Wednesday 24 September 2014

ಸೆ.25 ರಂದು ಪ್ರಶಸ್ತಿ ಪ್ರದಾನ ಸಮಾರಂಭ
ಮಂಡ್ಯ,ಸೆ.23- ಡಾ.ಎಚ್.ಡಿ.ಚೌಡಯ್ಯ ಪ್ರತಿಷ್ಠಾನದ ವತಿಯಿಂದ ಸೆಪ್ಟೆಂಬರ್ 25ರಂದು ನಗರದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‍ಮೆಂಟ್ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಖಜಾಂಚಿ ಡಾ.ರಾಮಲಿಂಗಯ್ಯ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಕಳೆದ 12 ವರ್ಷದಿಂದ ಡಾ.ಎಚ್.ಡಿ ಚೌಡಯ್ಯ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳಲ್ಲಿ ಘಣನೀಯ ಸಾಧನೆ ಮಾಡಿದವರಿಗೆ ಸನ್ಮಾನ ಮಾಡುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವು ಸಹಕಾರ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಹೇಳಿದರು.
ಸೆ.25 ರಂದು ಎಚ್.ಡಿ.ಚೌಡಯ್ಯರವರ ಹುಟ್ಟುಹಬ್ಬವಾಗಿದ್ದು, ಅವರಿಗೆ 86 ವರ್ಷಗಳು ಪೂರ್ಣಗೊಂಡು 87 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇಂತಹ ಸುಸಮಯದಲ್ಲಿ ಬೆಳಗಾವಿಯ ಅಣ್ಣಾಸಾಹೇಬ ಜೊಲ್ಲೆ ರವರಿಗೆ ಡಾ.ಎಚ್.ಡಿ.ಚೌಡಯ್ಯ ಸಹಕಾರ ಪ್ರಶಸ್ತಿ, ಶಶಿಕಲಾ ಜೊಲ್ಲೆ ರವರಿಗೆ ಶಿಕ್ಷಣ ಪ್ರಶಸ್ತಿ, ಹಾಗೂ ಕೆ.ಆರ್.ನಗರದ ಕಾ.ತ.ಚಿಕ್ಕಣ್ಣನವರಿಗೆ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತಲಿದೆ ಎಂದರು.
ಇದರೊಂದಿಗೆ ಹೊಳಲು ಸರ್ಕಾರಿ ಪ್ರೌಢಶಾಲೆ ಹಾಗೂ ವೆಂಕಟೇಶ್ವರ ವಿದ್ಯಾ ನಿಕೇತನ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಹೆಚ್ಚು ಅಂಕಗಳಿಸಿದಂತಹ ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ 1000ರೂ. ನಗದು ಬಹುಮಾನ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಗುವುದೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಡಾ.ಎಚ್.ಡಿ.ಚೌಡಯ್ಯ ಪ್ರತಿಷ್ಠಾನದ ಅಧ್ಯಕ್ಷ ಎಚ್.ಹೊನ್ನಪ್ಪ, ಹಾಗೂ ಮಾಚಿ.ಸಂಸದ ಜಿ.ಮಾದೇಗೌಡ ಇತರರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಕಂ.ಸಿಂಗ್ರಿಗೌಡ, ಕಾರ್ಯದರ್ಶಿ ಸುಬ್ಬೇಗೌಡ ಇದ್ದರು.


