Tuesday 2 September 2014

ಮುಖ್ಯಮಂತ್ರಿ ಪ್ರವಾಸ ಕಾರ್ಯಕ್ರಮ
    ಮೈಸೂರು,ಸೆ.2.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಸೆಪ್ಟೆಂಬರ್ 5 ರಂದು ಬೆಳಿಗ್ಗೆ 9-50 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಬೆಳಿಗ್ಗೆ 10-00 ಗಂಟೆಗೆ ಕರ್ನಾಟಕ ಪೊಲೀಸ್ ಅಕಾಡೆಮಿ ನೂತನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಆಯೋಜಿಸಿರುವ ಎಂ-ಟ್ರಾಕ್ ಯೋಜನೆಗೆ ಚಾಲನೆ, ನೂತನ ವಿ.ವಿ.ಪುರಂ ಮತ್ತು ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆ ಸಂಚಾರ ಪೊಲೀಸ್ ಠಾಣೆ, ಹಾಗೂ ಕೆ.ಪಿ.ಎ. ಆವರಣದಲ್ಲಿನ ನೂತನ ಆಡಳಿತ ವಿಭಾಗ, ಶಸ್ತ್ರಾಸ್ತ್ರಗಳ, ಮೋಟಾರು ವಾಹನ ಹಾಗೂ ವಿಸ್ತøತ ಭೋಜನ ಕೊಠಡಿ ಕಟ್ಟಡಗಳನ್ನು ಉದ್ಘಾಟಿಸುವರು. ನಂತರ 11 ಗಂಟೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಸಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟನೆ ಹಾಗೂ 2014ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಕೃಷ್ಣಮೂರ್ತಿ ಪುರಂನಲ್ಲಿರುವ ಶಾರದ ವಿಲಾಸ ಕಾಲೇಜಿನಲ್ಲಿ  ಶಾರದ ವಿಲಾಸ ಕಾನೂನು ಕಾಲೇಜಿನ ವಜ್ರ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ ಸಂಜೆ 6 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ  ತೆರಳುವರು.
ಅಧಿಕಾರ ಸ್ವೀಕಾರ
      ಮೈಸೂರು,ಸೆ.2.ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಡಾ|| ಸಿ.ಜೆ. ಬೆಟಸೂರ್ ಮಠ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಇವರು ಈ ಹಿಂದೆ ಮೈಸೂರಿನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ, ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತರಾಗಿ ಸೇವೆ ಸಲ್ಲಿಸಿರುತ್ತಾರೆ.
ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ
       ಮೈಸೂರು,ಸೆ.2.ತಿ. ನರಸೀಪುರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದ 09 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 03 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ  ದಿನಾಂಕ:24-05-2014 ರಂದು ನಡೆದ ಆಯ್ಕೆ ಸಮಿತಿಯು ಆಯ್ಕೆ ಮಾಡಿರುವ ಸಂಭವನೀಯ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ತಿ.ನರಸೀಪುರ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಲ್ಲಿ  ಪ್ರಕಟಿಸಿದೆ.
     ಸಂಭವನೀಯ ಆಯ್ಕೆ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ದಿನಾಂಕ:09-09-2014 ರೊಳಗಾಗಿ  ಪೂರಕ ದಾಖಲೆಗಳೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಂ-ಟ್ರಾಕ್ ಯೋಜನೆಗೆ ಚಾಲನೆ
    ಮೈಸೂರು,ಸೆ.2.ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಎಂ-ಟ್ರಾಕ್ ಯೋಜನೆಗೆ ಚಾಲನೆ ಹಾಗೂ ನೂತನ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆ, ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಗಳ ಉದ್ಘಾಟನೆ, ಕೆ.ಪಿ.ಎ. ಆವರಣದಲ್ಲಿನ ನೂತನ ಆಡಳಿತ ವಿಭಾಗ, ಶಸ್ತ್ರಾಸ್ತ್ರಗಳ, ಮೋಟಾರು ವಾಹನ ಹಾಗೂ ವಿಸ್ತøತ ಭೋಜನ ಕೊಠಡಿ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ಸೆಪ್ಟೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಪೊಲೀಸ್ ಅಕಾಡೆಮಿ ನೂತನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ತನ್ವೀರ್ ಸೇಠ್ ಅವರು ಅಧ್ಯಕ್ಷತೆ ವಹಿಸುವರು.
