Tuesday 2 September 2014

 ಸಂಸದ ಪ್ರತಾಪ್‍ಸಿಂಹರಿಂದ ಜನತಾದರ್ಶನ
ಮೈಸೂರು, ಸೆ.2- ಮೈಸೂರು ಮತ್ತು ಕೊಡಗು ಜಿಲ್ಲೆಗಳ ಸಂಸದ  ಪ್ರತಾಪ್‍ಸಿಂಹ ರವರು ಇಂದು ಹುಣಸೂರು ರಸ್ತೆಯಲ್ಲಿರುವ  ಜಲದರ್ಶಿನಿ ಸರ್ಕಾರಿ ಅಥಿತಿಗೃಹದಲ್ಲಿನ ತಮ್ಮ ಕಚೇರಿಯಲ್ಲಿ  ಜನತಾ ದರ್ಶನ ನಡೆಸಿ ಸಾರ್ವಜನಿಕರಿಂದ  ಅಹವಾಲುಗಳನ್ನು ಸ್ವೀಕರಿಸಿ  ಕುಂದುಕೊರತೆ  ವಿಚಾರಿಸಿದರು.
   ಸುಮಾರು ನೂರಕ್ಕೂ ಹೆಚ್ಚುಮಂದಿ  ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ  ಕೋರಿ  ಮನವಿಪತ್ರಗಳನ್ನು  ಸಂಸದರಿಗೆ ನೀಡಿದರು. ಇದರಲ್ಲಿ ಹಲವಾರು ಸಮಸ್ಯೆಗಳನ್ನು  ಸ್ಥಳದಲ್ಲೇ  ಸಂಬಂಧಪಟ್ಟ ಆಧಿಕಾರಿಗಳಿಗೆ  ದೂರವಾಣಿಕರೆ ಮಾಡಿ ತಿಳಿಸುವ ಮೂಲಕ ಬಗೆಹರಿಸಿದರು.  ಇನ್ನೂ ಕೆಲವು  ಸಮಸ್ಯೆಗಳನ್ನು  ಅರ್ಜಿದಾರರನ್ನೇ ಆಧಿಕಾರಿಗಳ ಬಳಿಗೆ  ಕಳುಹಿಸಿ ಸಮಸ್ಯೆ ಬಗೆಹರಿಸಿ ಕಳಿಸುವಂತೆ  ಮನವಿಮಾಡಿದರು.
  ವಿ.ವಿ.ಪುರಂ ವಾಸಿ ರಾಮೇಗೌಡ-ಮೀನಾಕ್ಷಿ ದಂಪತಿಗಳು ತಮ್ಮ   ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ  ಪೊಲೀಸರಿಗೆ  ದೂರು ನೀಡಿದ್ದರೂ 2 ವರ್ಷಗಳಿಂದ ಕ್ರಮ ಕೈಗೊಂಡಿಲ್ಲ ಎಂಬ ದೂರನ್ನು ಸಂಸದರಿಗೆ  ನೀಡಿದರು. ತಕ್ಷಣವೇ ಸಂಸದರು  ಡಿಸಿಪಿ ರಾಜಣ್ಣಅವರಿಗೆ  ಕರೆ ಮಾಡಿ ಮಾಹಿತಿ ಪಡೆದುಕೊಂಡರು.
  ಜನತಾ ದರ್ಶನದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ  ಪ್ರತಾಪ್‍ಸಿಂಹ
 ಯಾವುದೇ ಕಾರಣಕ್ಕೂ  ಮಂಡಕಳ್ಳಿ ವಿಮಾನ ನಿಲ್ಧಾಣದಿಂದ  ವಿಮಾನ ಹಾರಾಟ ನಿಲ್ಲಲ್ಲ ಎಂದರು.
ದಸರಾ ವೇಳೆಗೆ ಸ್ಪೈಸ್ ಜೆಟ್ ವಿಮಾನ ಹಾರಾಟ ನಿಲ್ಲುತ್ತದೆ  ಎಂಬುದು  ಬರಿ ಊಹಾ ಪೋಹವಷ್ಟೆ ಒಂದು ವಿಮಾನ  ಕಾರಣಾಂತರದಿಂದ ಹಾರಾಟವನ್ನು ನಿಲ್ಲಿಸಿದೆ  ಈ ಬಗ್ಗೆ  ವಿಮಾನಯಾನ ಖಾತೆ ರಾಜ್ಯ ಸಚಿವ ಸಿದ್ದೇಶ್ವರ್ ಜೊತೆ  ಮಾತನಾಡಿದ್ದೇನೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಸರೆಗೆ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ, ಆದ್ದರಿಂದ  ಪ್ರವಾಸೋದ್ಯಮಕ್ಕೆ  ಧಕ್ಕೆ ಆಗದಂತೆ ವಿಮಾನ ಹಾರಾಟ ನಡೆಯುತ್ತದೆ  ಎಂದು ತಿಳಿಸಿದರು.
ದಸರಾ ಸಂಧರ್ಭದಲ್ಲಿ ಬಾಡಿಗೆಗಾದರೂ ವಿಮಾನವನ್ನು ತಂದು  ಹಾರಾಟ ನಡೆಸುತ್ತೇವೆ ಎಂದ ಅವರು ಇಂದಿನ ಜನತಾ ದರ್ಶನದಲ್ಲಿ ಹಲವಾರು ದೂರುಗಳು ಕೇಳಿಬಂದಿವೆ ಎಂದು ಹೇಳಿದರು.


