Saturday 20 September 2014

ಮೈಸೂರು ದಸರಾ ಮಾಹಿತಿ ಹಾಗೂ ಸಲಹಾ ಕೇಂದ್ರ ಉದ್ಘಾಟನೆ.

             ಮೈಸೂರು ದಸರಾ ಮಾಹಿತಿ ಹಾಗೂ ಸಲಹಾ ಕೇಂದ್ರ ಉದ್ಘಾಟನೆ.
   ಮೈಸೂರು, ಸೆ.20-ವಿಶ್ವವಿಖ್ಯಾತ ನಾಡಹಬ್ಬ ದಸರಾ ಬಗ್ಗೆ  ಮಾಹಿತಿ ಹಾಗೂ ಸಲಹೆಗಳನ್ನು ತಿಳಿದುಕೊಳ್ಳುವ ಸಲುವಾಗಿ  ಮೈಸೂರು ನಗರ ಪೊಲೀಸ್ ಇಲಾಖೆ ವತಿಯಿಂದ ನಗರದ  ಹೃದಯಭಾಗವಾದ  ಕೆ.ಆರ್. ವೃತ್ತ ಸೆರಿದಂತೆ ಪ್ರಮುಖ ಸ್ಥಳಗಳು ಹಾಗೂ  ಪೊಲೀಸ್ ಚೆಕ್ ಪೋಸ್ಟ್‍ಗಳಲ್ಲಿ  ದಸರಾ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ.
  ಕೆ.ಆರ್. ವೃತ್ತದಲ್ಲಿ ತೆರೆದಿರುವ ಕೇಂದ್ರವನ್ನು  ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಇಂದು ಬೆಳಿಗ್ಗೆ  ಉದ್ಘಾಟಿಸಿದರು,
  ನಂತರ ಮಾತನಾಡಿ ನಾಡಹಬ್ಬ  ದಸರಾ ಉತ್ಸವ ವೀಕ್ಷಿಸಲು  ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ ಆವರಿಗೆ  ದಸರಾ ಹಿನ್ನೆಲೆ ಹಾಗೂ ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಪರಿಚಯವಿರುವುದಿಲ್ಲ, ಪ್ರವಾಸಿಗರಿಗೆ  ಅನುಕೂಲವಾಗಲೆಂದು, ಮತ್ತು ದಸರಾ ಕಾರ್ಯಕ್ರಮದ ಸ್ಥಳಗಳನ್ನು  ಮುಂಚಿತವಾಗಿ ತಿಳಿಕೊಳ್ಳಲೆಂದು  ಈ ಅನುಕೂಲ ಕಲ್ಪಿಸಲಾಗಿದೆ  ಎಂದು ಹೇಳಿದರು.
  ಇದರ ಜೊತೆಗೆ ಸರ್ವಜನಿಕರು  ದಸರಾ ಹಬ್ಬದ ಸಂದರ್ಭದಲ್ಲಿ  ರಕ್ಷಣೆಯ ದೃಷ್ಟಿಯಿಂದ ವಹಿಸಬೇಕಾದ ಮುನ್ನೆಚ್ಚರಿಕೆಯ  ಕ್ರಮಗಳ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ ಎಂದು ವಿವರಿಸಿದರು.
  ಈ ಕೇಂದ್ರದಲ್ಲಿ  ಕಾಯ್ಕ್ರಮಕ್ಕೆ  ತಲುಪಬೇಕಾದ ಮಾರ್ಗ ಮತ್ತು ಸ್ಥಳ,  ಕಾಣೆಯಾದ ಮಕ್ಕಳ ಬಗ್ಗೆ  ದೂರು ಮತ್ತು ಮಾಹಿತಿ,ಬಸ್ ಮತ್ತು ರೈಲಿನಲ್ಲಿ ಪ್ರಯಾಣಿಸುವವರಿಗೆ  ಅವುಗಳ ವಿವರ, ತಂಗಬೇಕಾದ ಸ್ಥಳಗಳು, ಆಟೋದಲ್ಲಿ ಪ್ರಯಾಣಿಸುವಾಗ ನೋಂದಣಿ ಮಾಡಿಸುವುದು, ಆಟೋ ಪ್ರೀಪೇಯಿಡ್ ಸೌಲಭ್ಯ ಪಡೆದುಕೊಳ್ಳುವುದು, ವಾಹನಗಳ ಪಾರ್ಕಿಂಗ್ ಸೇರಿದಂತೆ ಇನ್ನೂ ಹಲವಾರು  ಮಾಹಿತಿಗಳನ್ನು ಈ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ  ಎಂದರು.
 ಈ ಸಂಧರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಎಮ.ಎ. ಸಲೀಮ್, ದಿಸಿಪಿ ಮಹದೇವಯ್ಯ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

