ಕೆ.ಆರ್.ಪೇಟೆ,ಆ.25,(ಶ್ರೀನಿವಾಸ್)- ತಾಲೂಕಿನ ಅರೆಬೊಪ್ಪನಹಳ್ಳಿ ಗ್ರಾಮದ ಬಳಿಯ ಮನೆಯಲ್ಲಿ 17ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದರೆಂದು ಬಾಲಕಿಯು ನೀಡಿದ ದೂರಿನ ಮೇರೆಗೆ ಮನೆಯ ಮಾಲೀಕರಾದ ಸರಸ್ವತಿ(45) ಮತ್ತು ಈಕೆಯ ಪುತ್ರಿ ಗಾಯಿತ್ತಿ(32) ಅವರನ್ನು ಕೆ.ಆರ್.ಪೇಟೆ ಪಟ್ಟಣ ಪೋಲೀಸರು ಇಂದು ಬಂಧಿಸಿದ್ದಾರೆ.
ಕಳೆದ ಹಲವಾರು ದಿನಗಳಿಂದ ಬಂಧಿತರಿಗೆ ಸೇರಿದ ಜಮೀನಿನ ಬಳಿ ಇರುವ ಮನೆದಲ್ಲಿ ಬಂಧಿಯಾಗಿದ್ದ ಬಾಲಕಿಯನ್ನು ಮಂಡ್ಯದ ಬೆಳಕು ಆಶ್ರಯ ಸೇವಾ ಸಂಸ್ಥೆಯು ನೆನ್ನೆ ರಕ್ಷಣೆ ಮಾಡಿ ಮಂಡ್ಯದ ಬಾಲ ಮಂದಿರದ ಆಶ್ರಯಕ್ಕೆ ಒಪ್ಪಿಸಿತ್ತು. ಈ ಪ್ರಕರಣದ ಆರೋಪಿಗಳನ್ನು ಡಿವೈಎಸ್‍ಪಿ ಸವಿತಾ ಹೂಗಾರ್ ಮತ್ತು ಸರ್ಕಲ್ ಇನ್ಸ್‍ಪೆಕ್ಟರ್ ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ಇಂದು ಕೆ.ಆರ್.ಪೇಟೆ ಪೋಲೀಸರು ಸರಸ್ವತಿ ಮತ್ತು ಗಾಯಿತ್ರಿ ಅವರನ್ನು ಬಂಧಿಸಿದ್ದು, ಬಾಲಕಿಯನ್ನು ವೇಶ್ಯಾಗೃಹಕ್ಕೆ ಬಿಟ್ಟಿದ್ದನು ಎನ್ನಲಾದ ಆಟೋಚಾಲಕ ಪ್ರೇಮ್(30) ಎಂಬ ಆರೋಪಿಯ ಬಂಧನಕ್ಕೆ ವ್ಯಾಪಕ ಬಲೆ ಬೀಸಲಾಗಿದೆ ಎಂದು ಸಬ್‍ಇನ್ಸ್‍ಪೆಕ್ಟರ್ ಎಂ.ಶಿವಕುಮಾರ್ ತಿಳಿಸಿದ್ದಾರೆ.

No comments:
Post a Comment