Friday 5 September 2014

ಮೈಸೂರು ಸುದ್ದಿಗಳು.

ಕಲಾವಿದರಿಗೆ ಗೌರವ ನೀಡಿ ಸಚಿವೆ ಉಮಾಶ್ರೀ
    ಮೈಸೂರು,ಸೆ.ಮೈಸೂರು ದಸರೆಯಲ್ಲಿ ಕಾರ್ಯಕ್ರಮ ನಿಡುವುದೇ ದೊಡ್ಡ ಗೌರವ ಎಂದು ಭಾವಿಸಿ ಬರುವ ಕಲಾವಿದರನ್ನು ಕಡೆಗಣಿಸಬೇಡಿ.
    ಇದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಅವರು ಮೈಸೂರು ಜಿಲ್ಲಾಡಳಿತಕ್ಕೆ ನೀಡಿದ ಸೂಚನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರಲ್ಲಿ ಮಾಡಿಕೊಂಡ ಮನವಿ.
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳ ವಿವರ ಪಡೆದುಕೊಂಡ ಅವರು ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಂಭಾವನೆಯಲ್ಲಿ ಮೋಸ ಆಗಬಾರದು. ವಾಸ್ತವ್ಯಕ್ಕೆ ಉತ್ತಮ ವ್ಯವಸ್ಥೆ ಮಾಡಬೇಕು. ಹಾಗೂ ವಾಸ್ತವ್ಯ ಸ್ಥಳದಿಂದ ಕಾರ್ಯಕ್ರಮದ ಸ್ಥಳಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.         
    ದಸರಾ ವೇಳೆಗೆ ಪುರಭವನವನ್ನು ಪೂರ್ಣವಾಗಿ ದುರಸ್ತಿಗೊಳಿಸಲು ಕ್ರಮವಹಿಸಿ, ಸಾಂಸ್ಕøತಿಕ ನಗರ ಮೈಸೂರಿನಲ್ಲಿ ಇದು ಯಾವಾಗಲೂ ಕಾರ್ಯಕ್ರಮಗಳಿಗೆ ಲಭ್ಯವಿರಬೇಕು ಎಂದರು.
    ಸಾಂಸ್ಕøತಿಕ ಕಾರ್ಯಕ್ರಮಗಳ ಮಾಹಿತಿ ನೀಡಿದ ಉಪವಿಶೇಷಾಧಿಕಾರಿ ಪಾಲಯ್ಯ ಅವರು,    ಮೈಸೂರು ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿದೆ ಎಂದರು.
   ಅರಮನೆ ವೇದಿಕೆಯಲ್ಲಿ 29 ಕಾರ್ಯಕ್ರಮ, ಜಗನ್ಮೋಹನ ಅರಮನೆಯಲ್ಲಿ 27, ಕಲಾಮಂದಿರದಲ್ಲಿ 27, ಗಾನಭಾರತಿ 27, ಪುರಭವನದಲ್ಲಿ 27, ಚಿಕ್ಕಗಡಿಯಾರ ಆವರಣದಲ್ಲಿ 9 ಕಾರ್ಯಕ್ರಮಗಳು ಸೇರಿದಂತೆ ಒಟ್ಟು 146 ವೇದಿಕೆ ಕಾರ್ಯಕ್ರಮಗಳು ನಡೆಯಲಿದೆ.
   ಅರಮನೆ ವೇದಿಕೆಯಲ್ಲಿ ಸಂಜೆ 5-30 ರಿಂದ 6 ಗಂಟೆಯವರೆಗೆ ಜಾನಪದ ಕಾರ್ಯಕ್ರಮ, ಸಂಜೆ 6 ರಿಂದ 6-30 ಗಂಟೆಯವರೆಗೆ ಹೊರ ರಾಜ್ಯ ಕಲಾವಿದರಿಂದ, ಸಂಜೆ 6-30 ರಿಂದ 8 ಗಂಟೆÉಯವರೆಗೆ ರಾಷ್ಟ್ರಮಟ್ಟದ ಕನ್ನಡ ಕಲಾವಿದರಿಂದ, ರಾತ್ರಿ. 8 ರಿಂದ 9-30 ರವರೆಗೆ ಅಂತರರಾಷ್ಟ್ರೀಯ ಖ್ಯಾತ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ.
