Friday 31 October 2014

ಮೈಸೂರು- ಪ್ರತಿ ಜಿಲ್ಲೆಗೂ ಕೇಂದ್ರೀಯ ವಿದ್ಯಾಲಯ : ಧೃವನಾರಾಯಣ್

             ಪ್ರತಿ ಜಿಲ್ಲೆಗೂ ಕೇಂದ್ರೀಯ ವಿದ್ಯಾಲಯ : ಧೃವನಾರಾಯಣ್
ಮೈಸೂರು,ಅ.31-ರಾಜ್ಯದ ಪ್ರತಿ ಜಿಲ್ಲೆಗೂ ಕೇಂದ್ರೀಯ ವಿದ್ಯಾಲಯ ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿ ಎಂದು ಚಾಮರಾಜನಗರ ಸಂಸದ ಆರ್.ಧೃವನಾರಾಯಣ್ ತಿಳಿಸಿದರು.
ಮೈಸೂರಿನ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ರಾಜ್ಯದಲ್ಲಿ ಈಗಾಗಲೆ 40 ಕೇಂದ್ರೀಯ ವಿದ್ಯಾಲಯಗಳಿದ್ದು, ಬೆಂಗಳೂರಿನಲ್ಲಿಯೇ 14 ವಿದ್ಯಾಲಯಗಳಿವೆ. ಉಳಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿವೆ ಎಂದರು.
ಚಾಮರಾಜನಗರ ಜಿಲ್ಲೆಗೆ ಒಂದು ಕೇಂದ್ರೀಯ ವಿದ್ಯಾಲಯ ಮಂಜೂರಾಗಿದೆ. ನವೆಂಬರ್ 3 ರಂದು ಭೂಮಿ ಪೂಜೆ ನೆರವೇರಿಸಲಾಗುವುದು.
ಮೈಸೂರಿನಲ್ಲಿಯೂ ಒಂದೆ ಒಂದು ಕೇಂದ್ರೀಯ ವಿದ್ಯಾಲಯವಿದ್ದು, ವಿದ್ಯಾರ್ಥಿಗಳಿಗೆ ಅದು ಸಾಲದ ಕಾರಣ ಮತ್ತೊಂದು ವಿದ್ಯಾಲಯಕ್ಕೆ ರಾಷ್ಟ್ರೀಯ ಮಂಡಲ ಆಯುಕ್ತರಿಗೆ ಕೋರಿಕೆಯನ್ನು ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
 ಕೇಂದ್ರ ಸರ್ಕಾರ 585.78 ಕೋಟಿ ರೂ.ಗಳ ವೆಚ್ಚದ ಕೊಳ್ಳೇಗಾಲದಿಂದ ಟಿ.ನರಸಿಪುರ, ನಂಜನಗೂಡು, ಗುಂಡ್ಲು ಪೇಟೆ ಮಾರ್ಗವಾಗಿ ಕೇರಳ ಗಡಿ ತಲುಪಲಿರುವ 131 ಕಿ.ಮೀ ವ್ಯಾಪ್ತಿಯ ರಾಷ್ಟ್ರೀಯ 4 ಪಥಗಳ ಹೆದ್ದಾರಿ ರಸ್ತೆ ಕಾಮಗಾರಿಯು ಸುಸೂತ್ರವಾಗಿ ನಡೆಯುತ್ತಿದೆ ಎಂದರು.
ಕಾಮಗಾರಿಯ ಗುತ್ತಿಗೆಯನ್ನು ರಾಜಸ್ತಾನದ ದಿಲೀಲ್ ಬಿಲ್ಡ್ ಕಾಂ ಕಂಪನಿಗೆ ನೀಡಲಾಗಿದ್ದು, ಕಂಪನಿಯು ಪ್ರಾಥಮಿಕ ಹಂತಹ ಕಾಮಗಾರಿಯಾದ ರಸ್ತೆ ಬದಿಯ ಮರಗಳನ್ನು ಕಡಿಯುವುದು, ವಿದ್ಯುತ್-ದೂರವಾಣಿ ಲೈನ್‍ನ್ನು ಸ್ಥಳಾಂತರಿಸಿರುವುದಿಂದ ಶೇ.90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.
ಕಾಮಗಾರಿಯು 20 ತಿಂಗಳಿನಲ್ಲಿ ಅಂದರೆ 2015ರ ಮಾರ್ಚ್ ಪೂರ್ಣಗೊಳ್ಳಲಿದ್ದು, ನಂಜನಗೂಡಿನಲ್ಲಿ 235 ಖಾಸಗಿ ಜಮೀನಿನ ಮಾಲೀಕರು ಸೂಕ್ತ ದಾಖಲಾತಿ ನೀಡಿರುವುದರಿಂದ ಪರಿಹಾರದ ಮೊತ್ತವನ್ನು ಒಂದು ತಿಂಗಳಲ್ಲಿ ಪಾವತಿಸಲು ಕಾಲಾವಕಾಶ ಕೋರಲಾಗಿದೆ. ಪರಿಹಾರದ ಹಣ 28.83 ಕೋಟಿಯನ್ನು ಜಂಟಿ ಕಾತೆಯಲ್ಲಿ ಇರಿಸಲಾಗಿದೆ ಎಂದರು.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಯುಪಿಎ ಸರ್ಕಾರವು 40 ಸಾವಿರ ಕೋಟಿ ರೂಗಳನ್ನು ನೀಡಿತ್ತು, ಆದರೆ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಅದನ್ನು ಕಡಿತಗೊಳಿಸಿ 33 ಸಾವಿರ ರೂ.ಗಳಿಗೆ ಇಳಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ ಈ ಯೋಜನೆಯಿಂದ 3,700 ಕೋಟಿ ರೂ,ಗಳು ದೊರೆಯುತ್ತಿದ್ದವು.ಆದರೆ ಈಗ ಅದು 1,700 ಕೋಟಿ ರೂ.ಗಳಿಗೆ ಇಳಿಸಿರುವುದು ಬಡವರಿಗೆ ಉದ್ಯೋಗ ದೊರೆಯುವುದಕ್ಕೆ ಒಡೆತ ಬಿದ್ದಂತಾಗಿದೆ. ಈ ಹಿಂದಿನ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಗೆ ನಿಗಧಿ ಪಡಿಸಿದಂತೆಯೇ ಮುಂದುವರೆಯುವಂತೆ ಅಧಿವೇಶನದಲ್ಲಿ ಒತ್ತಾಯಿಸಲಾಗುವುದೆಂದರು.
ಚಾಮರಾಜನಗರದಿಂದ ಬೆಂಗಳೂರಿಗೆ ನೇರ ರೈಲು ಸಂಪರ್ಕ ನಾಳೆ ಹಸಿರು ನಿಷಾನೆ ದೊರಯಲಿದ್ದು, ಬೆಳಿಗ್ಗೆ 6.45ಕ್ಕೆ ಬೆಂಗಳೂರು-ಚಾಮರಾಜನಗರ ನೇರ ರೈಲು ಸಂಪರ್ಕಕ್ಕೆ ಚಾಲನೆ ನೀಡಲಾಗುವುದೆಂದಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಜಿ.ಪಂ. ಉಪಾಧ್ಯಕ್ಷ ಮಾದಪ್ಪ, ಕಾಂಗ್ರೆಸ್ ಮುಂಡರಾದ ವೆಂಕಟೇಶ್, ಮುತ್ತುರಾಜು, ಸುಬ್ಬಣ್ಣ ಇತರರಿದ್ದರು.

No comments:

Post a Comment