Wednesday 3 September 2014

ಶತಮಾನೋತ್ಸವ ಲಾಂಛನ ಮತ್ತು ಜಾಲತಾಣ ಸಮರ್ಪಣೆ.

ಶತಮಾನೋತ್ಸವ ಲಾಂಛನ ಮತ್ತು ಜಾಲತಾಣ ಸಮರ್ಪಣೆ
ಮೈಸೂರು,ಸೆ.3- ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವದ ಅಂಗವಾಗಿ ವಿಶ್ವವಿದ್ಯಾಲಯ ಶತಮಾನೋತ್ಸವ ಲಾಂಛನವನ್ನು ಮಹಾರಾಣಿ ಪ್ರಮೋದಾ ದೇವಿ ಅನಾವರಣಗೊಳಿಸಿದರು. ಶತಮಾನೋತ್ಸವ ಜಾಲತಾಣವನ್ನು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಬಿಡುಗಡೆಗೊಳಿಸಿದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಲಾಗಿದ್ದ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಜಾಲತಾಣ ಬಿಡುಗಡೆಗೊಳಿಸಿ ಮಾತನಾಡಿದ ಆರ್.ವಿ.ದೇಶಪಾಂಡೆ ಯಾವುದೇ ವಿಶ್ವವಿದ್ಯಾಲಯವು ಶಿಕ್ಷಣವನ್ನು ಗುಣಮಟ್ಟದ್ದಾಗಿಸಬೇಕು, ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಅಗತ್ಯ ಸೌಲ್ಯಭ್ಯಗಳನ್ನು ಒದಗಿಸಬೇಕು. ಆಗಮಾತ್ರ ಜ್ಞಾನಾರ್ಜನೆ ಸಾಧ್ಯ ಎಂದು ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯವು ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಪಡೆದಿದ್ದು, ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿತಗೊಳ್ಳುತ್ತಿದೆ. 21ನೇ ಶತಮಾನದಲ್ಲಿ ತಂತ್ರಜ್ಞಾನದ ಅಭಿವೃದ್ಧಿಯಾಗುತ್ತಲಿರುವುದರಿಂದ ಶಿಕ್ಷಣವು ಕುಂಠಿತಗೊಳ್ಳುತ್ತಿದೆ. ಇಂದಿನ ಯುವಕರು ಶಿಕ್ಷಣದತ್ತ ಗಮನಹರಿಸಬೇಕಾದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಕರೆ ನೀಡಿದರು.
ಶತಮಾನೋತ್ಸವದ ಲಾಂಛನ ಮತ್ತು ಜಾಲತಾಣಗಳ ಬಿಡುಗಡೆಯು ಸಂತಸ ತಂದಿದೆ.ಮೈಸೂರು ವಿ.ವಿ.ಯು ಜಗತ್ತಿನ ಯಾವ ವಿ.ವಿಗೂ ಕಮ್ಮಿ ಇಲ್ಲ ಎಂಬಂತೆ ಒಡೆಯರ್‍ರವರು ರೂಪಿಸಿ ವಿಶ್ವ ವಿಖ್ಯಾತ ಗೊಳಿಸಲಿದ್ದರು. ಮುಂದಿನ ದಿನಗಳಲಿ ಮೈಸೂರು ನಗರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸೋಷಿಯಲ್ ಡೆವಲಪ್‍ಮೆಂಟ್ ಸೆಂಟರ್ ತರೆಯಲು ಸರ್ಕಾರದಿಂದ 5 ಕೋಟಿ ಅನುದಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಒಪ್ಪಿಗೆಯನ್ನು ಸೂಚಿಸಿದ್ದಾರೆ ಎಂದು ತಿಳಿಸಿದರು.
ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ ಮೈಸೂರು ವಿ.ವಿ.ಯು ಆಕ್ಸಪರ್ಡ್ ಮತ್ತು ಹಾರ್ಡ್‍ವರ್ಡ್ ವಿ.ವಿಗಳಂತೆ ಪ್ರಖ್ಯಾತಿ ಹೊಂದುವ ನಿಟ್ಟಿನಲ್ಲಿ ಶ್ರಮಪಡಬೇಕು, ಮುಂದಿನ ಶತಮಾನೋತ್ಸವವು ಅರ್ಥಪೂರ್ಣ ಶತಮಾನೋತ್ಸವ ಆಚರಣೆಯಾಗಬೇಕೆಂದು ಇದೇ ಸಂದರ್ಭದಲ್ಲಿ ತಿಳಸಿದರು.
ಕಾರ್ಯಕ್ರದಲ್ಲಿ ಉಪಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ರೆಜಿಸ್ಟ್ರಾರ್ ಬಸವರಾಜು, ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

No comments:

Post a Comment