Thursday 18 September 2014

7ನೇ ರಾಷ್ಟ್ರೀಯ ವಿದ್ಯಾರ್ಥಿಗಳ ಕಾರ್ಯಾಗಾರ
ಚಾಮರಾಜೇಂದ್ರ ಸರ್ಕಾರಿ  ದೃಶ್ಯಕಲಾ ಕಾಲೇಜಿನಲ್ಲಿ [ ಕಾವಾ ] ಮೈಸೂರು. 2007-2008ರ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ವಿದ್ಯಾರ್ಥಿಗಳ ಕಾರ್ಯಾಗಾರವನ್ನು ಏರ್ಪಡಿಸುತ್ತ ಬರಲಾಗಿದೆ.
2014-15 ನೇ ಶೈಕ್ಷಣಿಕ ಸಾಲಿನಲ್ಲಿ 7ನೇ ರಾಷ್ಟ್ರೀಯ ವಿದ್ಯಾರ್ಥಿಗಳ ಕಾರ್ಯಾಗಾರವನ್ನು ದಿನಾಂಕ;
13-09-2014ರಿಂದ 20-09-2014ರವರೆಗೆ ಒಟ್ಟು 8 ದಿವಸಗಳ ಕಾಲ ಹಮ್ಮಿಕೊಳ್ಳಲಾಗಿದ್ದು. ಸದರಿ ಕಾರ್ಯಾಗಾರದಲ್ಲಿ ರಾಜ್ಯ ಮತ್ತು ಹೊರರಾಜ್ಯದಿಂದ  32 ವಿದ್ಯಾರ್ಥಿಗಳೊಂದಿಗೆ ನಮ್ಮ ಸಂಸ್ಥೆಯ ಬಿ.ಎಫ್.ಎ. ವಿದ್ಯಾರ್ಥಿಗಳು ಮತ್ತು  ಎಂ.ಎಫ್.ಎ  ವಿದ್ಯಾರ್ಥಿಗಳು ಭಾಗವಹಿಸಿ ಕಲಾಕೃತಿಗಳನ್ನು ರಚಿಸಿದ್ದಾರೆ.
ದಿನಾಂಕ:14-09-2014 ರಂದು ವಿದ್ಯಾರ್ಥಿಗಳನ್ನು ಪಾರಂಪಿರಿಕ ದೇವಾಲಯ ಹಾಗೂ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಗಿತ್ತು. ಈ ಪ್ರವಾಸವು ಕಲಾವಿದ್ಯಾರ್ಥಿಗಳಿಗೆ  ಕರ್ನಾಟಕದ ಮತ್ತು ಮುಖ್ಯವಾಗಿ ಮೈಸೂರಿನ ಕಲೆ ಮತ್ತು ಸಂಸ್ಕøತಿಯ ಬಗ್ಗೆ ಸಮಗ್ರ ಮಾಹಿತಿ ಮೂಡಿಸಲು ಸಹಾಯವಾಯಿತು.
ಕಾರ್ಯಾಗಾರದ ಪ್ರಮುಖ ಉದ್ದೇಶವೆನೆಂದರೆ ವಿದ್ಯಾರ್ಥಿಗಳಿಗೆ ಪ್ರಚಲಿತ ಕಲಾ ವಿದ್ಯಮಾನಗಳ ಬಗ್ಗೆ ತಿಳುವಳಿಕೆ, ಸೃಜನಶೀಲತೆ ಹಾಗೂ ಪ್ರಸ್ತುತ ಕಲಾ ಬೆಳವಣಿಗೆಯತ್ತ ಸಂಕ್ಷಿಪ್ತ ಮಾಹಿತಿ ನೀಡಿ ವಿವಿಧ ಸಂಸ್ಥೆಗಳ ತಾಂತ್ರಿಕ ಜಾಣ್ಮೆಯನ್ನು ತಮ್ಮ ಮುಂದಿನ ಕೃತಿಗಳಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವುದಾಗಿದೆ. ಮತ್ತು ವಿದ್ಯಾರ್ಥಿಗಳ ಪರಸ್ಪರ ಒಡನಾಟದಿಂದ ಹೆಚ್ಚನ ಜ್ಞಾರ್ಜನೆ ಪಡೆಯಲು ಒಂದು ಸೂಕ್ತವೇದಿಕೆಯನ್ನು ಕಲ್ಪಿಸಲಾಗಿದೆ.
  ವಿವಿಧ ರಾಜ್ಯ ಮತ್ತು  ಹೊರ ರಾಜ್ಯದ ಕಲಾ ಶಾಲೆಗಳಿಂದ ಬೆಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ಕಾರ್ಯಗಾರಕ್ಕೆ ಪ್ರತಿ ಕಾರ್ಯಾಗಾರದಿಂದ ಕಾರ್ಯಗಾರಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿದೆ.
ಸದರಿ ಕಾರ್ಯಗಾರದಲ್ಲಿ ಶ್ರೀನಿರ್ಮಲೆಂದು ದಾಸ್, ಶಾಂತಿನಿಕೇತನ್ ಇವರು ಗ್ರಾಫೀಕ್ಸ್ ವಿಷಯದಲ್ಲಿ ಮತ್ತು
ಶ್ರೀ ಶ್ರೀನಿವಾಸ್ ಕೆ ಆರ್, ಗಾಂಧಿನಗರ್ ಗುಜರಾತ್ ಇವರು ಅನ್ವಯಕಲಾ  ವಿಷಯದಲ್ಲಿ  ಅದರಂತೆ ಶ್ರೀ, ಸುನಿಲ ರಾಜು ಮುಂಬೈ ಇವರು ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮದ ವಿಷಯದಲ್ಲಿ ಹಾಗೂ ಶ್ರೀ ರಾಮಮೂರ್ತಿ, ಬೆಂಗಳೂರು ಇವರು ಶಿಲ್ಪಕಲಾ ವಿಷಯದಲ್ಲಿನ ವಿಷಯ ತಜ್ಞಯರುಗಳಾಗಿ  ಭಾಗವಹಿಸಿ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುತ್ತಾರೆ.
ಕಾರ್ಯಾಗಾರದ ಸಮಾರೋಪ ಸಮಾರಂಭವು ಕಾವಾದ ಆರ್ಟ್‍ಗ್ಯಾಲರಿ ಕಾವಾ ಕಾಲೇಜು ಆವರಣದಲ್ಲ್ಲಿ  ದಿನಾಂಕ 20-09-2014 ರಂದು ಬೆಳಿಗ್ಗೆ 11.30 ಕ್ಕೆ ಎರ್ಪಡಿಸಲಗಿದೆ., ಶ್ರೀ ಶ್ರೀನಿವಾಸ್ ಕೆ ಆರ್, ಗಾಂಧಿನಗರ್ ಗುಜರಾತ್,      ಶ್ರೀ, ಸುನಿಲ ರಾಜು ಮುಂಬೈ ಹಾಗೂ ಶ್ರೀ ರಾಮಮೂರ್ತಿ, ಬೆಂಗಳೂರು, ಇವರುಗಳು ಮಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಿ.ಎ.ದೇಶಪಾಂಡೆ, ಡೀನ್ ಕಾವಾ ಮೈಸೂರು, ಇವರು ವಹಿಸಲಿದ್ದಾರೆ.

No comments:

Post a Comment