Thursday 23 October 2014

24ರಿಂದ ರಾಜ್ಯ ಮಟ್ಟದ ಯುವ ಜನರ 9 ನೇ ಸಮ್ಮೇಳನ
ಮೈಸೂರು : ಕರ್ನಾಟಕ ಪ್ರಾಂತೀಯ ಯುವ ಜನ ಆಯೋಗದ ವತಿಯಿಂದ ಅ.24 ರಿಂದ ಮೂರು ದಿನಗಳ ಕಾಲ ರಾಜ್ಯ ಮಟ್ಟದ 9 ನೇ ಯುವ ಜನ ಮೇಳವನ್ನು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಆಯೋಗದ ನಿರ್ದೇಶಕರಾದ ಥಾಮಸ್ ಆಂಟೋನಿ ವಾಳಪಿಳ್ಳಿ ತಿಳಿಸಿದರು. ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಂತ ಪಿಲೋಮಿನಾ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಧರ್ಮಾ ಪ್ರಾಂತ್ಯದ ಕಥೋಲಿಕ ಯುವ ಜನರು ಭಾಗವಹಿಸಿ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಹೊಸ ಇತಿಹಾಸವನ್ನು ಬರೆಯಲಿದ್ದಾರೆ ಎಂದು ಹೇಳಿದರು.
ಶುಭ ಸಂದೇಶದ ಸಂತಸ ಪ್ರಕಾಶಿಸಲು ಮತ್ತು ಪ್ರೇರೆಪಿಸಲು ಎಂಬ ಧ್ಯೆಯದಂತೆ ರಾಷ್ಟ್ರೀಯ ಐಕ್ಯತೆ, ಸರ್ವಧರ್ಮ ಸಮಾನತೆ, ಯುವ ಜನರನ್ನು ಶಕ್ತಗೊಳಿಸುವಿಕೆ, ನಾಯಕತ್ವ ಬೆಳೆಸುವುದು, ಮಾಧ್ಯಮ ತಿಳುವಳಿಕೆ ಮತ್ತು ಸಹಭಾಗಿತ್ವ ಎಂಬ ವಿಷಯಗಳನ್ನು ಮೂಲವಾಗಿಟ್ಟುಕೊಂಡು ಈ ವಿಷಯಗಳ ಮೇಲೆ ಬೆಳಕು ಚೆಲ್ಲುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಈಗ ಭಾರತದಲ್ಲಿರುವುದು ಪ್ರತಿ ಮೂರನೇ ವ್ಯಕ್ತಿ ಯುವ ಪೀಳಿಗೆ. ಈ ದೇಶದ ಬೆಳವಣಿಗೆಗೆ ಯುವ ಜನರ ಕೊಡುಗೆ ಅಪಾರವಾಗಿದೆ. ಬದಲಾವಣೆಯ ಭಾರತವನ್ನು ಕಟ್ಟಲು ಯುವ ಜನರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಗುರು ಹಿರಿಯರು ಯುವ ಜನರಿಗೆ ಸ್ಪೂರ್ತಿಯಾಗಬೇಕೇ ಹೊರತು ಮಾರಕವಾಗಬಾರದು. ಇಂದಿನ ಯುವ ಪೀಳಿಗೆ ಹಳೇ ಆಲೋಚನಾ ಲಹರಿಯನ್ನು ಬಿಟ್ಟು ಗೊಡ್ಡು ಸಂಪ್ರದಾಯವನ್ನು ತೊರೆದು ಹೊಸತನದಲ್ಲಿ ಜೀವನವನ್ನು ಅವಲೋಕಿಸುತ್ತಿದೆ. ಆಧುನಿಕ ವೈಜ್ಞಾನಿಕ ಜಗತ್ತಿನ ಮಿಳಿತಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡಿರುವ ಯುವ ಜನರ ಜೀವನದ ಸಮತೋಲನಕ್ಕೆ ಆಧ್ಯಾತ್ಮಿಕ ಸಿಂಚಜ, ಬದುಕನ್ನು ಪ್ರೀತಿಸುವ ಕಲೆ, ನಾಡು ಕಟ್ಟುವ ದೂರ ದೃಷ್ಠಿ , ಸ್ಪೂರ್ತಿದಾಯಕ ನಾಯಕತ್ವ ಇಂತಹ ಕನಸುಗಳನ್ನು ಯುವ ಜನರ ಮನಸ್ಸಿನಲ್ಲಿ ಬಿತ್ತಬೇಕಾಗಿದೆ. ಈ ನಿಟ್ಟಿನಲ್ಲಿ ಸಮ್ಮೇಳನವನ್ನು ನಡೆಸಲಾಗುತ್ತಿದೆ,  ಎಂದು ತಿಳಿಸಿದರು.ಅ.26 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಾಜ್ ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
 ಗೋಷ್ಠಿಯಲ್ಲಿ ಆಯೋಗದ ಅಧ್ಯಕ್ಷ ಹೆನ್ರಿ ಡಿಸೋಜ, ನಿರ್ದೇಶಕರಾದ ಆಂತೋಣಿ ರಾಜ್, ಕೆ.ಎ.ವಿಲ್ಲಿಯಂ, ಪಿ.ಮಾರ್ಟಿನ್, ಅಂತೋಣಿ ರಾಬಟ್ ್ ಉಪಸ್ಥಿತರಿದ್ದರು.

No comments:

Post a Comment