    ಜಗನ್ಮೋಹನ ಅರಮನೆ ವೇದಿಕೆ, ಕಲಾಮಂದಿರ ವೇದಿಕೆ,  ಗಾನಭಾರತಿ ವೇದಿಕೆ,  ಪುರಭವನ ವೇದಿಕೆ, ಚಿಕ್ಕಗಡಿಯಾರ ಆವರಣದಲ್ಲಿ ಸಂಜೆ 6-30 ರಿಂದ 8-30 ರವರೆಗೆ ಸ್ಥಳೀಯ ಹಾಗೂ ಹೊರ ಜಿಲ್ಲೆ ಕಲಾವಿದರಿಂದ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಅಪೇಕ್ಷಿಸಿ ಈವರೆಗೆ 450 ಅರ್ಜಿಗಳು ಸ್ವೀಕೃತವಾಗಿವೆ. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಬಯಸುವ ಕಲಾವಿದರು ಸೆಪ್ಟೆಂಬರ್ 10 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಸಾಂಸ್ಕøತಿಕ ಕಾರ್ಯಕ್ರಮ ನೀಡಲು ಶೇ. 40 ರಷ್ಟು  ಸ್ಥಳೀಯ, ಶೇ. 30 ರಷ್ಟು ಹೊರ ಜಿಲ್ಲಾ, ಶೇ. 20 ರಷ್ಟು ರಾಜ್ಯ ಮಟ್ಟದ, ಶೇ. 10 ರಷ್ಟು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕಲಾವಿದರನ್ನು ಆಯ್ಕೆಮಾಡಲಾಗುವುದು ಎಂದರು. 
   ಇದಕ್ಕೂ ಮುನ್ನ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
    ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಜಿಲ್ಲಾಧಿಕಾರಿ ಸಿ.ಶಿಖಾ, ದಸರಾ ಸಾಂಸ್ಕøತಿಕ ಉಪಸಮಿತಿಯ ಅಧ್ಯಕ್ಷೆ ಡಾ| ಸುಜಾತ ಶ್ರೀನಿವಾಸ, ಉಪಾಧ್ಯಕ್ಷ ಸ್ಟ್ಯಾನ್ಲಿ, ಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು. 

ವೃತ್ತಿ ಹಾಗೂ ನಿರೂಪಣಾ ಕೌಶಲ್ಯ ತರಬೇತಿ
      ಮೈಸೂರು,ಸೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡÀಕ್ಕೆ ಸೇರಿದ ಅಭ್ಯರ್ಥಿಗಳಿಗೆ ವೃತ್ತಿ ಕೌಶಲ್ಯ/ನಿರೂಪಣಾ ಕೌಶಲ್ಯ ತರಬೇತಿ ನೀಡಲಾಗುವುದು.
ಸರ್ಕಾರಿ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ / ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮ, ಸಮೂಹ ಸಂವಹನ, ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಪ್ರಥಮ ವರ್ಷ ಪದವಿ /ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ 50 ಅಂಕಗಳಿಸಿರುವ ಪರಿಶಿಷ್ಟ ಪಂಗಡÀಕ್ಕೆ ಸೇರಿದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರ ಮೂಲಕ ಸೆಪ್ಟಂಬರ್ 15 ರೊಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು ಇಲ್ಲಿಗೆ ವಿವರವನ್ನು ಕಳುಹಿಸಿಕೊಡಬೇಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
     ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821 2423251 ನ್ನು ಸಂಪರ್ಕಿಸುವುದು.

