Tuesday 16 September 2014

ಮಂಡ್ಯ ಸುದ್ದಿಗಳು.

ಕೆಲಸ ಕಾಯಂಗೊಳಿಸಿ ವೇತನ ಹೆಚ್ಚಸುವಂತೆ ಒತ್ತಾಯಿಸಿ ಪ್ರತಿಭಟನೆ
ಮಂಡ್ಯ,ಸೆ.16- ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರು ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಕೆಲಸ ಖಾಯಂಗೊಳಿಸಿ ವೇತಹ ಹೆಚ್ಚಳ ಮಾಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಕಾರ್ಯಕರ್ತರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದೆರು.
ರಾಜ್ಯ ಸರ್ಕಾರವು 2007ರಲ್ಲಿ ರಾಜ್ಯದ 176 ತಾಲ್ಲೂಕುಗಳ ಪೈಕಿ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು(ಎಂಆರ್‍ಡ್ಲ್ಯು) ಮತ್ತು 5828 ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು(ವಿಆರ್‍ಡ್ಲ್ಯು) ಗೌರವ ಧನದ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದು, ಗ್ರಾಮೀಣ ಪುನರ್ವಸತಿ ಯೋಜನೆಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಹಿನ್ನೆಲೆ ಎಂಆರ್‍ಡ್ಲ್ಯು ಮತ್ತು ಯುಆರ್‍ಡ್ಲ್ಯು ಹುದ್ದೆಗಳು ಸೇರಿದಂತೆ ಇತರೆ ಅಂಗವಿಕಲರಿಗೆ ನೆರವಾಗುವ ಹುದ್ದೆಗಳ್ಳು ಖಾಯಂ ಗೊಳಿಸುವ ಬದಲಾಗಿ ತಾತ್ಕಾಲಿಕವಾಗಿ ನೇಮಕಗೊಂಡ ಎಂಆರ್‍ಡ್ಲ್ಯುಗಳಿಗೆ 4000ರೂ. ಮತ್ತು ವಿಆರ್‍ಡ್ಲ್ಯುಗಳಿಗೆ 1500ರೂ.ಗಳನ್ನು ನೀಡುತ್ತಿರುವ ಗೌರವಧನ ಅತಿ ಕಡಿಮೆಯಾಗಿದೆ. ಇದರಿಂದ ತಮ್ಮ ಕುಟುಂಬಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ, ಅನಿವಾರ್ಯವಾಗಿ ಬೇರೆ ಇತರೆ ಕೆಲಸಗಳನ್ನು ಮಾಡುವಂತಹ ಪರಿಸ್ಥಿತಿ ಇದ್ದು, ಜೀವನ ನಿರ್ವಹಿಸಲು ಕಷ್ಟವಾಗುತ್ತಲಿದೆ ಎಂದು ಅಳಲನ್ನು ತೋಡಿಕೊಂಡರು.
ಆದ್ದರಿಂದ ರಾಜ್ಯದ ಎಲ್ಲಾ ಎಂಆರ್‍ಡ್ಲ್ಯು ಮತ್ತು ವಿಆರ್‍ಡ್ಲ್ಯು ಹುದ್ದೆಗಳನ್ನು ಖಾಯಂಗೊಳಿಸಿ ವೇತನ ಹೆಚ್ಚಳ ಮಾಡಬೇಕೆಂದು ಒಕ್ಕೂಟವು ಪ್ರತಿಭಟನೆಯ ಮೂಲಕ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಅಗತ್ಯ ವಸ್ತುಗಲ ಬೆಲೆ ಏರಿಕೆಯಾಗಿರುವುದರಿಂದ ಹುದ್ದೆಗಳು ಖಾಯಂ ಆಗುವವರೆಗೂ ಶೀಘ್ರವಾಗಿ ರಾಜ್ಯದ ಎಲ್ಲಾ ಎಂಆರ್‍ಡ್ಲ್ಯು ಗಳಿಗೆ ರೂ.8000 ಮತ್ತು ವಿಆರ್‍ಡ್ಲ್ಯುಗಲಿಗೆ ರೂ. 5000 ವೇತಹ ಹೆಚ್ಚಳ ಮಾಡಬೇಕು. ಹುದ್ದೆಗಳನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಬೇಕೆಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ಕುಮಾರ್, ಮಂಜುಳಮ್ಮ, ಮರೀಗೌಡ, ಜಯಕುಮಾರ್ ಮೂರ್ತಿ, ನಾಗೇಶ್, ಆನಂದ್, ಕೃಷ್ಣ, ಶಿವಕುಮಾರ್ ಸೇರಿದಂತೆ ಇತರರಿದ್ದರು.


ಅಕ್ಕಿ ಗಿರಣಿ ಮಾಲೀಕರ ಸರ್ವಸದಸ್ಯರ ವಾರ್ಷಿಕ ಸಭೆ
ಮಂಡ್ಯ,ಸೆ.16- ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸರ್ವಸದಸ್ಯರ ವಾರ್ಷಿಕ ಸಭೆಯನ್ನು ದಿನಾಂಕ 17-09-2014ರಂದು ಬೆಳಿಗ್ಗೆ 11 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಬಿ.ರಾಮಕೃಷ್ಣ ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಜಿಲ್ಲೆಯಲ್ಲಿ ಇದೇ ಮೊದಲ ಭಾರಿಗೆ ರಾಜ್ಯ ಅಕ್ಕಿಗಿರಣಿ ಮಾಲೀಕರ ಸರ್ವಸದಸ್ಯರ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.
ಸಭೆಯಲ್ಲಿ ಅಕ್ಕಿ ಗಿರಣಿ ಮಾಲೀಕರಿಗೆ ಒದಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು, ಬೇರೆ ರಾಜ್ಯದಿಂದ ಅಕ್ಕಿ ಖರೀದಿಯನ್ನು ಮಾಡಲಾಗುತ್ತಿದ್ದು, ರಾಜ್ಯದ ಅಕ್ಕಿಗಿರಣಿ ಮಾಲೀಕರಿಗೆ ದ್ರೋಹ ಮಾಡುತ್ತಿರುವ ಬಗ್ಗೆ ಚರ್ಚಿಸಲಾಗುತ್ತದೆ.
ಹೊರ ರಾಜ್ಯದಿಂದ ಕಲ್ಲಿದ್ದಲು ಮಿಶ್ರಿತ ಅಕ್ಕಿಯನ್ನು ಖರೀದಿ ಮಾಡಲಾಗುತ್ತಿದ್ದು, ಜಿಲ್ಲೆಯ ಅಕ್ಕಿಯನ್ನು ನಿರಾಕರಿಸಿದ್ದರು, ಅದನ್ನು ಬದಲಾಯಿಸಿಕೊಡಲಾಗುವುದೆಂದು ಸರ್ಕಾರಕ್ಕೆ ತಿಳಿಸಿದ್ದೂ ಸಹ, ರಾಜ್ಯದಲ್ಲಿ ರೂ.24ಕ್ಕೆ ಅಕ್ಕಿ ದೊರೆಯುತ್ತಿದ್ದು, ರೂ.27 ನೀಡಿ ಛತ್ತೀಸ್‍ಗಡದಿಂದ ಅಕ್ಕಿ ಖರೀದಿ ಮಾಡುತ್ತಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾರ್ಯಕ್ರಮವು ಬೆಂಗಳೂರು-ಮೈಸೂರು, ಹೆಬ್ಬಾಳ ಹತ್ತಿರದ ಎಸ್.ಬಿ.ಗ್ರೀನ್ ಪ್ಯಾಲೆಸ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಶ್ರೀಗಳ ಸಾನಿಧ್ಯವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಡಿ.ಜಿ.ಶಾಂತನಗೌಡ್ರು ವಹಿಸಲಿದ್ದು, ರಾಜ್ಯದ ಎಲ್ಲಾ ಅಕ್ಕಿ ಗಿರಣಿ ಮಾಲೀಕರು ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಗೋಷ್ಠಿಯಲ್ಲಿ ಕಾರ್ಯದರ್ಶಿ ಎಲ್.ಶಿವನಂಜು, ಖಜಾಂಚಿ  ಎಂ.ಜಿ.ತಿಮ್ಮೇಗೌಡ, ಸಹಕಾರ್ಯದರ್ಶಿ ಹೆಚ್.ಸಿ.ಮಹೇಶ್ ಮತ್ತು ಪ್ರಸನ್ನ ಉಪಸ್ಥಿತರಿದ್ದರು.

No comments:

Post a Comment