    ಗೃಹ ಸಚಿವ ಕೆ.ಜೆ.ಜಾರ್ಜ್, ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ.ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆ ಪೂಜ್ಯ ಮಹಾಪೌರರಾದ ಎನ್.ಎಂ. ರಾಜೇಶ್ವರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಪುಷ್ಪಾವತಿ ಅಮರನಾಥ್, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಪ್ರತಾಪ ಸಿಂಹ, ವಿಧಾನಸಭಾ ಸದಸ್ಯರಾದ ಎಂ.ಕೆ. ಸೋಮಶೇಖರ್, ವಾಸು, ಜಿ.ಟಿ.ದೇವೇಗೌಡ, ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಎಸ್.ನಾಗರಾಜು, ಮರಿತಿಬ್ಬೇಗೌಡ, ಆರ್. ಧರ್ಮಸೇನ, ಗೃಹ ಇಲಾಖೆ ನಿವೃತ್ತ ಸಲಹೆಗಾರರಾದ ಕೆಂಪಯ್ಯ, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರಾದ ವಿ. ಶೈಲೇಂದ್ರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಹಾಗೂ ಡಿ.ಜಿ. ಮತ್ತು ಐಜಿಪಿ ಲಾಲ್ ರುಖುಮಾ ಪಚಾವೋ, ಡಿಜಿಪಿ ಸುಶಾಂತ್ ಮಹಾಪಾತ್ರ ಇನ್ನಿತರ ಗಣ್ಯರು ಭಾಗವಹಿಸುವರು. 
ಹಿರಿಯ ಕುಸ್ತಿ ಪಟುಗಳು ಸಭೆ

    ಮೈಸೂರು,ಸೆ.2.ಮೈಸೂರು ದಸರಾ ಮಹೋತ್ಸವ 2014ರ ಅಂಗವಾಗಿ ನಡೆಯುವ ಕುಸ್ತಿ ಪಂದ್ಯಾವಳಿಗಳು ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ಮತ್ತು ಆಕರ್ಷಣೀಯವಾಗಿ ನಡೆಸುವ ಉದ್ದೇಶದಿಂದ ಹಿರಿಯ ಕುಸ್ತಿ ಪಟುಗಳು ಹಾಗೂ ವಿವಿಧ ಗರಡಿ ಮನೆಗಳ ಹಿರಿಯ ಪ್ರತಿನಿಧಿಗಳ ಸಭೆಯನ್ನು ದಿ. 4-9-2014ರ ಗುರುವಾರ ಮಧ್ಯಾಹ್ನ 4-30 ಕ್ಕೆ ಪೋಲಿಸ್ ಆಫಿಸರ್ಸ್ ಮೆಸ್, ಎಸ್‍ಪಿ. ಕಛೇರಿ ಎದುರು, ಜಲಪುರಿ, ಮೈಸೂರು ಇಲ್ಲಿ ಕರೆಯಲಾಗಿದೆ.