             ದಸರಾಗೆ ಯಾರನ್ನೂ ಕಡೆಗಣಿಸಿಲ್ಲ- ಪ್ರಸಾದ್ ಸ್ಪಷ್ಟನೆ
   ಮೈಸೂರು, ಸೆ.20- ನಾಡಹಬ್ಬ ದಸರಾ  ಆಚರಣೆಗಾಗಿ  ಯಾವ ಪಕ್ಷದವರನ್ನೂ ಕಡೆಗಣಿಸಿಲ್ಲ, ಎಲ್ಲಾ ಉಪಸಮಿತಿಗಳಿಗೂ ಎಲ್ಲಾ ಪಕ್ಷದವರಿಗೂ ಅವಕಾಸ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಸ್ಪಷ್ಟಪಡಿಸಿದರು.
   ನಿನ್ನೆಯಸ್ಟೇ  ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಈಬಾರಿಯ ದಸರಾ ಕಾರ್ಯಕ್ರಮಗಳಿಗೆ  ಪ್ರತಿಪಕ್ಷದವರನ್ನು ಗಣನೆಗೆ ತೆಗೆದುಕೊಳ್ಳದೆ ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ  ಸುದ್ಧಿಗಾರರು ಸಚಿವರನ್ನು  ಪ್ರಶ್ನಿಸಿದಾಗ  ಪ್ರತಿಪಕ್ಷದ ನಾಯಕರುಗಳಲ್ಲಿ ನಗರ ಪ್ರದೇಶದ ಮೂವರಿಗೆ ಅವಕಾಶ ನೀಡುವಂತೆ  ಉನ್ನತ ಕಮಿಟಿಯಲ್ಲಿ ತೀರ್ಮಾನವಾಗಿದೆ ಅದರಂತೆ ಮೂವರಿಗೆ ಅವಕಾಶ ನೀಡಿದೆ, ಉಳಿದಂತೆ ಗ್ರಾಮೀಣ ದಸರ ನಡೆಸಲು  ಹೆಚ್.ಡಿ.ಕೋಟೆಯಲ್ಲಿ ಶಸಕ ಚಿಕ್ಕಮಾದುಗೆ  ಅವಕಾಶನೀಡಿದ್ದು, ಅವರು ಗ್ರಾಮೀಣ ದಸರಾ ಯಶಸ್ವಿಗೊಳಿಸಿದ್ದಾರೆ, ಅದರಂತೆ  ಹುಣಸೂರಿನಲ್ಲಿ ಜಿ.ಟ.ದೆವೇಗೌಡರು ಯಶಸ್ವಿಗೊಳಿಸಿದ್ದಾರೆ ಎಂದ ಸಚಿವರು ಉಪಸಮಿತಿಗಳಲ್ಲಿ ಆಪಕ್ಷಗಳ ಕಾರ್ಯಕರ್ತರಿಗೂ ಸದಸ್ಯತ್ವ ಸ್ಥಾನ ನೀಡಲಾಗಿದೆ ಯಾರನ್ನೂ  ಕಡೆಗಣಿಸಿಲ್ಲ ಅದರೆ ಕಾಂಗ್ರೆಸ್ ನವರು ಹೆಚ್ಚಿನ ಸಂಖೆಯಲ್ಲಿದ್ದಾರಷ್ಟೆ ಎಂದು ಉತ್ತರಿಸಿದರು.
 ಇದು ನಾಡಹಬ್ಬ ಸಾರ್ವಜನಿಕರಿಗಾಗಿ ನಡೆಯಲಿರುವ ಸಾರ್ವಜನಿಕ ಹಬ್ಬವಾಗಿರುವುದರಿಂದ ಜನಪ್ರತಿನಿಧಿಗಳಾದವರು  ಸ್ವತಃ ಭಾಗವಹಿಸಿ  ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಬೋಧಿಸತ್ವ ಕ್ರೆಡಿಟ್ ಕೋ.ಆಪ್ ಸೊಸೈಟಿಯಲ್ಲಿ ನಾಳೆ ಹೊಸ ಯೋಜನೆಗಳ ಉದ್ಘಾಟನೆ
ಮೈಸೂರು,ಸೆ.20- ಮೈಸೂರು ನಗರದ  ಶಾರದದೇವಿ ನಗರದಲ್ಲಿರುವ  ಬೊಧಿಸತ್ವ ಕ್ರೆಡಿಟ್ ಕೋ.ಆಪರೇಟೀವ್ ಸೊಸೈಟಿಯಲ್ಲಿ ನಾಳೆ ಹೊಸ ಯೊಜನೆಗಳ ಕಾರ್ಯಕ್ರಮ ಉದ್ಘಾಟನೆಯಾಗಲಿದೆ ಎಂದು  ಸೊಸೈಟಿಯ ಅಧ್ಯಕ್ಷ ಹೆಚ್.ಸುಬ್ಬಯ್ಯ ತಿಳಿಸಿದರು.
 ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು 1995ನೇ ಇಷವಿಯಲ್ಲಿ ಅಸ್ಥಿತ್ವಕ್ಕೆ ಬಂದ ಸೊಸೈಟಿ 3866 ಸದಸ್ಯರನ್ನು ಹೊಂದಿದ್ದು, ಇದುವರೆಗೆ  ಹಲವಾರುಮಂದಿ  ಅಧ್ಯಕ್ಷರು ಹಾಗೂ ನಿರ್ದೇಶಕರುಗಳ  ಆಡಳಿತದಲ್ಲಿ ಯಶಸ್ವಿ ಕಾರ್ಯಕ್ರಮ  ಹಮ್ಮಿಕೊಂಡು ಬಂದಿದೆ,  ಅಂತೆಯೇ ಹೊಸದಾಗಿ  ಸೊಸೈಟಿ ಸಂಪೂರ್ಣ ಹಣಕೀಕೃತ  ಶೇಖೆಯಾಗಿ ಪರಿವರ್ತನೆಯಾಗಿದೆ,  ಗ್ರಾಹಕರ ಉಳಿತಾಯ ಖಾತೆ ಯೋಜನೆ ಪ್ರಾರಂಭವಾಗಲಿದೆ,  ಯಶಸ್ವಿನಿ ಯೋಜನೆ ಜಾರಿಯಲ್ಲಿದೆ, ಇ-ಸ್ಟಾಂಪ್ ವ್ಯವಸ್ಥೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿಜಾರಿಗೆ ಬರಲಿದೆ, ವಿವಿದೊದ್ದೇಶ ಸಹಕಾರ ಸಂಘವಾಗಿ ಪರಿವರ್ತನೆಯಾಗಲಿದೆ  ಎಂದರು.

