Thursday 25 September 2014

ಮೈಸೂರು ಸುದ್ದಿಗಳು.

ಸೆಪ್ಟೆಂಬರ್  26ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು
ಮೈಸೂರು,ಸೆ.25.ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2014ರ ಅಂಗವಾಗಿ ಮೈಸೂರು ನಗರದ ಮೂರು ವೇದಿಕೆಗಳಲ್ಲಿ ಸೆಪ್ಟೆಂಬರ್ 26 ರಂದು ನಡೆಯುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರದರ್ಶಿತವಾಗುವ ಚಲನಚಿತ್ರಗಳ ವಿವರ ಇಂತಿದೆ.
ದಸರಾ ಚಲನಚಿತ್ರೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಸೆನೆಟ್ ಭವನ: ಬೆಳಿಗ್ಗೆ 10-30 ಗಂಟೆಗೆ ಕೊನಾರ್ಕ್, ಬೆಳಿಗ್ಗೆ 11 ಗಂಟೆಗೆ ಸಂಸ್ಕಾರ, ಮಧ್ಯಾಹ್ನ 2-30 ಗಂಟೆಗೆ ನಾಲ್ವಡಿ ಕೃಷ್ಣ ರಾಜ ಒಡೆಯರ್, ಮಧ್ಯಾಹ್ನ 3 ಗಂಟೆಗೆ ಭಗವತಿಕಾಡು.
    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಾವೇರಿ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆ ನೇತಾಜಿ, ಬೆಳಿಗ್ಗೆ 11 ಗಂಟೆಗೆ ಅಸ್ತು,  ಮಧ್ಯಾಹ್ನ 2-30 ಗಂಟೆಗೆ ಡಿವಿ. ಗುಂಡಪ್ಪ ಹಾಗೂ ಮಧ್ಯಾಹ್ನ 3 ಗಂಟೆಗೆ ಕಣ್ಣತ್ತಿಲ್ ಮುತ್ತಮಿಟ್ಟಾಲ್ ಚಲನಚಿತ್ರದ ಬದಲಾಗಿ ಫಂಡ್ರಿ ಚಲನಚಿತ್ರ ಪ್ರದರ್ಶಿಸಲಾಗುವುದು.
    ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆ ಷೂ  ಶೈನ್, ಮಧ್ಯಾಹ್ನ 1-30ಕ್ಕೆ ಕೇಪ್ ನಂ. ಸೆವೆನ್, ಮಧ್ಯಾಹ್ನ 3 ಗಂಟೆಗೆ ಬ್ರೀಫ್ ಎನ್ ಕೌಂಟರ್ ಚಲನಚಿತ್ರಗಳು ಪ್ರದರ್ಶನಗಳು ಉಚಿತ ಪ್ರವೇಶ.
    ಲಕ್ಷ್ಮೀ-ಒಗ್ಗರಣೆ, ತಿಬ್ಬಾದೇವಿ-ಸವಾರಿ2,  ಒಲಂಪಿಯಾ-ದೃಶ್ಯ, ಡಿ.ಆರ್.ಸಿ.-ಗಜಕೇಸರಿ, ಸತ್ಯಂ-ಮಾಣಿಕ್ಯ.
    ಪ್ರದರ್ಶನದ ಸಮಯ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ ನೆಲ ಅಂತಸ್ತಿಗೆ 10 ರೂ. ಹಾಗೂ ಬಾಲ್ಕನಿಗೆ  15 ರೂ.  ಹಾಗೂ ಮಲ್ಟಿಫ್ಲೆಕ್ಸ್ ರೂ. 25 ನಿಗದಿಪಡಿಸಿದೆ.
     ಕೆ.ಆರ್.ನಗರದ ಶ್ರೀವೆಂಕಟೇಶ್ವರ-ದೃಶ್ಯ, ನಂಜನಗೂಡಿನ ಲಲಿತ-ಸವಾರಿ2, ಟಿ.ನರಸೀಪುರದ ಮುರುಗನ್-ಒಗ್ಗರಣೆ, ಪಿರಿಯಾಪಟ್ಟಣದ ಮಹದೇಶ್ವರ-ಗಜಕೇಸರಿ, ಹುಣಸೂರಿನ ಲೀಲಾ-ಮಾಣಿಕ್ಯ, ಹಾಗೂ ಹೆಚ್.ಡಿ.ಕೋಟೆಯ ಮಂಜುನಾಥ-ಎದೆಗಾರಿಕೆ.
    ಪ್ರದರ್ಶನದ ಸಮಯ ಪ್ರತಿದಿನ ಸಂಜೆ  4 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ 10 ರೂ.

