Tuesday 30 September 2014

ಚಿನ್ನದ ಅಂಬಾರಿಗೆ 15.5 ಕೋಟಿ ರೂ ವಿಮೆ
*ಮೂರು ದಿನದ ವಿಮೆಯ ಕಂತಿನ ಹಣವಾಗಿ 93.888 ರೂ ಪಾವತಿ
ಮೈಸೂರು: ವಿಶ್ವ ಪ್ರಸಿದ್ಧ ದಸರಾದ ಕೊನೆ ದಿನ ನಡೆಯುವ ಜಂಬೂ ಸವಾರಿಯಲ್ಲಿ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಚಿನ್ನದ ಅಂಬಾರಿಗೆ ಈಗ 15.5 ಕೋಟಿ ರೂ ವಿಮೆ ಮಾಡಿಸಲಾಗಿದೆ. ಅದು ಕೇಲವ ಮೂರು ದಿನದ ಮಟ್ಟಿಗೆ.
750 ಕೆ.ಜಿ. ತೂಕವನ್ನು ಹೊಂದಿರುವ ಚಿನ್ನದ ಅಂಬಾರಿಯ ಮೊತ್ತ ಸದ್ಯದ ಮಾರುಕಟ್ಟೆಯ ದರದಲ್ಲಿ 20 ಕೋಟಿರೂಗೂ ಹೆಚ್ಚು ಮೌಲ್ಯವನ್ನು ಹೊಂದಿದೆ. ಪುರಾತನ ಪ್ರಸಿದ್ಧವಾಗಿರುವ ಈ ಚಿನ್ನದ ಅಂಬಾರಿಗೆ ಪ್ರತಿ ವರ್ಷವೂ ಜಂಬೂ ಸವಾರಿಯ ವೇಳೆಗೆ ವಿಮೆ ಮಾಡಿಸಲಾಗುತ್ತದೆ. ಕಳೆದ ವರ್ಷವೂ ಕೂಡ 10 ಕೋಟಿ ರೂ ವಿಮೆ ಮಾಡಿಸಲಾಗಿತ್ತು, ಆದರೆ ಈಗ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಅಂಬಾರಿಯ ಮೌಲ್ಯವೂ ಹೆಚ್ಚಳವಾಗಿದೆ. ಹಾಗಾಗಿ ಈ ಬಾರಿ 15.5 ಕೋಟಿ ರೂಗಳಿಗೆ ವಿಮೆ ಮಾಡಿಸಲಾಗಿದೆ. ಇಂಡಿಯಾ ಇನ್ಸೂರೆನ್ಸ್ ಕಂಪನಿಯಲ್ಲಿ ಜಿಲ್ಲಾಡಳಿತ ವಿಮೆಯನ್ನು ಮಾಡಿಸಿದ್ದು, ವಿಮೆ ಕಂತಾಗಿ ಒಟ್ಟು 93.888 ರೂಗಳನ್ನು ಪಾವತಿ ಮಾಡಿದೆ. ಈ ವಿಮೆ ಅ.2 ರಿಂದ 5 ರ ತನಕ ಜಾರಿಯಲ್ಲಿರುತ್ತದೆ.
ಈಗಾಗಲೇ ದಸರಾ ಗಜಪಡೆಗಳಿಗೆ ಹಾಗೂ ಅದರ ಮಾವುತರಿಗೆ ಜಿಲ್ಲಾಡಳಿತ ಅ.5 ರ ತನಕ ವಿಮೆಯನ್ನು ಇದೇ ಕಂಪನಿಯಲ್ಲಿ ಮಾಡಿಸಿದೆ.

No comments:

Post a Comment