Wednesday 8 October 2014

ಮಂಡ್ಯ: ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ವತಿಯಿಂದ ಮಹರ್ಷಿ ವಾಲ್ಮೀಕಿಯವರ ಜಯಂತ್ಯುತ್ಸವ ಆಚರಿಸಲಾಯಿತು.
ಜಿಲ್ಲಾ ಬಿಜೆಪಿ ಎಸ್.ಟಿ. ಮೋರ್ಚಾ ಅಧ್ಯಕ್ಷ ಎಸ್. ರಮೇಶ್ ಮಾತನಾಡಿ, ರಾಮಾಯಣ ಮತ್ತು ರಾಜನೀತಿ ರಚಿಸಿರುವ ಮಹಾರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ವಾಲ್ಮೀಕಿ ಮನು ಕುಲದ ಇತಿಹಾಸ ಮತ್ತು ಸಮಾನತೆ ಇದ್ದ ಹಾಗೆ. ಅವರ ವಿಚಾರ ಧಾರೆಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡು ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ರಾಮಾಯಣದ ದಿವ್ಯ ಶಿಲ್ಪಿ ವಾಲ್ಮೀಕಿಯನ್ನು ಕುರಿತು ನಮ್ಮ ಪರಂಪರೆ ತುಂಬಾ ಗೌರವದಿಂದ ನೆನೆದಿದೆ. ಭಾರತೀಯ ಸಂಸ್ಕøತಿಯ ಪ್ರತೀಕವಾಗಿರುವ ರಾಮಾಯಣದ ಕತೃವಾದ ಮಹರ್ಷಿ ವಾಲ್ಮೀಕಿಯವರಿಗೆ ಋಷಿಯ ಸ್ಥಾನಮಾನ ನೀಡಲಾಗಿದೆ ಎಂದು ಬಣ್ಣಿಸಿದರು.
ವಾಲ್ಮೀಕಿಯವರು ಭಾರತೀಯರಿಗೆ ಶ್ರೀ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡುವ ಮೂಲಕ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಶ್ರೀರಾಮ ಭಾರತೀಯರಿಗೆ ವಿಭೂತಿ ಪುರುಷ. ಶ್ರೀರಾಮ ಮಂತ್ರವನ್ನು ಜಪಿಸುವುದರ ಮೂಲಕವೇ ತಮ್ಮ ಬದುಕನ್ನುತಿದ್ದಿಕೊಂಡವರು. ಉದ್ದರಿಸಿಕೊಂಡವರು ಹಲವರಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್. ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ನಂಜುಂಡಪ್ಪ, ಮುಖಂಡರಾದ ಡಾ. ಶಿವನಂಜಯ್ಯ, ಮಹಾಂತಪ್ಪ, ಬಸವೇಗೌಡ, ಸಿ.ಟಿ. ಮಂಜುನಾಥ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

No comments:

Post a Comment