲ್ಲಿ ರಶ್ಮಿ ಮೇಲಿನ ಹಲ್ಲೆಯನ್ನು ಉಗ್ರವಾಗಿ ಖಂಡಿಸಲಾಯಿತು.

No comments:

Post a Comment