ಲ್ಯಾಪ್‍ಟಾಪ್ ಹಾಗೂ  ಡಿಜಿಟಿಲ್ ಕ್ಯಾಮೆರಾ ವಿತರಣೆ
    ಮೈಸೂರು,ಸೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆ ಲ್ಯಾಪ್‍ಟಾಪ್ ಹಾಗೂ  ಡಿಜಿಟಿಲ್ ಕ್ಯಾಮೆರಾ ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
     ಸರ್ಕಾರಿ ಪದವಿ ಶಿಕ್ಷಣ ಸಂಸ್ಥೆಗಳಲ್ಲಿ / ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮ, ಸಮೂಹ ಸಂವಹನ, ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಪ್ರಥಮ ವರ್ಷ ಪದವಿ /ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ 50 ಅಂಕಗಳಿಸಿರುವ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರ ಮೂಲಕ ಸೆಪ್ಟಂಬರ್ 15 ರೊಳಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು ಇಲ್ಲಿಗೆ ವಿವರವನ್ನು ಕಳುಹಿಸಿಕೊಡಬೇಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
     ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821 2423251 ನ್ನು ಸಂಪರ್ಕಿಸುವುದು.
ಜಿಲ್ಲಾಧಿಕಾರಿಗಳಿಂದ ಕಾಮಗಾರಿ ಪ್ರಗತಿಯ ಪರಿಶೀಲನೆ
ಮೈಸೂರು,ಸೆ.ಜಿಲ್ಲಾಧಿಕಾರಿ ಸಿ.ಶಿಖಾ ಅವರು ಇಂದು ಮೈಸೂರು ದಸರಾ ಮಹೋತ್ಸವ-2014ರ ಅಂಗವಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಂದಾಜು ರೂ.4.50 ಲಕ್ಷಗಳಲ್ಲಿ ಕೈಗೊಂಡಿರುವ ನಾರಾಯಣ ಶಾಸ್ತ್ರೀ ರಸ್ತೆ ಹಾಗೂ ಅಂದಾಜು ರೂ. 4.00 ಲಕ್ಷಗಳಲ್ಲಿಕೈಗೊಂಡಿರುವ ರಾಮಸ್ವಾಮಿ ವೃತ್ತದಿಂದ ಹಾರ್ಡಿಂಜ್ ವೃತ್ತದವರೆಗಿನ  ರಸ್ತೆ ಕಾಮಗಾರಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‍ಭವನ ಕಾಮಗಾರಿಯ ಪ್ರಗತಿ ಕುರಿತು ಸ್ಥಳ ಪರಿಶೀಲನೆ ನಡೆಸಿದರು.
 ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಸ್.ಪಾಲಯ್ಯ, ಅಧೀಕ್ಷಕ ಅಭಿಯಂತರ ಎಸ್.ಶಿವಕುಮಾರ್, ಕಾರ್ಯಪಾಲಕ ಅಭಿಯಂತರ ಬಿ.ಎನ್.ಪ್ರಭಾಕರ್ ಮತ್ತು ಎಸ್.ವೀರಭದ್ರಯ್ಯ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಆರ್.ರಾಜಶೇಖರ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
  ಮೈಸೂರು,ಸೆ.-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೇ/ಜೂನ್ 2014ರಲ್ಲಿ ನಡೆದ ಅಂತಿಮ ಎಂ.ಎ ಇಂಗ್ಲೀಷ್ ಪರೀಕ್ಷೆ ಫಲಿತಾಂಶವನ್ನು ಕರಾಮುವಿ ವೆಬ್‍ಸೈಟ್ ತಿತಿತಿ.ಞsoumಥಿsoಡಿe.eಜu.iಟಿ ನಲ್ಲಿ ಪ್ರಕಟಿಸಿದೆ.
  ಮರುಮೌಲ್ಯ ಮಾಪನ ಹಾಗೂ ಛಾಯಾಪ್ರತಿಗೆ ಅರ್ಜಿ ಸಲ್ಲಿಸ ಬಯಸುವ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟಗೊಂಡ 14 ದಿನಗಳೊಳಗಾಗಿ ಅರ್ಜಿ ಸಲ್ಲಿಸಬೇಕಿದ್ದು, ನಂತರ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
    ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2515169, 2519942 ನ್ನು ಸಂಪರ್ಕಿಸುವುದು.