     ಹಿರಿಯ ಕುಸ್ತಿ ಪಟುಗಳು, ಮತ್ತು ವಿವಿಧ ಗರಡಿ ಮನೆಗಳ ಹಿರಿಯ ಕುಸ್ತಿ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಮೂಲ್ಯ ಸಲಹೆ, ಸೂಚನೆ ಹಾಗೂ ಸಹಕಾರವನ್ನು ನೀಡಬೇಕಾಗಿ ಕುಸ್ತಿ ಉಪಸಮಿತಿ ಕಾರ್ಯದರ್ಶಿ ಡಿ. ರವಿಕುಮಾರ್ ಕೋರಿದ್ದಾರೆ. ಸಭೆಯಲ್ಲಿ ಭಾಗವಹಿಸುವವರು  ಕುಸ್ತಿ ಉಪಸಮಿತಿಯ ಅಧ್ಯಕ್ಷ  ಚೌಹಳ್ಳಿ ಪುಟ್ಟಸ್ವಾಮಿ, ಮೊ. 9964406869, 9535789734, ಉಪಾಧ್ಯಕ್ಷ ಪೈ|| ಆರ್ ಶಿವಲಿಂಗು, 9880863535, ಪೈ|| ಪ್ರವೀಣ್ ಕುಮಾರ್, ಮೊ. 9886577486 ರವರುಗಳಿಗೆ ದೂರವಾಣಿ ಮೂಲಕ ಅಥವಾ ಸಂದೇಶದ [ಎಸ್‍ಎಂಎಸ್.] ಮೂಲಕ ಮಾಹಿತಿ ನೀಡಬೇಕಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 10 ರಿಂದ  ಪಡಿತರ ವಿತರಣೆ
    ಮೈಸೂರು,ಸೆ.2.ಸೆಪ್ಟೆಂಬರ್ 2014ನೇ ಮಾಹೆಯ ಪಡಿತರ ಸರಬರಾಜಿನಲ್ಲಿ ಆಗಿರುವ ಕೆಲವು ಅಡಚಣೆಗಳಿಂದ ಪಡಿತರ ವಿತರಣೆಯನ್ನು ಸೆಪ್ಟೆಂಬರ್ 10 ರಿಂದ  ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ  ಮಾಡಲಾಗುವುದು. ಪಡಿತರದಾರರು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳಬಹುದಾಗಿದೆ. 2014ನೇ ಸೆಪ್ಟೆಂಬರ್ ಮಾಹೆಯ ಪಡಿತರ ಖಾತರಿ ಯೋಜನೆಯು ಸೆಪ್ಟೆಂಬರ್ 10ನೇ ತಾರೀಖಿನಿಂದ 20ನೇ ತಾರೀಖಿನವರೆಗೆ ಇದ್ದು ಈ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಕಡ್ಡಾಯವಾಗಿ ಪಡಿತರ ವಿತರಿಸಲಾಗುವುದು. ಈ ಬದಲಾವಣೆಯು ಸೆಪ್ಟೆಂಬರ್ 2014ರ ಮಾಹೆಗೆ ಮಾತ್ರ ಅನ್ವಯಿಸುತ್ತದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ ಮಾಹೆ ಪಡಿತರ ಬಿಡುಗಡೆ
     ಮೈಸೂರು,ಸೆ.2.ಮೈಸೂರು ಜಿಲ್ಲೆಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ   ಸೆಪ್ಟೆಂಬರ್ 2014ರ ಮಾಹೆಗೆ ಅಂತ್ಯೋದಯ ಕಾರ್ಡುದಾರರಿಗೆ 29 ಕೆ.ಜಿ. ಅಕ್ಕಿ,(ರೂ. 1=00 ಪ್ರತಿ ಕೆ.ಜಿ.ಗೆ) 6 ಕೆ.ಜಿ. ಗೋಧಿ (ರೂ. 1=00 ಪ್ರತಿ ಕೆ.ಜಿ.ಗೆ) ನೀಡಲಾಗುವುದು.
     ಬಿಪಿಎಲ್ ಏಕಸದಸ್ಯ ಪಡಿತರ ಕಾರ್ಡುದಾರರಿಗೆ 7 ಕೆ.ಜಿ. ಅಕ್ಕಿ,  2 ಕೆ.ಜಿ. ಗೋಧಿ, ರಾಗಿ 1 ಕೆ.ಜಿ.,  ದ್ವಿ ಸದಸ್ಯ 15 ಕೆ.ಜಿ. ಅಕ್ಕಿ, 4 ಕೆ.ಜಿ. ಗೋಧಿ, 1 ಕೆ.ಜಿ. ರಾಗಿ,  ತ್ರಿ ಸದಸ್ಯ ಮತ್ತು ಅದಕ್ಕಿಂತ ಹೆಚ್ಚಿನ ಸದಸ್ಯರಿಗೆ 22 ಕೆ.ಜಿ. ಅಕ್ಕಿ 6 ಕೆ.ಜಿ. ಗೋಧಿ, 2 ಕೆ.ಜಿ. ರಾಗಿ ನೀಡಲಾಗುವುದು.