         ಮಹರಾಜ ಕಾಲೇಜಿಗೆ ಮೂಲಬೂತ ಸೌಕರ್ಯಗಳಿಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು, ಸೆ.2-  ಐತಿಹಾಸಿಕ ಹಿನ್ನೆಲೆ ಹೊಂದಿರುವ ಮೈಸೂರಿನ ಮಹಾರಾಜಕಾಲೇಜು  ಮೂಲಭೂತ ಸೌಕರ್ಯಗಳಿಂದ  ವಂಚಿತವಾಗಿದೆ ಎಂದು ಆರೋಪಿಸಿ ಎಐಡಿಎಸ್‍ಒ, ಎಐಡಿವೈಒ ಇಂದು  ಕ್ರಾಫರ್ಡ್ ಭವನದ ಮುಂದೆ ಪ್ರತಿಭಟನೆ ನಡೆಸಿದರು.
   ಕಾಲೇಜಿಗೆ ಕೂಡಲೇ  ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುಬೇಕು, ಕಾಲೇಜಿನ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
 ಈಕೂಡಲೇ  ಅಗತ್ಯಕ್ಕೆ  ತಕ್ಕಂತೆ  ಉಪನ್ಯಾಸಕರನ್ನು ನೇಮಕಮಾಡಬೇಕು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು, ಶೌಚಾಲಯಗಳನ್ನು ದುರಸ್ಥಿಗೊಳಿಸಬೇಕು ಎಂದು ಆಗ್ರಹಿಸಿದರು.
  ಈಸಂದರ್ಭದಲ್ಲಿ  ಸುದ್ಧಿಗಾರರೊಂದಿಗೆ ಮಾತನಾಡಿದ  ಎಐಡಿವೈಒನ ಚಂದ್ರಶೇಖರ ಮೇಟಿ ಮಾತನಾಡಿ ಮಹರಾಜ ಕಾಲೇಜಿಗೆ ತನ್ನದೇ ಇತಿಹಾಸವಿದೆ, ಇಲ್ಲಿ ವ್ಯಾಸಂಗ ಮಾಡಿದವರು ದೇಶದ ನಾನಾ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಇಂತಹ ಪ್ರತಿಷ್ಟಿತ ಕಾಲೇಜು ಇಂದು  ಅವ್ಯವಸ್ಥೆಗಳ ಆಗರವಾಗಿದೆ, ಇಲ್ಲನ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ  ವಿದ್ಯಾರ್ಥಿಗಳು ಹಲವಾರು ಭಾರಿ ದೂರು ನೀಡಿದರೂ ಸಹ ಸಮಸ್ಯೆ ಬಗೆಹರಿದಿಲ್ಲ ಎಂದು ಆರೋಪಿಸಿದರು.
 ಇನ್ನು ಒಂದು ವಾರದ ಒಳಗೆ ಸಮಸ್ಯೆ ಬಗೆಹರಿಯದಿದ್ದರೆ  ವಿಧ್ಯಾರ್ಥಿ ತಂಡ ಕ್ರಾಫಡ್ ್ ಭವನಕ್ಕೆ ಮುತ್ತಿಗೆ ಹಾಕುವುದಾಗಿ  ಎಚ್ಚರಿಸಿದರು.
  ಪ್ರತಿಭಟನೆಯಲ್ಲಿ ಸುನಿಲ್ , ಬಸವರಾಜ್, ಮಹೇಶ್ ಸೇರಿದಂತೆ  ಸಂಘಟನೆಯ ಹಲವಾರು ಮಂದಿ ಪಾಲ್ಗೊಂಡಿದ್ದರು.
ಮೈಸೂರು ದಸರಾ ಅಂಗವಾಗಿ ನೂತನ ರಾಜ್ಯಪಾಲ ವಜುಭಾಯಿ ವಾಲಾರವರನ್ನ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಆಹ್ವಾನಿಸಿದರು.

No comments:

Post a Comment