ಭಾರತಕ್ಕೆ ಭೇಟಿ ನಿಡಲಿರುವ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ
ಆಗಸ್ಟ್ 7, 2014
ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಚಕ್ ಹೇಗಲ್ ಇಂದು ಭಾರತ ಭೇಟಿಗಾಗಿ ನವದೆಹಲಿಗೆ ಆಗಮಿಸಲಿದ್ದಾರೆ. ನಾಳೆ ರಕ್ಷಣಾ ಸಚಿವ ಶ್ರೀ ಅರುಣ್ ಜೇಟ್ಲಿ ಅವರ ಜತೆಗಿನ ಭೇಟಿಯ ಬಳಿಕ ಚಕ್ ಹೇಗಲ್ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಅವರು ವಿದೇಶಾಂಗ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರನ್ನೂ ಭೇಟಿ ಮಾಡಲಿದ್ದಾರೆ.
ನಾಳೆ ಚಕ್ ಹೇಗಲ್ ನವದೆಹಲಿಯ ಅಮರ ಜವಾನ್ ಜ್ಯೋತಿ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಲಿದ್ದಾರೆ.
2022ರೊಳಗೆ ದೇಶದ ಎಲ್ಲರಿಗೂ ವಸತಿ
ಆಗಸ್ಟ್ 7, 2014
2022ರೊಳಗೆ ದೇಶದ ಎಲ್ಲರಿಗೂ ವಸತಿ ಕಲ್ಪಿಸುವ ಯೋಜನೆಯ ಕುರಿತು ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನಾ ಸಚಿವಾಲಯ ಎಲ್ಲಾ ಪಾಲುದಾರರೊಡನೆ ಸಮಾಲೋಚನೆ ನಡೆಸಲಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಕಳೆದ ಮೂರು ವರ್ಷಗಳಲ್ಲಿ 2,20,741 ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಶ್ರೀ ವೆಂಕಯ್ಯ ನಾಯ್ಡು ರಾಜ್ಯ ಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದರು.
ದೇಶದ ಶೇ 70.63 ಮನೆಗಳಿಗೆ ನಲ್ಲಿ ನೀರಿನ ಸೌಲಭ್ಯವಿದೆ. ಶೇ.20.76 ಮನೆಗಳು ಕೈಪಂಪು ಅಥವಾ ಕೊಳವೆ ಬಾವಿಗಳ ಮೂಲಕ ನೀರನ್ನು ಪಡೆದುಕೊಳ್ಳುತ್ತಿವೆ. ಇನ್ನುಳಿದ ಮನೆಗಳು ಇತರ ಮೂಲಗಳಿಂದ ನೀರನ್ನು ಪಡೆಯುತ್ತಿವೆ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದರು.
ಅಂಗದಾನದ ಕುರಿತ ನೂತನ ಯೋಜನೆ
ಆಗಸ್ಟ್ 7, 2014
ಅಂಗದಾನಿಗಳಿಂದ ವೈಜ್ಞಾನಿಕವಾಗಿ ಅಂಗಾಂಗಗಳನ್ನು ಸಂಗ್ರಹಿಸಿ ಅದನ್ನು ಸರಿಯಾದ ಸಮಯಕ್ಕೆ ಅತ್ಯಲ್ಪ ದರದಲ್ಲಿ ಅಗತ್ಯವಿರುವ ರೋಗಿಗಳಿಗೆ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಸರ್ಕಾರ ಪ್ರಾರಂಭಿಸಿದೆ. ಈ ನಿಟ್ಟಿನಲ್ಲಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಮುಂದಿನ 18 ತಿಂಗಳೊಳಗೆ ‘ನ್ಯಾಷನಲ್ ಆರ್ಗನ್ ಆಂಡ್ ಟಿಷ್ಯು ಟ್ರಾನ್ಸ್‍ಪ್ಲಾಂಟೇಶನ್ ಆರ್ಗನೈಸೇಶನ್” (ರಾಷ್ಟ್ರೀಯ ಅಂಗಾಂಗ ಮತ್ತು ಜೀವಕೋಶ ಕಸಿ ಸಂಸ್ಥೆ) ಪ್ರಾರಂಭಿಸಲಾಗುತ್ತಿದೆ. ಈ ಸಂಸ್ಥೆಯು ದೇಶದ 24 ಗುರುತಿಸಲ್ಪಟ್ಟಿರುವ ಅಂಗಾಂಗ ಕಸಿ ಕೇಂದ್ರಗಳ ಜತೆ ಕಂಪ್ಯೂಟರೀಕೃತ ಸಂಪರ್ಕದಲ್ಲಿರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ನಿನ್ನೆ ನವದೆಹಲಿಯಲ್ಲಿ ಹೇಳಿದರು.

No comments:
Post a Comment