ಪ್ರಸಾಧನ ಹಾಗೂ ಬೆಳಕು ವಿನ್ಯಾಸ ಶಿಬಿರ: ಅರ್ಜಿ ಆಹ್ವಾನ
   ಮೈಸೂರು,ಸೆ.4.(ಕ.ವಾ):-ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸೆಪ್ಟೆಂಬರ್ 16 ರಂದು ನೃತ್ಯ ಪ್ರಕಾರಕ್ಕೆ ಸಂಬಂಧಿಸಿದ ಪ್ರಸಾಧನ ಹಾಗೂ ಬೆಳಕು ವಿನ್ಯಾಸ ಎಂಬ ವಿಷಯದ ಬಗ್ಗೆ ಒಂದು ದಿನದ ಶಿಬಿರವನ್ನು ಬೆಂಗಳೂರಿನ ಕನ್ನಡ ಭವನದ ಎರಡನೇ ಮಹಡಿಯಲ್ಲಿರುವ ವರ್ಣ ಆರ್ಟ್ ಗ್ಯಾಲರಿ (ಕರ್ನಾಟಕ ಲಲಿತ ಕಲಾ ಅಕಾಡೆಮಿ)ಯಲ್ಲಿ ಏರ್ಪಡಿಸಿದೆ.
    ಶಿಬಿರ ಉಚಿತವಾಗಿದ್ದು ಗರಿಷ್ಠ 30 ಮಂದಿ, ಶಿಬಿರಾರ್ಥಿಗಳಿಗೆ ಅವಕಾಶವಿದೆ. ಆದ್ಯತೆ ಮೇರೆಗೆ ಶಿಬಿರಾರ್ಥಿಗಳ ಹೆಸರನ್ನು ನೋಂದಾಯಿಸಿಕೊಳ್ಳಲಾಗುವುದು.
    ರಂಗಭೂಮಿ ಖ್ಯಾತ ಬೆಳಕು ಮತ್ತು ಪ್ರಸಾಧನ ತಜ್ಞ ಚಂದ್ರಕುಮಾರಸಿಂಗ್ ಅವರು ಶಿಬಿರವನ್ನು ನಡೆಸಿಕೊಡಲಿದ್ದಾರೆ. ಆಸಕ್ತಿ ಕಲಾವಿದರು ದಿನಾಂಕ 10.09.2014ರ ಒಳಗಾಗಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಪ್ರಕಾರ, ಹುಟ್ಟಿದ ದಿನಾಂಕ ಇತ್ಯಾದಿ ವಿವರಗಳ ಸ್ವವಿವರ ಅರ್ಜಿಯನ್ನು ಪಾಸ್‍ಪೋರ್ಟ್ ಭಾವಚಿತ್ರದೊಂದಿಗೆ ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-2 (ದೂರವಾಣಿ ಸಂಖ್ಯೆ: 22215072) ಇಲ್ಲಿಗೆ ಕಳುಹಿಸಿಕೊಡುವುದು.
    ಬೇರೆ ಊರುಗಳಿಂದ ಬರುವ ಶಿಬಿರಾರ್ಥಿಗಳಿಗೆ ವಸತಿ ಸೌಕರ್ಯ ಹಾಗೂ ವಾಸ್ತವ ಪ್ರಯಾಣ ವೆಚ್ಚವನ್ನು ನೀಡಲಾಗುವುದು ಶಿಬಿರದಲ್ಲಿ ಭಾಗವಹಿಸುವ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಕಲಾವಿದರಿಂದ ಅರ್ಜಿ ಆಹ್ವಾನ
   ಮೈಸೂರು,ಸೆ.ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ವರ್ಗದ ಕಲಾವಿದರಿಗೆ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ಕಲಾವಿದರಿಗೆ ಯಕ್ಷಗಾನ ಮತ್ತು ಬಯಲಾಟ ತರಬೇತಿ ನಡೆಸಲಿದೆ.