  ಈ ಕಾರ್ಯಕ್ರಮ ನಾಳೆ  ಸೊಸೈಟಿ ಆವರಣದಲ್ಲಿ ನಡೆಯಲಿದ್ದು, ಮಾಜಿಸಚಿವ  ಚಿ.ಹೆಚ್.ವಿಜಯಶಂಕರ್
ಉದ್ಘಾಟಿಸಿ ಯೋಜನೆಗಲಿಗೆ ಚಾಲನೆ ನೀಡಲಿದ್ದಾರೆ,  ಗಣಕೀಕೃತ ಶಖೆಯನ್ನು ಮೈಸೂರು ವಿವಿಯ ಕುಲಸಚಿವರದ ಬಸವರಾಜು ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.
  ಪತ್ರಿಕಾ ಘೋಷ್ಟಿಯಲ್ಲಿ  ನಿದೇರ್ಶಕರುಗಳಾದ  ಶರತ್, ಈಶ್ವರ್‍ಚಕ್ಕಡಿ, ನಿರ್ಗಮಿತ ಅಧ್ಯಕ್ಷ ಹೆಚ್.ಎಸ್.ನಾಗಪ್ಪ, ಉಪಾದ್ಯಕ್ಷ ಶವಣ್ಣ ಹಾಗೂ ಡಾ. ಮಹಾದೆವಿ  ಉಪಸ್ಥಿತರಿದ್ದರು.

27 ರಿಂದ  ಯುವ ದಸರಾ ಆರಂಭ, ಪುನಿತ್‍ರಿಂದ ಉದ್ಘಾಟನೆ
ಮೈಸೂರು,ಸೆ. 20-  ದಸರಾ ಮಹೋತ್ಸವ ಅಂಗವಾಗಿ  ಇದೆ ತಿಂಗಳ 27 ರಿಂದ ಮಹಾರಾಜಕಾಲೇಜು ಮೈಧಾನದಲ್ಲಿ ಯುವದಸರಾ  ಹಾಗೂ ರಸಪ್ರಸ್ನೆ ಕಾರ್ಯಕ್ರಮ ಎರ್ಪಡಿಸಲಾಗಿದೆ, ಯುವದಸರಾವನ್ನು ಕನ್ನಡ ಚಲನಚಿತ್ರ ನಟ ಪುನಿತ್ರಾಜ್‍ಕುಮಾರ್ ಉದ್ಘಾಟಿಸಲಿದ್ದಾರೆ  ಎಂದು  ಯುದಸರ ಉಪಸಮಿತಿಯ ಅಧ್ಯಕ್ಷ  ರಾಕೇಶ್ ಪಾಪಣ್ಣ ತಿಳಿಸಿದರು.
 ಸುದ್ಧಿಘೋಷ್ಟಿಯಲ್ಲಿ ಮಾತನಾಡುತ್ತಾ, ಸೆ. 27ರಿಂದ ಅ. 2ರವರೆಗೆ ನಡೆಯಲಿರುವ ಈ ಯುವದಸರಾ ಕಾರ್ಯಕ್ರಮದಲ್ಲಿ
      




No comments:

Post a Comment