ಸೆ.25 ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ
ಮಂಡ್ಯ,ಸೆ.23- ಸೆಪ್ಟೆಂಬರ್ 25 ರಿಂದ ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಷಯ ತಜ್ಞರಿಂದ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಕಾರ್ಯದರ್ಶಿ ರಾಮಲಿಂಗಯ್ಯ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ 304 ಸಬ್‍ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅದಿಸೂಚನೆ ಹೊರಡಿಸಿದ್ದು, ಸೆ.25 ರಿಂದ ಎರಡು ತಿಂಗಳ ಕಾಲ ತರಬೇತಿಯನ್ನು, ಈಗಾಗಲೇ ಕಾನ್ಸ್‍ಟೇಬಲ್ ಹುದ್ದೆಗಳಿಗೆ ದೈಹಿಕ ಸಾಮಥ್ರ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಸೆ.28 ರಿಂದ 45 ದಿನಗಳ ತರಬೇತಿಯನ್ನು ನೀಡಲಾಗುವುದು ಎಂದರು.
ಅತಿ ಶೀಘ್ರದಲ್ಲಿ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಗಳಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕ ಪರೀಕ್ಷೆ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ  ತರಬೇತಿ ಪ್ರಾರಂಭಿಸಲಾಗುವುದೆಂದು ಹೇಳಿದ ಅವರು ತರಬೇತಿ ಅವಧಿಯಲ್ಲಿ ಪರೀಕ್ಷಾರ್ಥಿಗಳಿಗೆ ಮಾದರಿ ಪರೀಕ್ಷೆಗಳನ್ನು ನಡೆಸಲಾಗುವುದು, ರಾಜ್ಯದ ವಿವಿಧ ಭಾಗಗಳಿಂದ ವಿಷಯ ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉತ್ಕøಷ್ಟ ಮಟ್ಟದ ತರಬೇತಿ ನೀಡಲಾಗುವುದೆಂದು ಹೇಳಿದರು.
ಹೆಚ್ಚಿನ ಮಾಹಿತಿಗೆ ದೂರವಾಣಿ:08232-231140, ಕಾರ್ಯದರ್ಶಿ ರಾಮಲಿಂಗಯ್ಯ-9845054593, ವ್ಯವಸ್ಥಾಪಕ ಲಕ್ಷ್ಮಣ – 9902241722 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ವ್ಯವಸ್ಥಾಪಕ ಲಕ್ಷ್ಮಣ್ ಇದ್ದರು.

 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ಮುಷ್ಕರ
ಮಂಡ್ಯ,ಸೆ.23- ಬಿ.ಎಸ್.ಎನ್.ಎಲ್ ಅಧಿಕಾರೇತರ ನೌಕರರ ನ್ಯಾಯ ಸಮ್ಮತ ಹಾಗೂ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಒಂದು ದಿನದ ಧರಣಿ ಮುಷ್ಕರ ನಡೆಸಿದರು.
ನಗರದ ಬಿ.ಎಸ್.ಎನ್.ಎಲ್ ಕಛೇರಿಯ ಎದುರು ಪ್ರತಿಭಟನೆ ನಡೆಸಿದ ನೌಕರರು ದಿನಾಂಕ 27-06-2014 ರಂದು ಬಿ.ಎಸ್.ಎನ್.ಎಲ್ ಆಡಳಿತ ಮಂಡಳಿ ಮತ್ತು ಅಧಿಕಾರೇತರ ನೌಕರರ ಜಂಟಿಕ್ರಿಯಾ ಸಮಿತಿಯ ನಡುವಿನ ಸಭೆ ವಿಫಲವಾಗಿದ್ದು, ಕಂಪನಿಯು ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.
ಬಹುದಿನಗಳ ಬೇಡಿಕೆಗಳಾದ ಆರ್.ಎಂ.ಮತ್ತು ಟಿ.ಎಂ. ನೌಕರರ ಸ್ಟಾಗ್ನೇಷನ್ ನಿವಾರಣೆ , ಎಲ್ಲಾ ನೌಕರರಿಗೆ ಒಂದು ತಿಂಗಳ ವೇತನದಷ್ಟು ತಾತ್ಕಾಲಿಕ ಬೋನಸ್, ದಿನಾಂಕ 1-1-2007 ರ ಪೂರ್ವ ಮತ್ತು ನಂತರ ನಿವೃತ್ತರಾದವರಿಗೆ ವಿಳಂಬವಾಗುತ್ತಲಿರುವ ಶೇ.78.2 ರಷ್ಟು ಐ.ಡಿ.ಎ ಯನ್ನು ಮೂಲ ವೇತನದಲ್ಲಿ ಸೇರಿಸಿ ನಿವೃತ್ತಿ ವೇತನ ನೀಡುವುದು, ನೂತನ ಭಡ್ತಿ ನೀತಿಯಲ್ಲಾದ ಲೋಪದೋಷಗಳನ್ನು ಸರಿಪಡಿಸುವುದು, 2007ರ ನಂತರ ಇಲಾಖೆಗೆ ಸೇರಿದ ನೌಕರರ ವೇತನವನ್ನು ಕಡಿತ ಗೊಳಿಸುವುದನ್ನು ನಿಲ್ಲಿಸುವುದು, ಹಾಗೂ ಬಾಕಿ ಇರುವ ಸುಮಾರು 25 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಕಾಂ.ಪುಟ್ಟಸ್ವಾಮಿ, ಕಾಂ.ಕೆ.ರಾಮೇಗೌಡ, ಕಾಂ.ಜಯರಾಜ್, ಕಾಂ.ಜೆ.ಎಸ್.ಮೂರ್ತಿ ಗೋವಿಂದರಾಜು ಇತರರಿದ್ದರು.

No comments:

Post a Comment