Friday 5 September 2014

ನಮ್ಮನ್ನು ನಾವು ಅರಿತರೆ ಜಗತ್ತನ್ನು ಅರಿಯಲು ಸಾಧ್ಯ-ಡಾ||ಹೆಬ್ರಿ

  ನಮ್ಮನ್ನು ನಾವು ಅರಿತರೆ ಜಗತ್ತನ್ನು ಅರಿಯಲು ಸಾಧ್ಯ-ಡಾ||ಹೆಬ್ರಿ
         
      ಮಂಡ್ಯ : ಪ್ರೀತಿಯ ಅರ್ಥವನ್ನು ಯಾರು ಅರಿಯುತ್ತಾರೆಯೋ ಅವರಲ್ಲಿ ಅಂತರಂಗದ ಶುದ್ದತೆಯನ್ನು ಕಾಣಬಹುದು.ಅಂತರಂಗ ಶುದ್ಧಿ ಹೊಂದಿದವನು ಬಹಿರಂಗಕ್ಕೆ ಆದ್ಯತೆ ಕೊಡುವುದಿಲ್ಲ.ಈ ನಿಟ್ಟಿನಲ್ಲಿ ನಮಗೆ ನಾವೇ ಮಿತ್ರರಾಗಲೂಬಹುದು,ನಮಗೆ ನಾವೇ ಶತೃವಾಗಲೂಬಹುದು.ಮೊದಲು ನಮ್ಮನ್ನು ನಾವು ಅರಿತರೆ ಜಗತ್ತನ್ನು ಅರಿಯಲು ಸಾಧ್ಯ ಎಂದು ಡಾ||ಪ್ರದೀಪ್ ಕುಮಾರ್ ಹೆಬ್ರಿ ಅಭಿಪ್ರಾಯಪಟ್ಟರು.
     ಅವರು ಸಾಮಾಜಿಕ ಮತ್ತು ಸಾಂಸ್ಕøತಿಕ ಸಂಘಟನೆ ‘ಸಂಸ್ಕøತಿ’ ವತಿಯಿಂದ ನಡೆಸುತ್ತಿರುವ “ಜೀವನ ದರ್ಶನ ಪ್ರವಚನ ಸಪ್ತಾಹ”ಮನೆಮನೆ ಕಾರ್ಯಕ್ರಮದÀ ಅಂಗವಾಗಿ ಕುವೆಂಪುನಗರದ ಹೊಳಲು ಶ್ರೀಧರ ಅವರ ನಿವಾಸದಲ್ಲಿ “ಅಂತರಂಗ-ಬಹಿರಂಗ ಶುದ್ಧಿ” ವಿಷಯದ ಕುರಿತಾಗಿ ಪ್ರವಚನ ನೀಡಿ ಮಾತನಾಡುತ್ತಿದ್ದರು.
     ಮೇಲ್ನೋಟಕ್ಕೆ ನಾವು ಎಷ್ಟೇ ರೂಪವಂತರಾಗಿದ್ದರೂ ನಮ್ಮೊಳಗಿನ ಅಂತರಂಗದಲ್ಲಿ ಸೌಂದರ್ಯವಿಲ್ಲದಿದ್ದರೆ ಹೊರಗಿನ ರೂಪಕ್ಕೆ ಮಹತ್ವ ಸಿಗುವುದಿಲ್ಲ.ಅಂತಹವರು ಜಗತ್ತಿಗೆ ಯಾವುದೇ ಕಾಣಿಕೆ ನೀಡಲು ಸಾಧ್ಯವಾಗುವುದಿಲ್ಲ.ನಮ್ಮ ನಡೆ-ನುಡಿಗಳು ಒಂದಾಗದ ಹೊರತು ನಾವು ಸಮಾಜದ ಪ್ರೀತಿ ಗಳಿಸಲು ಸಾಧ್ಯವಾಗುವುದಿಲ್ಲ.ನಾನತ್ವ ಬೆಳೆಸಿಕೊಂಡರೆ ನಾವು ಸಮಾಜದಿಂದ ಬೇರೆಯಾಗಬೇಕಾಗುತ್ತದೆ.ಡಿವಿಜಿ ಹೇಳಿರುವಂತೆ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ತತ್ವ ಅಳವಡಿಸಿಕೊಂಡು ಸಮಾಜಮುಖಿಯಾಗಿ ಬೆಳೆದಾಗ ನಮ್ಮ ಮನದ ಬೇಗೆಗಳನ್ನು ಕಳೆಯಬಹುದು.ಅಹಮಿಕೆಗೆ ಒಳಗಾದಾಗ ಅದು ನಮ್ಮ ವ್ಯಕ್ತಿತ್ವನ್ನೂ ನಾಶಪಡಿಸುತ್ತದೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು ಎಂದು ಅವರು ತಿಳಿಸಿದರು.
 ಪ್ರವಚನ ನಂತರ ದಾಮೋದರ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
    ಈ ಕಾರ್ಯಕ್ರಮದಲ್ಲಿ ಸಂಸ್ಕøತಿ ಸಂಘಟನೆ ಅಧ್ಯಕ್ಷರಾದ ಕೆ.ಪ್ರಹ್ಲಾದರಾವ್,ಪ್ರಧಾನ ಕಾರ್ಯದರ್ಶಿ ಎಂ.ವಿ.ಧರಣೇಂದ್ರಯ್ಯ,ಬಿ.ಜಿ.ಉಮಾ,ಪ್ರಾಂಶುಪಾಲ ಚಂದ್ರಶೇಖರಮೂರ್ತಿ,ಉಪನ್ಯಾಸಕ ಪುಟ್ಟಸ್ವಾಮಿ,ಡಾ||ಕಾಂತರಾಜು,ವಕೀಲ ಎಂ.ಸಿರಾಜಗೋಪಾಲ್,ನಾಗಾನಂದ,ಸಿ.ಕೆ.ಗಂಗೇಗೌಡ,ಕೊಕ್ಕಡ ವೆಂಕಟರಮಣಭಟ್ ಮುಂತಾದವರು ಉಪಸ್ಥಿತರಿದ್ದರು.                              

No comments:

Post a Comment