   ತೆಂಕುತಿಟ್ಟು/ಬಡಗುತಿಟ್ಟು ಯಕ್ಷಗಾನ, ಮೂಡಲಪಾಯ ಯಕ್ಷಗಾನ, ಶ್ರೀಕೃಷ್ಣಪಾರಿಜಾತ, ದೊಡ್ಡಾಟ, ಸಣ್ಣಾಟ, ಘಟ್ಟದಕೋರೆ, ತೊಗಲುಗೊಂಬೆಯಾಟ, ಸೂತ್ರದಗೊಂಬೆಯಾಟ, ಸಲಾಕೆಗೊಂಬೆಯಾಟ ತರಬೇತಿ ನೀಡಬಯಸುವ ಪರಿಶಿಷ್ಟ ವರ್ಗ/ಪರಿಶಿಷ್ಟ ಪಂಗಡದ ಹಿರಿಯ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
    ಅರ್ಜಿ ನಮೂನೆಯನ್ನು ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ರಿಜಿಸ್ಟ್ರಾರ್, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಚಾಲುಕ್ಯ ವಿಭಾಗ, ಜೆ.ಸಿ.ರಸ್ತೆ, ಬೆಂಗಳೂರು-560002 ಇಲ್ಲಿಗೆ ಸೆಪ್ಟೆಂಬರ್ 30 ರೊಳಗಾಗಿ ಕಳುಹಿಸಿಕೊಡಬೇಕಾಗಿ ಕೋರಿದೆ.
   ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ದೂರವಾಣಿ ಸಂಖ್ಯೆ 080-22113146 ನ್ನು ಸಂಪರ್ಕಿಸಬಹುದು.
ಫಲಪುಷ್ಪ ಪ್ರದರ್ಶನ: ಸ್ಪರ್ಧಿಗಳು ಸೆ. 15 ರೊಳಗಾಗಿ ಹೆಸರು ನೋಂದಾಯಿಸಿ
    ಮೈಸೂರು,ಸೆ.ದಸರಾ ಫಲಪುಷ್ಪ ಪ್ರದರ್ಶನ ದಿನಾಂಕ 25.09.2014 ರಿಂದ 05.10.2014 ರವರೆಗೆ ನಡೆಯಲಿದೆ. ನಿಶಾದ್‍ಬಾಗ್ (ಕುಪ್ಪಣ್ಣ ಪಾರ್ಕ್) ಆವರಣದಲ್ಲಿ ಹೂ ಕುಂಡಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಜೋಡಿಸಲು ಕೈಗಾರಿಕೆ ಸಂಸ್ಥೆಗಳು/ ಶಿಕ್ಷಣ ಸಂಸ್ಥೆಗಳು/ ಆಡಳಿತಾಧಿಕಾರಿ ಕಚೇರಿ/ ಆಸ್ಪತ್ರೆ ತೋಟಗಳು / ಖಾಸಗಿ ತೋಟಗಳು ಮತ್ತು ಇತರೆ ಸಂಘ ಸಂಸ್ಥೆಗಳಿಂದ ಭಾಗವಹಿಸುವ ಸ್ಪರ್ಧಿಗಳು 25 ದಿನಗಳ ಮುಂಚಿತವಾಗಿ ಕರ್ಜನ್ ಪಾರ್ಕ್‍ನಲ್ಲಿರುವ ಜಿಲ್ಲಾ ತೋಟಗಾರಿಕೆ ಸಂಘದಲ್ಲಿ ಬಂದು ಹೆಸರು ಮತ್ತು ವಿಳಾಸವನ್ನು ನೋಂದಾಯಿಸಿಕೊಳ್ಳಬೇಕಿದ್ದು, ಸ್ಪರ್ಧಿಗಳು ಸೆಪ್ಟೆಂಬರ್ 15 ರೊಳಗಾಗಿ ಹೆಸರನ್ನು ನೋಂದಾಯಿಸಿ ರಶೀದಿಯನ್ನು ಪಡೆಯಬೇಕಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಾಂಸ್ಕøತಿಕ ಕಾರ್ಯಕ್ರಮ: ಕಲಾವಿದರು ವಿವರ ಸಲ್ಲಿಸಿ
     ಮೈಸೂರು,ಸೆ.ದಸರಾ ಮಹೋತ್ಸವ 2014 ರಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಬಯಸುವ ಕಲಾವಿದರು ಸೆಪ್ಟೆಂಬರ್ 10 ರೊಳಗೆ ಸದಸ್ಯ ಕಾರ್ಯದರ್ಶಿಗಳು, ಸಾಂಸ್ಕøತಿಕ ಉಪಸಮಿತಿ, ದಸರಾ ಸಾಂಸ್ಕøತಿಕ ಉಪಸಮಿತಿ ಕಚೆರಿ, ಅರಮನೆ ಆವರಣ, ಮೈಸೂರು ಅಥವಾ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಲಾಮಂದಿರ, ಮೈಸೂರು ಇಲ್ಲಿಗೆ ತಮ್ಮ ವಿವರಗಳನ್ನು ಸಲ್ಲಿಸಬಹುದಾಗಿದೆ.