ಸೆಪ್ಟೆಂಬರ್ 26 ರ ದಸರಾ ಮಹೋತ್ಸವದ ಕಾರ್ಯಕ್ರಮಗಳು
    ಮೈಸೂರು,ಸೆ.25.ಬೆಳಿಗ್ಗೆ 7 ಗಂಟೆಗೆ ನಗರದ ರಂಗಚಾರ್ಲು ಪುರಭವನದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ ಅವರು ಚಾಲನೆ ನೀಡುವರು.
    ಬೆಳಿಗ್ಗೆ 7 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಸರಾ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಮೈಸೂರು ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ| ಕೆ.ಎಸ್. ರಂಗಪ್ಪ ಹಾಗೂ ಪ್ರಥಮ ನ್ಯಾಷನಲ್ ರಿಯಾಲಿಟಿ ಶೋ ವಿಜೇತರಾದ ಸುನಾಮಿ ಕಿಟ್ಟಿ ಅವರುಗಳಿಂದ ಚಾಲನೆ. ನಂತರ ಸಂಜೆ 6-30 ಗಂಟೆಗೆ  ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮರಿಗೌಡ ಅವರು ದೇಹದಾಢ್ರ್ಯ ಸ್ಪರ್ಧೆ ಉದ್ಘಾಟಿಸುವರು.
    ಬೆಳಿಗ್ಗೆ 10 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ದಸರಾ ದರ್ಶನಕ್ಕೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಚಾಲನೆ ನೀಡುವರು.
    ಬೆಳಿಗ್ಗೆ 11 ಗಂಟೆಗೆ ಜೆ.ಕೆ.ಮೈದಾನದ ಅಲ್ಯುಮಿನಿ ಅಸೋಸಿಯೇಷನ್ ಅಮೃತ ಮಹೋತ್ಸವ ಭವನದಲ್ಲಿ ಮಹಿಳಾ ದಸರಾ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ ಅವರು ಉದ್ಘಾಟಿಸುವರು.
    ಮಧ್ಯಾಹ್ನ 1 ಗಂಟೆಗೆ ಜೆ.ಕೆ.ಮೈದಾನದ ಅಲ್ಯುಮಿನಿ ಅಸೋಸಿಯೇಷನ್ ಅಮೃತ ಮಹೋತ್ಸವ ಭವನದಲ್ಲಿ ಮಹಿಳಾ ಉದ್ಯಮಿಗಳು ಸ್ವಸಹಾಯ ಸಂಘಗಳು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳ ಮಾನಸ ಅವರು ಉದ್ಘಾಟಿಸುವರು.
    ಮಧ್ಯಾಹ್ನ 3-30 ಗಂಟೆಗೆ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿರುವ ಡಿ. ದೇವರಾಜ ಅರಸ್ ವಿವಿದೋದ್ದೇಶ ಕ್ರೀಡಾಂಗಣದಲ್ಲಿ 33ನೇ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.
 ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ:
ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಜಾನಕಿರಾಂ ಅವರಿಂದ ಮ್ಯಾಂಡೋಲಿನ್ ವಾದನ,  ಸಂಜೆ 6 ರಿಂದ 7-30 ಗಂಟೆಯವರೆಗೆ ಚೆನ್ನೈನ ಲಾಲಗುಡಿ ಕೃಷ್ಣ ಮತ್ತು ವಿಜಯಲಕ್ಷ್ಮಿ ಅವರಿಂದ ದ್ವಂದ್ವ ವಯೋಲಿನ್ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಶ್ರೀಮತಿ ಬಿ.ಆರ್. ಛಾಯಾ ಅವರಿಂದ ಭಾವಗೀತೆÀ.
ಕಲಾಮಂದಿರ ವೇದಿಕೆ: ಸಂಜೆ  5-30 ರಿಂದ 6 ಗಂಟೆಯವರೆಗೆ ಒಡಿಸ್ಸಿ ನೃತ್ಯ,  ಸಂಜೆ 6 ರಿಂದ 7-30 ಗಂಟೆಯವರೆಗೆ ಗುಲ್ಬರ್ಗಾ ಬಸವರಾಜ ಸಾಲಿ ಅವರಿಂದ  ದಾಸವಾಣಿ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆಗೆ ಮೈಸೂರಿನ ಶ್ರೀಮತಿ ಪ್ರಮಿತಾ ರಮೇಶ್  ಅವರಿಂದ ಭರತನಾಟ್ಯ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಶಿಕಾರಿಪುರ ಮಾರುತಿ ವಾಲ್ಮೀಕಿ ಡೊಳ್ಳಿನ ಯುವಕ ಸಂಘದ ವತಿಯಿಂದ ಡೊಳ್ಳು ಕುಣಿತ, ಕೊಲ್ಕತ್ತಾ ಸಂಭಲ್‍ಪುರಿ,  ಸಂಜೆ 6 ರಿಂದ 7-30 ಗಂಟೆಯವರೆಗೆ ಧಾರವಾಡದ ಡಿ. ಕುಮಾರದಾಸ ಅವರಿಂದ ಹಿಂದುಸ್ತಾನಿ ಸಂಗೀತ  ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಆನಂದಿತ ರೆಡ್ಡಿ ಮತ್ತು ತಂಡದವರಿಂದ ಭರತನಾಟ್ಯ.
