Tuesday 7 October 2014

ಪಾಂಡವಪುರ: ಸಮಗ್ರ ಗ್ರಾಮೀಣ ಅಭಿವೃದ್ದಿಯ ಕಾರ್ಯಕ್ರಮಗಳು ಪರಿಣಾಮಕಾರಿ ಅನುಷ್ಠಕ್ಕಾಗಿ ರಾಜ್ಯ ಸರ್ಕಾರವು ನೀಡಲಾಗುವ 2013-14ನೇ ಸಾಲಿನ `ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕಾರ' ತಾಲೂಕಿನ ಚಿನಕುರುಳಿ ಗ್ರಾಮ ಪಂಚಾಯಿತಿಗೆ ಲಭಿಸಿದೆ ಎಂದು ಗ್ರಾ.ಪಂ.ಅಧ್ಯಕ್ಷ ಸಿ.ಅಶೋಕ್ ತಿಳಿಸಿದ್ದರು.
ತಾಲೂಕಿನ ಚಿನಕುರಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು, ಈಚೇಗೆ ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೇಟ್ ಹಾಲ್‍ನಲ್ಲಿ ನಡೆದ ಗಾಂಧಿ ಜಯಂತಿಯಂದು ಈ ಪ್ರಶಸ್ತಿ ಪುರಸ್ಕಾರದೊಂದಿಗೆ ರೂ.5 ಲಕ್ಷ ಪ್ರೋತ್ಸಾಹ ಧನದ ಚೆಕ್‍ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರಾ.ಪಂ.ಅಧ್ಯಕ್ಷ ಸಿ.ಅಶೋಕ್ ಮತ್ತು ಪಿಡಿಒ ಆರತಿಕುಮಾರಿ ಅವರಿಗೆ ಪ್ರಧಾನ ಮಾಡಿದರು ಎಂದ ಅವರು, ಜಿಲ್ಲೆಯ ಆರು ತಾಲೂಕುಗಳಿಗೆ ಈ ಪ್ರಶಸ್ತಿಯು ಲಭಿಸಿದ್ದು, ಜಿಲ್ಲೆವಾರು ಪಟ್ಟಿಯಲ್ಲಿ ಚಿನಕುರುಳಿ ಮೊದಲನೇ ಸ್ಥಾನದಲ್ಲಿದೆ ಎಂದು ಹರ್ಷವ್ಯಕ್ತಪಡಿಸಿದರು.
ಚಿನಕುರುಳಿ ಗ್ರಾಮ ಪಂಚಾಯಿತಿಯೂ ವಸತಿ ರಹಿತ ಕುಟುಂಬಗಳ ಗುರುತಿಸುವಿಕೆಗೆ ಹೆಚ್ಚು ಹೊತ್ತು ನೀಡುತ್ತಿದ್ದು ವಸತಿ ಇಲ್ಲದ ಕುಟುಂಬಗಳಿಗೆ ವಸತಿ ನೀಡುವುದರ ಜತೆಗೆ ಮನೆ ನಿರ್ಮಾಣ ಮಾಡಿಕೊಡಲು ಉದ್ದೇಶಿಸಲಾಗಿದೆ. ಜತೆಗೆ ವೈಯಕ್ತಿಕ ಅನುಧಾನ, ಕುಡಿಯುವ ನೀರಿನ ಸೌಲಭ್ಯ, ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಡಲಾಗುವುದೆಂದರು.
13ನೇ ಹಣಕಾಸು ಯೋಜನೆಯಡಿ ನೀಡಲಾಗಿರುವ ಅನುಧಾನವನ್ನು ನಿಗದಿತ ವೇಳೆಯಲ್ಲಿ ಬಳಕೆ ಮಾಡಿಕೊಂಡಿರುವುದು, ಶಾಸನಬದ್ದ ಅನುಧಾನ ವಿನಿಯೋಗ, ತೆರಿಗೆ ವಸೂಲಾತಿ, ನೀರಿನ ತೆರಿಗೆ, ಘನತ್ಯಾಜ್ಯ ನಿರ್ವಾಹಣೆ ಕುರಿತಂತೆ `ಸಕಾಲ' ಸೇವೆಯಲ್ಲಿ ಬರುವ ಅರ್ಜಿಗಳನ್ನು ನಿಗದಿತ ವೇಳೆಯಲ್ಲಿ ವಿಲೇವಾರಿ ಮಾಡಿರುವುದು ಸೇರಿದಂತೆ ವಿದ್ಯುತ್ ಬಿಲ್ಲು ಪಾವತಿ ಶೇ.40ರಷ್ಟು, ತೆರಿಗೆ ಪರಿಷ್ಕರಣೆ, ನೀರಿನ ತೆರಿಗೆ ಪರಿಷ್ಕರಣೆ, ಗ್ರಾಮ ಪಂಚಾಯಿತಿ ನೌಕರರಿಗೆ ಪ್ರತಿ ತಿಂಗಳು ನಿಗದಿತ ಅವಧಿಯಲ್ಲಿ ಸಂಬಳ ಪಾವತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ 15 ಗ್ರಾಮಗಳ ಆಸ್ತಿ ವಿವರಗಳನ್ನು ಗಣಕೀಕರಣಗೊಳಿಸಿ ಪಂಚತಂತ್ರದಲ್ಲಿ ಅಳವಡಿಸಿರುವುದು, ಹಾಗೆಯೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆದ ಮಾಸಿಕ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ನಡೆದ ನಡವಳಿಗಳನ್ನು ಪಂಚತಂತ್ರದಲ್ಲಿ ಅಳವಡಿಸಿರುವುದು, ಗ್ರಾ.ಪಂ. ವ್ಯಾಪ್ತಿಗೆ ಒಳ ಪಡುವ ವಿದ್ಯುತ್ ಸರಭರಾಜು ಮಾಡಲು ನೀಡಲಾಗಿರುವ ವಿದ್ಯುತ್ ಧೃಡೀಕರಣ ಪತ್ರದ ಬಗ್ಗೆ ಪಂಚತಂತ್ರದಲ್ಲಿ ಅಳವಡಿಕೆ, ಗ್ರಾಮ ಪಂಚಾಯಿತಿಯಲ್ಲಿ ವಿನಿಯೋಗಿಸಲಾಗಿರುವ ಮಾಸಿಕ ಬ್ಯಾಂಕ್ ಲೆಕ್ಕವನ್ನು ಪಂಚತಂತ್ರದಲ್ಲಿ ಅಳವಡಿಸಿರುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಶಿಸ್ತುಬದ್ದವಾಗಿ ನಿರ್ವಹಣೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಅವರು, ರಾಜ್ಯದಲ್ಲಿ 10 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ `ಬಯಲು ಶೌಚಾಲಯ ಮುಕ್ತ ಗ್ರಾಮ' ಎಂದು ಪರಿಗಣಿಸಲಾಗಿದೆ. ಜತೆಗೆ ಬರುವ ಗಣರಾಜ್ಯೋತ್ಸವ ದಿನದಂದು 1ಸಾವಿರ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯಿತಿ ಎಂದು ಗುರುತಿಸಲು ಉದ್ದೇಶಿಸಲಾಗಿದ್ದು, ಅದರಲ್ಲೂ ಚಿನಕುರಳಿ ಗ್ರಾಮ ಪಂಚಾಯಿತಿಯನ್ನು ಬಯಲು ಶೌಚಾಲಯ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿ ಮಾಡಬೇಕೆನ್ನುವ ಬಯಕೆಯಾಗಿದ್ದು ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು, ಸದಸ್ಯರು, ಮುಖಂಡರು ತಮ್ಮ ಜತೆ ಕೈಜೋಡಿಸಿ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ಹಾಗೆಯೇ ಈ ಹಿಂದೆ ಚಿನಕುರಳಿ ಗ್ರಾಮ ಪಂಚಾಯಿತಿಗೆ 2010-11ನೇ ಸಾಲಿನ `ನಿರ್ಮಲ ಗ್ರಾಮ ರಾಷ್ಟ್ರೀಯ ಪ್ರಶಸ್ತಿ' ಪುರಸ್ಕಾರದ ಜತೆಗೆ ರೂ.4 ಲಕ್ಷ ಪ್ರೋತ್ಸಾಹ ಧನ ಲಭಿಸಿರುವುದಾಗಿ ಅವರು ತಿಳಿಸಿದರು.
ಉಪಾಧ್ಯಕ್ಷೆ ಜಯಮ್ಮ, ಮಾಜಿ ಅಧ್ಯಕ್ಷರಾದ ಜಯರಾಮೇಗೌಡ, ಕಾಳೇಗೌಡ, ಸದಸ್ಯರಾದ ಪಾಷ, ಯೋಗೇಂದ್ರ,
ಜಯರಾಮು, ಸ್ವಾಮೀಗೌಡ, ಪ್ರಕಾಶ್, ಪದ್ಮಮ್ಮ, ಅನ್ನಪೂರ್ಣ, ಪಿಡಿಒ ಆರತಿಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

No comments:

Post a Comment