Friday 5 September 2014

ಮಂಡ್ಯ-ಇಲಾಖೆಯ ಮುಖ್ಯ ದ್ವಾರಕ್ಕೆ ಬೀಗ ಜಡಿದು ಧರಣಿ ಸತ್ಯಾಗ್ರಹ.

ವಾರ್ತಾಧಿಕಾರಿ ಸರ್ವಾಧಿಕಾರಿ ಧೋರಣೆ
ಇಲಾಖೆಯ ಮುಖ್ಯ ದ್ವಾರಕ್ಕೆ ಬೀಗ ಜಡಿದು ಧರಣಿ ಸತ್ಯಾಗ್ರಹ
ಮಂಡ್ಯ,ಸೆ.5- ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರಾಜು ಅವರ ಕಿರುಕುಳ ಹಾಗೂ ಸರ್ವಾಧಿಕಾರಿ ಧೋರಣೆ ಖಂಡಿಸಿ ಇಂದು ಕರ್ನಾಟಕ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಜಿಲ್ಲಾ ಘಟಕ  ವಾರ್ತಾ ಇಲಾಖೆ ಮುಖ್ಯ ದ್ವಾರಕ್ಕೆ ಬೀಗ ಜಡಿದು ಧರಣಿ ಸತ್ಯಾಗ್ರಹ ನಡೆಸಿತು.
ಇಂದು ಬೆಳಿಗ್ಗೆ ವಾರ್ತಾ ಇಲಾಖೆ ಮುಖ್ಯ ದ್ವಾರಕ್ಕೆ ಬೀಗ ಜಡಿದ ಜಿಲ್ಲಾ ಪತ್ರಿಕಾ ಸಂಪಾದಕರು ಮತ್ತು ಪತ್ರಕರ್ತರು, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕರ ಧೋರಣೆ ವಿರುದ್ಧ ಘೋಷಣೆ ಕೂಗಿದರು.
ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಗೆ ವಾರ್ತಾಧಿಕಾರಿಯಾಗಿ ನಿಯುಕ್ತಿಗೊಂಡ ದಿನದಿಂದ ಇಲ್ಲಿಯವರೆಗೂ ಏಕ ಪಕ್ಷೀಯ ನಡವಳಿಕೆ ತೋರಿ ಕೇಂದ್ರ ವಾರ್ತಾ ಇಲಾಖೆಯ ನಿಯಮಾವಳಿಗಳನ್ನು ತಿರುಚಿ ಅನ್ಯ ಮಾರ್ಗದಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಗಳನ್ನು ಧಮನ ಮಾಡಲು ವಾರ್ತಾಧಿಕಾರಿ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬರಿಗಣ್ಣಿನಲ್ಲಿ ಓದಬಹುದಾದ 16 ಫಾಂಟ್‍ಗಳ ಕನಿಷ್ಟ ಅಕ್ಷರದಲ್ಲಿ ಜಾಹೀರಾತು ನೀಡಬೇಕು ಹಾಗೂ ಜಾಹಿರಾತಿಗೆ ನೀಡಬೇಕಾದ ಕಾಲಂ ಸೆಂ.ಮೀ. ಸ್ವತಃ ಅವರೇ ನಿಗದಿ ಪಡಿಸುವ ವಾರ್ತಾ ಇಲಾಖೆಯ ಕ್ರಮವನ್ನು ಕೈಬಿಡುವಂತೆ ಒತ್ತಾಯಿಸಿದರು.
ವಾರ್ತಾ ಇಲಾಖೆ ಬಿಡುಗಡೆಗೊಳಿಸಿದ ನಿಗದಿತ ಜಾಹೀರಾತು ಮೊತ್ತವನ್ನು ಕನಿಷ್ಟ 60 ದಿನದೊಳಗೆ, ಗರಿಷ್ಠ 90 ದಿನದೊಳಗೆ, ಜಾಹೀರಾತು ಪ್ರಕಟಿಸಿದ ಪತ್ರಿಕಾ ಸಂಪಾದಕರ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ನೀಡುವ ಟೆಂಡರ್ ಜಾಹೀರಾತುಗಳ ನಿಬಂಧನೆಗಳ ವಿವರಗಳನ್ನು ಸಂಪೂರ್ಣವಾಗಿ ಪ್ರಕಟಿಸಲು ಅನುವು ಮಾಡಿಕೊಡಬೇಕು. ವಾರ್ತಾ ಇಲಾಖೆಯ ಮಾಧ್ಯಮ ಪಟ್ಟಿಗೆ ಸೇರ್ಪಡೆಯಾಗದ ದಿನಪತ್ರಿಕೆಗಳು ನಿಗದಿತ ಹಾಗೂ ನಿರಂತರವಾಗಿ ಪ್ರಕಟವಾಗುವ ಬಗ್ಗೆ ಜಾಗೃತಿ ವಹಿಸಬೇಕು. ಅನಗತ್ಯ ಮಾಧ್ಯಮ ಪಟ್ಟಿಗೆ ಸೇರ್ಪಡೆ ಮಾಡುವ ಪದ್ಧತಿಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.
ಸರ್ಕಾರದ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಸುದ್ಧಿಗಳನ್ನು ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ನೀಡದೇ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಸ್ಥಳೀಯ ಪತ್ರಿಕಾ ಸಂಪಾದಕರ ಹಿತ ಕಾಯುವ ಬದಲಾಗಿ ವಾರ್ತಾ ಇಲಾಖೆಯ ಸಹೋದ್ಯೋಗಿಗಳೊಂದಿಗೂ ಅನ್ಯೋನ್ಯ ಸಂಬಂಧ ಇಟ್ಟುಕೊಳ್ಳದ ಪರಿಣಾಮವಾಗಿ ವಾರ್ತಾ ಇಲಾಖೆಯಿಂದ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ದೊರೆಯಬೇಕಾದ ಸವಲತ್ತುಗಳು ಹಾಗೂ ಹಣ ಬಿಡುಗಡೆ ವಿಳಂಬವಾಗುತ್ತಿದೆ ಎಂದು ದೂರಿದರು.
ಶೀಘ್ರದಲ್ಲೇ ನಮ್ಮ ಎಲ್ಲಾ ಬೇಡಿಕೆಗಳನ್ನು ನಿಮ್ಮ ನೇತೃತ್ವದಲ್ಲಿ ಸಭೆ ಕರೆದು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಕೆರಗೋಡು, ಪ್ರಧಾನ ಕಾರ್ಯದರ್ಶಿ ಕೆ.ಸಿ.ಮಂಜುನಾಥ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಪಿ.ಪ್ರಕಾಶ್, ಪತ್ರಿಕಾ ಸಂಪಾದಕರಾದ  ಎ.ಎಲ್.ಬಸವೇಗೌಡ, ಪಿ.ಜೆ.ಚೈತನ್ಯಕುಮಾರ್, ಬಸವರಾಜ ಹೆಗ್ಗಡೆ, ನಾಗೇಶ್, ಪುರುಷೋತ್ತಮ್, ಶಶಿಧರ್, ಬಾಲಕೃಷ್ಣ, ಎಂ.ಎಸ್.ಶಿವಪ್ರಕಾಶ್, ನಾರಾಯಣಸ್ವಾಮಿ, ಗುರುಬಸವಯ್ಯ, ಮಂಜುಳಾ, ಪುಟ್ಟಸ್ವಾಮಿ, ಎಚ್.ಡಿ.ಜಯರಾಂ, ಚಲುವರಾಜು, ಪತ್ರಕರ್ತರಾದ ಚಿನಕರುಳಿ ರಮೇಶ್, ನಂಜುಂಡಸ್ವಾಮಿ, ಆನಂದ್, ಮೋಹನ್‍ರಾಜ್, ಶಿವರಾಜು, ಶೇಷು, ರವಿ, ದಶರಥ್, ವೇಣು ಮತ್ತಿತರರಿದ್ದರು.
ಉಸ್ತುವಾರಿ ಸಚಿವ ಅಂಬರೀಶ್ ಬೇಟಿ
ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಅಶ್ಚರ್ಯ ವ್ಯಕ್ತಪಡಿಸಿದರು. ಪತ್ರಿಕೆ ಸಂಪಾದಕರುಗಳು ಈ ರೀತಿಯಾದ ಪ್ರತಿಭಟನೆಯನ್ನು ನಡೆಸುತ್ತಲಿರುವುದು, ನನ್ನ ಗಮನಕ್ಕೆ ಬರಲಿಲ್ಲ. ನೀವುಗಳು ಪ್ರತಿಭಟನೆಮಾಡುತ್ತಲಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಸೆ.10ರ ನಂತರ ಬೆಂಗಳೂರಿಗೆ ಬಂದು ಬೇಟಿಕೊಡಿ, ನಿಮ್ಮ ಸಮಸ್ಯೆಗಳ ಬಗ್ಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ವಿಶುಕುಮಾರ್‍ರೊಂದಿಗೆ ಮಾತು ಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ಮೂಡಿಸಿದರು. ಸಂಪರ್ಕ