ಪುರಭವನ ವೇದಿಕೆ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೈಸೂರಿನ ಶ್ರೀ ಭುವನೇಶ್ವರಿ ಕನ್ನಡ ಕಲಾಸಂಘದಿಂದ ಐತಿಹಾಸಿಕ ನಾಟಕ. ಮಧ್ಯಾಹ್ನ 2-30 ರಿಂದ 4-30 ಗಂಟೆಯವರೆಗೆ ಮೈಸೂರಿನ ಜಿಲ್ಲಾ ವೃತ್ತಿ ಕಲಾವಿದರ ಸಂಘ ಹಾಗೂ ಸಂಜೆ 6-30 ರಿಂದ 8-30 ಗಂಟೆಯವರೆಗೆ ಬೆಂಗಳೂರಿನ ಡಿಂಗ್ರಿ ನಾಗರಾಜ್ ಮತ್ತು ತಂಡದಿಂದ ನಾಟಕ ಏರ್ಪಡಿಸಲಾಗಿದೆ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಕೊಪ್ಪಳ ಜಿಲ್ಲೆಯ ಯಲ್ಬುರ್ಗಾದ ಶ್ರೀ ಮಾರುತಿ ಶಹನಾಯಿ ಮತ್ತು ಹಲಗೆ ಮೇಳ ಕಲಾ ಸಂಘದಿಂದ ಶಹನಾಯಿ ವಾದನ, ಹರಿಯಾಣದ ಭೈಗಾ ಕರ್ಮಾ ಮತ್ತು ಪಾಲಕ್ಕಾಡ್ ಅವರಿಂದ ಮೋಹಿನಿ ಅಟ್ಟಂ, ಸಂಜೆ 6 ರಿಂದ 7-30 ಗಂಟೆಯವರೆಗೆ ಬೆಂಗಳೂರಿನ ದೇವರಾಜು ಅವರಿಂದ ಹರಿಕಥೆ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆ ಮೈಸೂರಿನ ವಾಸವಿ ವನಿತಾ ಟ್ರಸ್ಟ್ ಅವರಿಂದ ಸುಗಮ ಸಂಗೀತ.
ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಉತ್ತರಾಖಂಡದ ದೌಡಿಯಾ ಚಾವ್ಲಾ, ಸಂಜೆ 6 ರಿಂದ 6-30 ಗಂಟೆಯವರೆಗೆ  ತಾ: ಹುನಗುಂದ ಸಂತೋಷ್ ಹುಚ್ಚಪ್ಪ ಹೋಟಿ ಅವರಿಂದ ಪುರವಂತಿಕೆ ಹಾಗೂ ದಾವಣಗೆರೆಯ ಯುಗಧರ್ಮ ರಾಮಣ್ಣ ಅವರಿಂದ ತತ್ವಪದಗಳ ಕಾರ್ಯಕ್ರಮ ನಡೆಯಲಿವೆ. 
    ಆಹಾರ ಮೇಳ:- ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಸೆ. 26 ರಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಅತ್ತೆ ಮತ್ತು ಸೊಸೆಯರಿಗೆ ರಾಗಿ ಮುದ್ದೆ ಮತ್ತು ಉಪ್ಪುಸಾರ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಆಹಾರ ಭದ್ರತಾ ಕಾಯಿದೆ ಹಾಗೂ ಅನ್ನಭಾಗ್ಯ ಯೋಜನೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ.
  ಮಹಿಳಾ ದಸರಾ:- ಸಂಜೆ 4 ರಿಂದ 4-30 ರವರೆಗೆ ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದ ಕ್ಷೀರಾ ಸಾಗರ ಮಹಿಳಾ ಕಲಾವಿದರಿಂದ ಪೂಜ ಕುಣಿತ, ಸಂಜೆ 4-30ಕ್ಕೆ ವೇಷಭೂಷಣ ಸ್ಪರ್ಧೆ, ಸಂಜೆ 6 ಗಂಟೆಗೆ ಮಂಡ್ಯ ಜಿಲ್ಲೆಯ ಹೊಸಹಳ್ಳಿಯ ಮಾಂಡವ್ಯ ಹವ್ಯಾಸಿ ಮಹಿಳಾ ಕಲಾವಿದರ ಸಂಘದಿಂದ ಶ್ರೀ ಕೃಷ್ಣ ಸಂಧಾನ ವಿಫಲ  ನಾಟಕ ಪ್ರದರ್ಶನ ನಡೆಯಲಿದೆ. ಸ್ಥಳ: ಜೆ.ಕೆ. ಗ್ರೌಂಡ್ಸ್

ಪಾರಂಪರಿಕ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನ
    ಮೈಸೂರು,ಸೆ.25.ದಸರಾ ಹಬ್ಬದ ಪ್ರಯುಕ್ತ ಮೈಸೂರು ದಿವಾನ್ಸ್ ರಸ್ತೆಯಲ್ಲಿರುವ ವಿಭಾಗೀಯ ಮೌಲ್ಯವರ್ಧಿತ ತೆರಿಗೆ ಕಚೇರಿಯ ಶೇಷಾದ್ರಿ ಭವನದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 1 ರವರೆಗೆ ಪಾರಂಪರಿಕ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ
     ಸಾರ್ವಜನಿಕರಿಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

No comments:

Post a Comment