Friday 12 September 2014

ಸ್ವಯಂ ಉದ್ಯೋಗ ಕಲ್ಪಿಸುವ ಆಧಾರ ಯೋಜನೆಯಡಿ ಸಾಲ    ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಿರುವ ಕುರಿತು.
ಮಂಡ್ಯ ಸೆ.12 - 2014-15ನೇ ಸಾಲಿಗೆ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ಆಧಾರ ಯೋಜನೆಯಡಿ  ಪೆಟ್ಟಿಗೆ ಅಂಗಡಿ ಮತ್ತು ಸಾಲ ಸೌಲಭ್ಯಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಯಾವುದೇ ಇಲಾಖೆಯಿಂದ ಸಾಲ ಸೌಲಭ್ಯ ಹಾಗೂ ಧನ ಸಹಾಯ  ಪಡೆಯದ 18 ರಿಂದ 55 ವಯೋಮಿತಿಯೊಳಗಿನ ವಿಕಲಚೇತನರು ನಿಗದಿತ ನಮೂನೆಯ ಅರ್ಜಿಯನ್ನು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ವಿಕಲಚೇತನರ ಕೆಲಸ ನಿರ್ವಹಿಸುವ ವಿವಿದ್ದೋದೇಶ  ಪುನರ್ವಸತಿ ಸಹಾಯಕರು (ಒ.ಖ.W) ರವರಿಂದ ಅರ್ಜಿ  ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 30 ರೊಳಗೆ ಸಲ್ಲಿಸುವುದು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಒ.ಖ.W ಗಳನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಮಂಡ್ಯರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ  ಆಡಳಿತ 
ನ್ಯಾಯಾಧೀಕರಣದಲ್ಲಿ  ತರಬೇತಿಗೆ ಅರ್ಜಿ ಆಹ್ವಾನ
        2014-15ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 40 ವರ್ಷದೊಳಗಿನ ಹಾಗೂ ವಾರ್ಷಿಕ ರೂ.2.00ಲಕ್ಷ ಆದಾಯದ ಮಿತಿಯಿರುವ ಅಭ್ಯರ್ಥಿಗಳು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಅರ್ಜಿಗಳನ್ನು ಪಡೆದು ಅದೇ ಕಚೇರಿಗೆ ಅಕ್ಟೋಬರ್ 13 ರೊಳಗಾಗಿ ಭರ್ತಿ ಮಾಡಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾ/ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು.
ಸೆ.16 ರಂದು ಎಸ್.ಸಿ.ಪಿ ಹಾಗೂ ಟಿ.ಎಸ್.ಪಿ. ಸಭೆ
ದಿನಾಂಕ:15-09-2014 ರಂದು ನಿಗಧಿಗೊಳಿಸಲಾಗಿದ್ದ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿ ರಾಜ್ಯ/ಜಿಲ್ಲಾ ವಲಯದಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳು ಅನುಷ್ಠಾನ ಮಾಡುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಸೂಚನೆಯಂತೆ ದಿನಾಂಕ:16-09-2014ರಂದು 12.00ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ, ಮಂಡ್ಯದಲ್ಲಿ  ಪ್ರಗತಿ ಪರಿಶೀಲನಾ ಸಭೆ ಕರೆಯಲಾಗಿದೆ. ಸಂಬಂಧಿಸಿದ ಅನುಷ್ಠಾನ ಅಧಿಕಾರಿಗಳು ವಿಷಯ ಸೂಚಿಯಲ್ಲಿ ತಿಳಿಸಿರುವ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿಯೊಂದಿಗೆ ಸಭೆಗೆ ಖುದ್ದಾಗಿ ಹಾಜರಾಗುವುದು. ವಿಷಯ ಸೂಚಿಗಳ ಬಗ್ಗೆ ಪ್ರಗತಿ ವರದಿಯ ºಡ್ರ್À/ಸಾಪ್ಟ್ ಪ್ರತಿಯನ್ನು ದಿನಾಂಕ:  15-09-2014ರೊಳಗೆ ಕಡ್ಡಾಯವಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಮಂಡ್ಯ ರವರಿಗೆ ಮುದ್ದಾಂ/ಇ.ಮೇಲ್ (ಜsತಿomಚಿಟಿಜಥಿಚಿ@gmಚಿiಟ.ಛಿom) ಮೂಲಕ ಕಳುಹಿಸಲು ಕೋರಿದೆ.

No comments:

Post a Comment