ಸೆ.7ರಂದು ಬಸವೇಶ್ವರ ಪತ್ತಿನ ಸಹಕಾರ ಸಂಘ ಉದ್ಘಾಟನೆ
ಮಂಡ್ಯ: ಶ್ರೀ ಜಗದ್ಗುರು ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಸೆ.7ರಂದು ನಗರದ ಹೊಸಹಳ್ಳಿಯ ಬಸವೇಶ್ವರ ದೇವಾಲಯದ ಬಳಿ ಹಮ್ಮಿಕೊಳ್ಳಲಾಗಿದೆ.
ತಮಕೂರು ಸಿದ್ದಗಂಗಾ ಮಠದ ಸಿದ್ದಗಂಗಾ ಕಿರಿಯ ಶ್ರೀಗಳು, ದೇಗುಲ ಮಠದ ಮುಮ್ಮಡಿ ಮಹಾಶ್ರೀಗಳು, ಕದಂಬ ಜಂಗಮ ಮಠದ ರೇಣುಕಾ ಶಿವಾಚಾರ್ಯಶ್ರೀಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಸಹಕಾರ ಸಚಿವ ಮಹದೇವ ಪ್ರಸಾದ್ ನೂತನ ಕಟ್ಟಡ ಉದ್ಘಾಟಿಸುವರು.
ಸಮಾರಂಭವನ್ನು ಮಾಜಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ನಗರಸಭಾಧ್ಯಕ್ಷ ಸಿದ್ದರಾಜು, ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ, ನಗರಸಭಾ ಸದಸ್ಯರಾದ ಸುಮಾರಾಣಿ, ಚಿಕ್ಕಣ್ಣ, ಮುಖಂಡರಾದ ರಾಜಶೇಖರ್, ನಾಗರಾಜು, ನಾಗಮ್ಮ ರಮೇರ್ಶ, ಕೃಷ್ಣ ಇದ್ದರು.

No comments:

Post a Comment