    ಪ್ರತಿ ಕಾರ್ಡುದಾರರಿಗೆ ತಲಾ 1 ಕೆ.ಜಿ. ಸಕ್ಕರೆ ರೂ. 13-50 ದರದಲ್ಲಿ ಬಿಡುಗಡೆ ಮಾಡಲಾಗುವುದು.
      ಸೆಪ್ಟೆಂಬರ್ 2014ರ ಮಾಹೆಯಲ್ಲಿ ಎಪಿಎಲ್ ಪಡಿತರ ಚೀಟಿದಾರರಿಗೆ ಹಂಚಿಕೆ ಬಿಡುಗಡೆ ಮಾಡಿರುವುದಿಲ್ಲ.
      ಜಿಲ್ಲೆಯಲ್ಲಿ ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಕಾರ್ಡುದಾರರು ಸಂಬಂಧಿಸಿದ ಗ್ರಾಮ ಪಂಚಾಯಿತಿ/ತಾಲ್ಲೂಕು ಮಟ್ಟದ ಅಧಿಕಾರಿಗಳು ಅಥವಾ ತಹಶೀಲ್ದಾರ್ ಅವರನ್ನು ಸಂಪರ್ಕಿಸಬಹುದು ಅಥವಾ ಡಾ.ಕೆ. ರಾಮೇಶ್ವರಪ್ಪ, ಹಿರಿಯ ಉಪನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮೈಸೂರು ದೂರವಾಣಿ ಸಂಖ್ಯೆ 0821-2422107 ಅಥವಾ ಬೆಂಗಳೂರಿನ ಶುಲ್ಕ ರಹಿತ ಸಹಾಯವಾಣಿ 1800-425-9339ಗೆ ದೂರು ಸಲ್ಲಿಸಬಹುದೆಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 7 ರಂದು ನಾಡ ಕುಸ್ತಿ ಜೋಡಿ ಕಟ್ಟುವ ಕಾರ್ಯ
     ಮೈಸೂರು ದಸರಾ ಮಹೋತ್ಸವ-2014ರ ಅಂಗವಾಗಿ ಕುಸ್ತಿ ಪಂದ್ಯಾವಳಿಗಳು ದಿ. 25-9-2014 ರಿಂದ 1-10-2014 ರವರೆಗೆ ಶ್ರೀ ಡಿ. ದೇವರಾಜರಸ್ ವಿವಿದೋದ್ದೇಶ ಕ್ರೀಡಾಂಗಣ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ನಡೆಯಲಿದೆ. ಈ ನಾಡಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳ ಜೋಡಿ ಕಟ್ಟುವ ಕಾರ್ಯ ದಿ. 7-9-2014 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಬಿ. ವಿ. ಕಾರಂತ ರಂಗಮಂದಿರ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ನಡೆಯಲಿದೆ.   ಈ ಜೋಡಿ ಕಟ್ಟುವ ಕಾರ್ಯದಲ್ಲಿ ಭಾಗವಹಿಸಲು ಇಚ್ಛಿಸುವ ಕುಸ್ತಿಪಟುಗಳು ನಿಗಧಿತ ಸಮಯಕ್ಕೆ ತಮ್ಮ ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಕುಸ್ತಿ ಸಮವಸ್ತ್ರದಲ್ಲಿರುವ 2 ಭಾವಚಿತ್ರದೊಂದಿಗೆ ಭಾಗವಹಿಸತಕ್ಕದ್ದು. ಭಾಗವಹಿಸಿರುವ ಕುಸ್ತಿಪಟುಗಳ ಪೈಕಿ ಸೂಕ್ತ ಕುಸ್ತಿಪಟುಗಳ ಜೋಡಿಯನ್ನು ಕಟ್ಟಲಾಗುತ್ತದೆ. ಯಾವ ದಿನಾಂಕದಂದು ಅವರ ಕುಸ್ತಿ ಪಂದ್ಯಾವಳಿ ಇದೆ ಎನ್ನುವುದನ್ನು ಸೂಚಿಸಲಾಗುತ್ತದೆ.
