Wednesday 8 October 2014

ಪರ್‍ಮಿಟ್ ಹೊಂದಿರುವವರಿಗೆ ಮರಳು ನೀಡುವಂತೆ ಒತ್ತಾಯ
ಮಂಡ್ಯ,ಅ.8- ಮರಳು ಸಾಗಾಣಿಕೆಗೆ ಪರ್‍ಮಿಟ್ ಪಡೆದುಕೊಂಡಂತಹ ಲಾರಿ ಮಾಲೀಕರಿಗೆ ಕಳೆದ 40 ದಿನಗಳಿಂದ ಮರಳು ನೀಡದೆ. ಸರ್ಕಾರಿ ಕೆಲಸಗಳು ಹಾಗೂ ಮನೆಕಟ್ಟುವ ಕೆಲಸಗಳು ಅರ್ದಕ್ಕೆ ನಿಂತಿದ್ದು, ಮರಳು ನೀಡುವಂತೆ ಮಂಡ್ಯ ಜಿಲ್ಲಾ ಮರಳು ಸಾಗಾಣಿಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಪಿ.ಗಿರೀಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಸ್ಟಾಕ್ ಲೋಡ್‍ನಲ್ಲಿ 2 ಸಾವಿರ ಲೋಡ್ ಮರಳು ಸ್ಟಾಕ್ ಇದ್ದರೂ ಮರಳನ್ನು ವಿತರಿಸದೆ ಮೀನಾವೇಷ ಎಣಿಸುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಮರಳುನೀಡುವ ಬಗ್ಗೆ ಹಲವು ಬಾರಿ ಮನವಿ ಮಾಡಿದರು ಅಧಿಕಾರಿಗಳು ಸ್ಪಂಧಿಸುತ್ತಿಲ್ಲ ಎಂದು ಆರೋಪಿಸಿದರು.
ಮಳವಳ್ಳಿಯ ಎ.ಇ.ಇ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು, ಜಿಲ್ಲಾಧಿಕಾರಿಗಳು ಹಾಗೂ ಟೆಂಡರ್‍ದಾರರು ಹೇಳಿದಂತೆ ನಾವು ಮಾಡುತ್ತಲಿದ್ದೇವೆ.ಆದರೆ ಇಲ್ಲಿಯ ಟೆಂಡರ್‍ದಾರರು ಪ್ರತಿನಿತ್ಯ ಟಿಪ್ಪರ್‍ಗಳಲ್ಲಿ ಅಕ್ರಮವಾಗಿ ಮೈಸೂರು ಹಾಗೂ ಮಂಡ್ಯದ ಕೆಲವುಬಾಗಗಳಿಗೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಲಿದ್ದಾರೆ ಎಂದು ದೂರಿದರು.
ಮಂಡ್ಯದಲ್ಲಿ ಪ್ರತಿನಿತ್ಯ 25 ಲಾರಿಗಳು, ಕ್ಯಾಂಟರ್ಗಳು, ಟಿಪ್ಪರ್‍ಗಳು ಅಕ್ರಮವಾಗಿ ಫಿಲ್ಟರ್ ಮರಳು ಸಾಗಾಣೆಮಾಡುತ್ತಿದ್ದು, ಪೊಲೀಸ್ ಇಲಾಖೆ ಕಂಡು ಕಾಣದಂತಿದೆ. ಜಿಲ್ಲೆಯಲ್ಲಿ ಸುಮಾರು 300 ಲಾರಿ ಮಾಲೀಕರು ಮರಳು ಸಾಕಾಣೆ ಮಾಡುಲು ಪರ್‍ಮಿಟ್ ಪಡೆದು ಸರ್ಕಾರದ ಆದೇಶದಂತೆ ಜಿ.ಪಿ.ಆರ್.ಎಸ್ ಯಂತ್ರಗಳನ್ನು ಅಳವಡಿಸಿದ್ದೇವೆ. ಇದನ್ನೆ ನಂಬಿಕೊಂಡು 300 ಚಾಲಕರು, ಕೂಲಿ ಕಾರ್ಮಿಕರು, ಕ್ಲೀನರ್‍ಗಳು ಜೀವನ ನಡೆಸುತ್ತಿದ್ದು, ತೊಂದರೆ ಅನುಭವಿಸುವಂತಾಗಿದೆ ಎಂದು ಅಳಲನ್ನು ತೋಡಿಕೊಂಡರು.
ಆದ್ದರಿಂದ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಜಿಲ್ಲಾ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ಮರಳನ್ನು ನೀಡಬೇಕಾಗಿ ವಿನಂತಿಸಿಕೊಂಡಿದ್ದಾರೆ.
ಗೋಷ್ಠಿಯಲ್ಲಿ ಕಾರ್ಯದರ್ಶಿ ಗೋವಿಂದೇಗೌಡ, ಮಲ್ಲೇಶ್, ಪಾಪಣ್ಣ, ಭರತ್‍ರಾಜು ಹಾಜರಿದ್ದರು.

No comments:

Post a Comment