Thursday 23 October 2014

       “ಪಟಾಕಿ ಬಿಡಿ ಹೊಸ ಬಟ್ಟೆ ಕೊಡಿ, ಪಟಾಕಿ ಬಿಡಿ ಸಿಹಿ ಕೊಡಿ” ಎಂಬ ವಿನೂತನ ಕಾರ್ಯಕ್ರಮವನ್ನು ಶಾಸಕರಾದ ಎಂ.ಕೆ. ಸೋಮಶೇಖರ್‍ರವರ ನೇತೃತ್ವದಲ್ಲಿ ಇಂದು  ಬೆಳಿಗ್ಗೆ 10:30ಕ್ಕೆ ಗಣೇಶ ಚಿತ್ರಮಂದಿರದ ಹತ್ತಿರವಿರುವ ಲಕ್ಷ್ಮೀಪುರಂ ಶಾಲಾ ಮುಂಭಾಗದ ಗುಡಿಸಲು ಹಾಗೂ ವಿದ್ಯಾರಣ್ಯಪುರಂನ ಧರ್ಮಸಿಂಗ್ ಕಾಲೋನಿ, ದೇವರಾಜ ಅರಸು ಕಾಲೋನಿ ಜನಗಳಿಗೆ ಸುಮಾರು 300 ಜೊತೆ ಹೊಸ ಬಟ್ಟೆ ಹಾಗೂ ಸಿಹಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತಾನಾಡುತ್ತಾ ದೀಪಾವಳಿಯ ಹಬ್ಬ ಎಲ್ಲರ ಮನೆಯ ಹಾಗೂ ಮನದಲ್ಲಿ ಬೆಳಕು ಚೆಲ್ಲುವ ಹಬ್ಬವಾಗಲಿ ಮತ್ತು ಸರಳವಾಗಿ ಆಚರಿಸಲಿ, ಶಬ್ದಮಾಲಿನ್ಯ, ವಾಯುಮಾಲಿನ್ಯ ಬೇಡ ಇದು ಆರೋಗ್ಯಕ್ಕೆ ಹಾನಿಕರ ಎಲ್ಲರೂ ಆರೋಗ್ಯವಾಗಿರಲಿ ಯಾರು ಕಣ್ಣು ಕಳೆದು ಕೊಳ್ಳುವುದು ಬೇಡ, ಅಂಗವಿಕಲವಾಗುವುದು ಬೇಡ, ಅನಾಹುತವಾಗುವುದು ಬೇಡ, ಹಾಗೂ ಮೇಲಿಂದ ಮೇಲೆ ಪಟಾಕಿ ಪ್ಯಾಕ್ಟರಿಗಳು ಸಾಲು ಸಾಲು ಅಂಗಡಿಗಳು ಬೆಂಕಿಗೆ ಅನಾಹುತವಾಗಿ ಪ್ರತಿ ವರ್ಷ ಒಂದಲ್ಲ ಒಂದು ಕಡೆ ನೂರಾರು ಸಾವು-ನೋವುಗಳು ಸಂಭವಿಸುತ್ತದೆ ಇದರಿಂದ ನೂರಾರು ಬಡ ಕುಟುಂಬಗಳು ಬೀದಿ ಪಾಲಾಗುತ್ತಿವೆ ಇಂತಹ ಕೆಟ್ಟಪರಿಣಾಮದ ಪಟಾಕಿ ಬೇಡವೆ ಬೇಡ ಎಂದು ಹೇಳುತ್ತಾ ನಾಡಿನ ಎಲ್ಲಾ ಜನತೆಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಉಮಾಮಣಿ ಮಾದೇಗೌಡ, ಸುನೀಲ್, ಸುನೀಲ್ ಕುಮಾರ್, ಮಾಜಿ ಮೇಯರ್‍ರಾದ ನಾರಾಯಣ್, ಮಾಜಿ ಉಪಮಹಾಪೌರರಾದ ಬಿ ಸಿದ್ದರಾಜು ಕಾಂಗ್ರೇಸ್ ಬ್ಲಾಕ್ ಅಧ್ಯಕ್ಷರಾದ ರವಿ, ಜಿ ಸೋಮಶೇಖರ್, ಮುಖಂಡರುಗಳಾದ ಶ್ರೀನಿವಾಸ್, ಪ್ರಭಾಕರ್, ಮನೋಜ್ ಮುಂದತಾವರು ಹಾಜರಿದ್ದರು.

No comments:

Post a Comment