Friday 17 October 2014

ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ‍್ಯಕ್ಷರುಗಳ ಆಯ್ಕೆ

ಮೈಸೂರು, ಅ.17- ಮೈಸೂರು ನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅಧಯಕ್ಷರುಗಳನ್ನು ಇಂದು ಪಾಲಿಕೆಯಲ್ಲಿ ಆಯ್ಕೆ ಮಾಡಲಾಯಿತು. ಅದ್ಯಕ್ಷರುಗಳಾಗಿ 46ನೇ ವಾರ್ಡ್‍ನ ಹಸೀನಾತಾಜ್ ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಗೆ ಆಯ್ಕೆಯಾಗಿದ್ದಾರೆ. ಇವರ ನಾಯಕತ್ವದ ಸದಸ್ಯರುಗಳಾಗಿ ಆರ್. ಅನಂತು,ಎನ್. ಸುನಿಲ್‍ಕುಮಾರ್, ಪಿ.ಪ್ರಶಾಂತ್, ಬಿ.ಡಂ.ನಟರಾಜ್, ಟಿ. ಗಿರೀಶ್‍ಪ್ರಸಾದ್, ಎಸ್. ಬಾಲಸುಬ್ರಮಣ್ಯ ರವರುಗಳು ಇದ್ದಾರೆ. ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ26ನೇ ವಾರ್ಡ್‍ನ ಎಂ.ಶಿವಣ್ಣ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇವರ ನಾಯಕತ್ವದ ಸದಸ್ಯರುಗಳಾಗಿ ಸಮೀನಾ ಜಬೀನ್, ತಸ್ನೀಮ್, ಟಿ. ರಾಮು, ಬಿ.ವಿ.ಮಂಜುನಾಥ್, ಎಂ.ಬಿ. ಜಗದೀಶ್, ಆರ್. ರವೀಂದ್ರಕುಮಾರ್ ಇದ್ದಾರೆ. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ 2ನೇ ವಾರ್ಡ್ ನ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಇವರ ಜೊತೆಗೆ ಸದಸ್ಯರುಗಳಾಗಿ ಜೆ.ಎಸ್.ಜಗದೀಶ್, ಬಿ. ಭಾಗ್ಯವತಿ, ಶಂಷಾದ್‍ಬೇಗಂ, ಎಸ್. ಬಾಲು, ಎಂ.ಇಂದಿರಾ, ಜಿ.ಹೆಚ್.ವನಿತಾ ರವರುಗಳು ಆಯ್ಕೆಯಾಗಿದ್ದಾರೆ. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ 45ನೇ ವಾರ್ಡ್‍ನ ಬಿ.ಕೆ.ಪುಷ್ಪವತಿ ಆಯ್ಕೆಯಾಗಿದ್ದು, ಇವರ ಬೆಂಬಲಿಗ ಸದಸ್ಯರಾಗಿ ಎಂ. ಸುನಿಲ್, ಎಸ್. ಉಮಾಮಣ, ಆರ್. ಕಮಲ, ಮಹದೆವಪ್ಪ, ಅನುಸೂಯ, ರಾಮ್‍ಪ್ರಸಾದ್ ಆಯ್ಕೆಯಾಗಿದ್ದಾರೆ. ಈ ನಾಲ್ಕು ಮಂದಿ ಅಧ್ಯಕ್ಷರುಗಳು ಆಯ್ಕೆಯಾಗಿರು ವಿಷಯವನ್ನು ಮೇಯರ್ ಆರ್.ಲಿಂಗಪ್ಪ ಹಾಗೂ ಉಪ ಮೇಯರ್ ಮಹದೇವಮ್ಮ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬಹಿರಂಗ ಪಡಿಸಲಾಯಿತು.

No comments:

Post a Comment