     ಹೆಚ್ಚಿನ ಮಾಹಿತಿಗಾಗಿ ಕುಸ್ತಿ ಉಪಸಮಿತಿ ಅಧ್ಯಕ್ಷ ಚೌಹಳ್ಳಿ ಪುಟ್ಟಸ್ವಾಮಿ, ಮೊ. 9964406869, 9535789734, ಉಪಾಧ್ಯಕ್ಷ ಪೈ|| ಆರ್ ಶಿವಲಿಂಗು, 9880863535, ಪೈ|| ಪ್ರವೀಣ್ ಕುಮಾರ್, ಮೊ. 9886577486 ಅವರನ್ನು ಸಂಪರ್ಕಿಸುವುದು ಎಂದು ಕುಸ್ತಿ ಉಪಸಮಿತಿ ಕಾರ್ಯದರ್ಶಿ ಡಿ. ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿಚಾರಣೆಗೆ ಹಾಜರಾಗಲು ಸೂಚನೆ
   ಮೈಸೂರು,ಸೆ.2.ಕೆ.ಆರ್.ನಗರ ಉಪ ಅಂಚೆ ಕಚೇರಿಯಲ್ಲಿ ಅಂಚೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಿ.ಎಂ.ಶಿವಣ್ಣೇಗೌಡ ಅವರು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು,  ಇವರ ವಿರುದ್ದ ದಿನಾಂಕ 19.08.2014 ರಂದು ನಡೆದ ಇಲಾಖಾ ರೂಲ್ 14 ವಿಚಾರಣೆ  ಸಂದರ್ಭದಲ್ಲೂ ಸಹ ಹಾಜರಾಗಿರುವುದಿಲ್ಲ.
     ಈ  ವಿಚಾರಣೆಯನ್ನು ದಿನಾಂಕ 01.09.2014 ರಂದು ನಡೆಸುವುದಾಗಿ, ಕಚೇರಿಯಲ್ಲಿ ಲಭ್ಯವಿರುವ ಮನೆಯ ಮತ್ತು ಕಚೇರಿಯ ವಿಳಾಸಕ್ಕೆ ನೋಂದಾಯಿತ ಪತ್ರಗಳನ್ನು ಕಳುಹಿಸಿದ್ದು, ಸದರಿ ಪತ್ರಗಳು ನೀವು ವಿಳಾಸದಲ್ಲಿ ಲಭ್ಯವಿಲ್ಲವೆಂದು ವಾಪಾಸು ಬಂದಿರುತ್ತದೆ.
     ಮುಂದಿನ ವಿಚಾರಣೆಯನ್ನು 12.09.2014 ರಂದು ಸಹಾಯಕ ಅಂಚೆ ಅಧೀಕ್ಷಕರು, ಪಶ್ಚಿಮ ಉಪ ವಿಭಾಗ, ಕುವೆಂಪುನಗರ, ಮೈಸೂರು ಇವರ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಈ   ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ತಪ್ಪಿದಲ್ಲಿ ವಿಚಾರಣೆಯನ್ನು ಏಕಪಕ್ಷೀಯವಾಗಿ ನಡೆಸಲಾಗುವುದು ಎಂದು ಕುವೆಂಪುನಗರ ಪಶ್ಚಿಮ ಅಂಚೆ ವಿಭಾಗದ ಸಹಾಯಕ ಅಂಚೇ ಅಧೀಕ್ಷಕ ಎಂ.ಬಿ.ಸುರೇಶ್ ಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment