Wednesday 24 September 2014

ಸೆಪ್ಟೆಂಬರ್ 27 ರಿಂದ ರೈತ ದಸರಾ
ಮೈಸೂರು, ಸೆಪ್ಟೆಂಬರ್ 24  ಮೈಸೂರು ದಸರಾ ಪ್ರಯುಕ್ತ ರೈತ ದಸರಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 27 ರಿಂದ 29ರ ವರೆಗೆ ರೈತ ದಸರಾ ಉಪ ಸಮಿತಿ ವತಿಯಿಂದ ಆಯೋಜಸಲಾಗಿದೆ.
 ಸೆಪ್ಟೆಂಬರ್ 27 ರಂದು ಬೆಳಿಗ್ಗೆ 9:30 ಗಂಟೆಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ರೈತ ದಸರಾ ಮೆರವಣಿಗೆ ಉದ್ಘಾಟನೆಗೊಂಡು, ಜೆ.ಕೆ.ಗ್ರೌಂಡ್ ಮೈದಾನಕ್ಕೆ ಮುಕ್ತಾಯಗೊಳ್ಳಲಿದೆ. ನಂತರ 11:30 ಗಂಟೆಗೆ ರೈತ ದಸರಾದ ವಸ್ತು ಪ್ರದರ್ಶನ ಹಾಗೂ 11:45ದಕ್ಕೆ ವೇದಿಕೆ ಕಾರ್ಯಕ್ರಮ ಉದ್ಘಾಟನೆಯಾಗಳಿದೆ. ಮಧ್ಯಾಹ್ನ 3 ಗಂಟೆಗೆ ರೈತರೂಡನೆ ಸಂವಾದ.
 ಸೆಪ್ಟೆಂಬರ್ 28 ರಂದು ಬೆಳಿಗ್ಗೆ 6:30 ಗಂಟೆಯಿಂದ ಸಂಜೆ 5:30ರ ವರೆಗೆ ರಾಜ್ಯ ಮಟ್ಟದ ಹಾಲು ಕರೆಯು ಸ್ಪರ್ಧೆಯನ್ನು ಜೆ.ಕೆ.ಗ್ರೌಂಡ್ ಮೈದಾನದಲ್ಲಿ ಏರ್ಪಡುಮಾಡಲಾಗಿದೆ. ಸ್ಪರ್ಧೆಯಲ್ಲಿ ಮೊದಲನೆಯ ಸ್ಥಾನ ಪಡೆದವರಿಗೆ ರೂ. 50,000, ಎರಡನೆ ರೂ. 40,000, ಮೂರನೆ 30,000 ಹಾಗೂ ನಾಲ್ಕನೆಯ ಸ್ಥಾನ ಗಳಿಸಿದವರಿಗೆ ರೂ. 20,000 ಬಹುಮಾನವಾಗಿ ನೀಡಲಾಗುವುದು.
  ಸೆಪ್ಟೆಂಬರ್ 29 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರು ತಾಲೂಕಿನ ವರುಣಾ ಗ್ರಾಮದಲ್ಲಿ ರೈತರಿಗೆ ಕೆಸರು ಗದ್ದೆ ಓಡುವ ಸ್ಪರ್ಧೆ, ಬೆಳಿಗ್ಗೆ 11:30 ಗಂಟೆಗೆ ನಗರದ ಜೆ.ಕೆ. ಗ್ರೌಂಡ್ ಮೈದಾನದಲ್ಲಿ ರೈತರಿಗೆ ಗುಂಡು ಎತ್ತುವ ಸ್ಪರ್ಧೆ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12:30 ಗಂಟೆಗೆ ಜೆ.ಕೆ. ಗ್ರೌಂಡ್ ಮೈದಾನದಲ್ಲಿ ರೈತರಿಗೆ 50 ಕೆ.ಜಿ.ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮಧ್ಯಾಹ್ನ 1 ಗಂಟೆಗೆ ರೈತ ಮಹಿಳೆಯರಿಗೆ ನೀರು ತುಂಬಿದ ಬಿಂದಿಗೆ ಹೊತ್ತು ಓಟ, ಹಗ್ಗ-ಜಗ್ಗಾಟ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪುಪ್ಷಾ ಅಮರನಾಥ್ ಅವರು ಇದ್ದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರತಿಕಾ ಗೋಷ್ಠಿಯಲ್ಲಿ ತಿಳಿಸಿದರು.
 ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಆಧ್ಯಕ್ಷರಾದ ಪುಷ್ಪಾ ಅಮರನಾಥ್ ಅವರು ರೈತ ದಸರಾ ಭಿತ್ತಿ ಚಿತ್ರವನ್ನು ಬಿಡುಗಡೆಗೊಳಿಸಿದರು. 
 ಜಂಟಿ ಕೃಷಿ ನಿರ್ದೇಶಕ ಹಾಗೂ ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷರಾದ  ಮಹಂತೇಶಪ್ಪ, ರೈತ ದಸರಾ ಉಪ ಸಮಿತಿ ಉಪಾಧ್ಯಕ್ಷರಾದ ವಸಂತಕುಮಾರ್ ತಿಮಕಾಪುರ ಹಾಗೂ ಸಮಿತಿ ಇತರೆ ಸದಸ್ಯರು ಭಾಗವಹಿಸಿದರು. 

ಸೆಪ್ಟೆಂಬರ್ 25 ರಿಂದ ಆರೋಗ್ಯ ದಸರಾ
ಮೈಸೂರು, ಸೆಪ್ಟೆಂಬರ್ 23 . ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಂಗವಾಗಿ ದಸರಾ ವ್ಯವಸ್ಥೆ ಮತ್ತು ಸ್ವಚ್ಛತೆ ಹಾಗೂ ಆರೋಗ್ಯ ಉಪಸಮಿತಿಯಿಂದ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11:30 ಗಂಟೆÉಗೆ ಮೈಸೂರು ಮಹಾನಗರಪಾಲಿಕೆ ಸಭಾಂಗಣದಲ್ಲಿ ‘ಸರ್ವರಿಗೂ ಆರೋಗ್ಯ ಪೂರ್ಣ ಜೀವನ’ ಘೋಷಣೆಯಡಿ ಆರೋಗ್ಯ ದಸರಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 
 ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ಆರೋಗ್ಯ ದಸರಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವರು. ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಎನ್.ಎಂ.ರಾಜೇಶ್ವರಿ ಸೋಮು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
 ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎ.ಬಾಲಸುಬ್ರಹ್ಮಣ್ಯ ಆರೋಗ್ಯ ಮತ್ತು ನೈರ್ಮಲ ಪ್ರಚಾರ ವಾಹಿನಿಗೆ ಚಾಲನೆ ನೀಡುವರು. ಸಾಹಿತಿಗಳು ಹಾಗೂ ಚಿಂತಕರಾದ ಪ್ರೊ: ಜಿ.ಕೆ.ಗೋವಿಂದರಾವ್, ದಸರಾ ವಿಶೇಷ ಆರೋಗ್ಯ ಸಹಾಯವಾಣಿಗೆ ಚಾಲನೆ ಮಾಡುವರು.
  ದಸರಾ ಆರೋಗ್ಯ ಸೇವಾ ಕೇಂದ್ರಗಳ ಪ್ರಾರಂಭಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ, ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂಕೆ.ಸೋಮಶೇಖರ್, ವಸ್ತು ಪ್ರರ್ದಶನ ಪ್ರಾಧಿಕಾರದ ಎದುರು ತನ್ವೀರ್ ಸೇಠ್ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿನ ಆಹಾರ ಮೇಳದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವಾಸು ಚಾಲನೆ ನೀಡಲಿದ್ದರೆ. 
ಸಮಾರಂಭದ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪಾ ಅಮರನಾಥ್, ಮೈಸೂರು-ಕೊಡಗು ಲೋಕ ಸಭಾ ಸದಸ್ಯರಾದ ಪ್ರತಾಪ ಸಿಂಹ, ಚಾಮರಾಜನಗರ ಲೋಕ ಸಭಾ ಕ್ಷೇತ್ರದ ಸದಸ್ಯರಾದ ಆರ್.ಧ್ರುವನಾರಾಯಣ, ಮಂಡ್ಯ ಲೋಕ ಸಭಾ ಕ್ಷೇತ್ರದ ಸದಸ್ಯರಾದ ಸಿ.ಎಸ್.ಪುಟ್ಟರಾಜು, ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಲೋಕೋಯೋಗಿ ಲಾಖೆ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ವೆಂಕಟೇಶ್, ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಾ.ರಾ.ಮಹೇಶ್, ಹುಣಸೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಸಿ.ಮಂಜುನಾಥ್, ಹೆಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರುಳಾದ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂಧನ್, ಮರಿತಿಬ್ಬೇಗೌಡ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್.ಧರ್ಮಸೇನ, ಮೈಸೂರು ಮಹಾನಗರ ಪಾಲೀಕೆ ಉಪ ಮಹಾ ಪೌರರಾದ ವಿ.ಶೈಲೇಂದ್ರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಲ್.ಮಾದಪ್ಪ ಮೈಸೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಜಿ.ಕುಮಾರ್, ತಾ.ಪಂ.ಉಪಾಧ್ಯಕ್ಷರಾದ ಲೋಕಮಣಿ, ದಸರಾ ವಿಶೇಷಾಧಿಕಾರಯಾದ ಸಿ.ಶಿಖಾ, ದಸರಾ ಉಪ ವಿಶೇಷಾಧಿಕಾರಿಯಾದ ಸಿ.ಜಿ.ಬೆಟಸೂರಮಠ, ಆರೋಗ್ಯ ದಸರಾ ಉಪಸಮಿತಿ ಅಧ್ಯಕ್ಷರಾದ ಟಿ.ಹೇಮಾವತಿ, ಉಪಾಧ್ಯಕ್ಷರುಗಳಾದ ಅನ್ವರ್‍ಬೇಗ್, ಎಂ.ಎಸ್.ಎಸ್.ಕುಮಾರ್, ಅಶೋಕ್ ಕುಮಾರ್, ಕಾರ್ಯಾಧ್ಯಕ್ಷರಾದ ಎಂ.ವಿ.ಸುಧಾ, ಕಾರ್ಯದರ್ಶಿಯಾದ ಡಾ. ಜಿ.ಎಂ. ವಾಮದೇವ ಹಾಗೂ ಸಮಿತಿಯ ಸದಸ್ಯರುಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ. .          

No comments:

Post a Comment