    ಹೆಚ್ಚಿನ ಮಾಹಿತಿಗೆ  ದಸರಾ ಸಾಂಸ್ಕøತಿಕ ಉಪಸಮಿತಿಯ ಅಧ್ಯಕ್ಷೆ ಸುಜಾತ ಶ್ರೀನಿವಾಸ್ ದೂರವಾಣಿ ಸಂಖ್ಯೆ 9591572270, ಉಪಾಧ್ಯಕ್ಷ ಸ್ಟ್ಯಾನ್ಲಿ ಎಸ್. 9845876792, ಉಪಾಧ್ಯಕ್ಷ ಶಿವಲಿಂಗಯ್ಯ-8762718044, ಕಾರ್ಯದರ್ಶಿ ನಿರ್ಮಲಾ ಮಠಪತಿ-0821-2513225, ಕಾರ್ಯದರ್ಶಿ ಸುಬ್ರಹ್ಮಣ್ಯ-9448882766ನ್ನು ಸಂಪರ್ಕಿಸಬಹುದು.

ಪ್ರಥಮ ಬಾರಿಗೆ ರಾಜ್ಯ ಮಟ್ಟದ ರಾಕ್ ಬ್ಯಾಂಡ್ ಸ್ಪರ್ದೆ : ಅಭಿನವ ಖರೆ
    ಮೈಸೂರು,ಸೆ.ಮೈಸೂರು ದಸರಾ ಮಹೋತ್ಸವ 2014ರ ಯುವ ಸಂಭ್ರಮ ವೇದಿಕೆಯಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯ ಮಟ್ಟದ ರಾಕ್ ಬ್ಯಾಂಡ್ ಸ್ಪರ್ದೆಯನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ಅವರು ತಿಳಿಸಿದರು.
    ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ದಿನಾಂಕ : 19/09/2014 ರಿಂದ 21/09/2014 ರವರಗೆ ಯುವ ಸಂಭ್ರಮ ವೇದಿಕೆಯಲ್ಲಿ ಬೆಳಗ್ಗೆ 9.00 ರಿಂದ ಮಧ್ಯಾಹ್ನ 3.00 ಘಂಟೆ ವರವಿಗೂ ರಾಕ್ ಬ್ಯಾಂಡ್ ಸ್ಪರ್ದೆಯನ್ನು  ಏರ್ಪಡಿಸಲಾಗುವುದು. ಈ ಸ್ಪರ್ದೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 3 ತಂಡಗಳಿಗೆ ಯುವ ದಸರಾ ಕಾರ್ಯಕ್ರಮದಲ್ಲಿ ಅವಕಾಶ ನೀಡಲಾಗುವುದು ಎಂದರು.
    ದಿನಾಂಕ: 17/09/2014 ರಿಂದ ದಿನಾಂಕ: 22/09/2014 ಪ್ರತಿ ದಿನ ಸಂಜೆ 6.30 ರಿಂದ ರಾತ್ರಿ 10.30 ರವರಗೆ ಯುವ ಸಂಭ್ರಮ ಕಾರ್ಯಕ್ರಮವನ್ನು ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದು, ನಾರಿಶಕ್ತಿ, ಪರಿಸರ ಸಂರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಪಾರಂಪರಿಕ ಆಸ್ತಿಗಳ ಸಂರಕ್ಷಣೆ, ಭಾರತದ ಸ್ವಾತಂತ್ರ ಚಳುವಳಿ, ಕನ್ನಡ ಮತ್ತು ಸಂಸ್ಕøತಿ ಹಾಗೂ ಆರೋಗ್ಯ ಮತ್ತು ನೈರ್ಮಲ್ಯ ವಿಷಯದಾರಿತ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಬೇಕಿದ್ದು, ಕಾರ್ಯಕ್ರಮದ ಪ್ರಸ್ತಾವನೆಯನ್ನು ಸೆಪ್ಟೆಂಬರ್ 5 ರೊಳಗಾಗಿ ಯುವ ದಸರಾ ಸಮಿತಿಗೆ ಸಲ್ಲಿಸುವಂತೆ  ಕಾಲೇಜುಗಳಿಗೆ ತಿಳಿಸಲಾಗಿದೆ ಎಂದರು.
     ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ತಂಡಗಳಿಗೆ ಯುವ ದಸರಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಲಾಗುವುದು. ಮೂರು ಅತ್ಯುತ್ತಮ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು. ಕರ್ನಾಟಕ ರಾಜ್ಯದ ಎಲ್ಲಾ 17 ವಿಶ್ವವಿದ್ಯಾನಿಲಯ ಗಳಿಂದ ಆಯಾಯ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಎಲ್ಲಾ ಕಾಲೇಜುಗಳ ಸಾಂಸ್ಕøತಿಕ ಸ್ಪರ್ಧೆಯನ್ನು ಏರ್ಪಡಿಸಿ ಒಂದು ಅತ್ಯುತ್ತಮ ತಂಡವನ್ನು ಯುವ ಸಂಭ್ರಮ ಕಾರ್ಯಕ್ರಮಕ್ಕೆ ಕಳುಹಿಸಲು ತಿಳಿಸಲಾಗಿದೆ ಎಂದರು.
    ದಿನಾಂಕ 27-09-2014 ರಿಂದ 02-10-2014 ರವರಗೆ ಪ್ರತಿ ದಿನ ಸಂಜೆ 6.30 ರಿಂದ ರಾತ್ರಿ 10.30 ರವರಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ದಿನ ಸಂಜೆ 6.30 ರಿಂದ 8.00 ಘಂಟೆ ವರಗೆ ಯುವ ಸಂಭ್ರಮ, ಗ್ರಾಮೀಣ ದಸರಾ ದಿಂದ ಬರುವ ಅತ್ಯುತ್ತಮ ತಂಡಗಳ ಹಾಗೂ ಸ್ಥಳೀಯ ಕಲಾ ತಂಡಗಳ ಪ್ರದರ್ಶನಗಳನ್ನು ಮತ್ತು ರಾತ್ರಿ 8.00 ಘಂಟೆಯಿಂದ 10.30 ಘಂಟೆ ವರಗೆ ಖ್ಯಾತ ಕಲಾವಿದರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಆರು ದಿನಗಳ ಪೈಕಿ 2 ದಿನಗಳನ್ನು ಕನ್ನಡ ಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ ಎಂದು ಹೇಳಿದರು.
    ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ, ಯುವ ದಸರಾ ಉಪಸಮಿತಿಯ ಅಧ್ಯಕ್ಷ ರಾಕೇಶ್ ಪಾಪಣ್ಣ, ಉಪಾಧ್ಯಕ್ಷ ಅವಿಶ್‍ಗೌಡ, ಗಂಗಾಧರ್ ಕುಷ್ಠಗಿ, ಕಾರ್ಯಾಧ್ಯಕ್ಷ ಎಂ.ಎನ್. ನಟರಾಜ್,   ಕಾರ್ಯದರ್ಶಿ ಡಿ.ಬಿ. ಲಿಂಗಣ್ಣಯ್ಯ ಅವರು ಉಪಸ್ಥಿತರಿದ್ದರು.

No comments:

Post a Comment