Saturday, 30 August 2014

ಮೈಸೂರು-ಮೈಸೂರು ಸಿಸಿಬಿ ಪೊಲೀಸರ ಸಾಧನೆ; ನಾಲ್ವರು ದೇವಸ್ಥಾನ ಕಳ್ಳರ ಬಂಧನ.

ಮೈಸೂರು ಸಿಸಿಬಿ ಪೊಲೀಸರ ಸಾಧನೆ; ನಾಲ್ವರು ದೇವಸ್ಥಾನ ಕಳ್ಳರ ಬಂಧನ
ಮೈಸೂರು, ಆ.30-  ಮೈಸೂರು ಸಿಸಿಬಿ ಪೊಲೀಸರು  ಸಡೆಸಿದ  ಪತ್ತೆ ಕಾರ್ಯಾಚರಣೆಯಲ್ಲಿ  4 ಮಂದಿ  ದೇವಸ್ಥಾನ ಕನ್ನ ಕಳ್ಳರನ್ನು ಬಂಧಿಸಿ  ಅವರಿಂದ  ಒಟ್ಟು 5, 10, 000 ರೂ. ಬೆಲೆಬಾಳುವ  ಚಿನ್ನ, ಬೆಳ್ಳಿ, ಮತ್ತು ಹಿತ್ತಾಳೆ  ಪದಾರ್ಥಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದು  ನಗರ ಪೊಲೀಸ್ ಆಯುಕ್ತ ಎಂ.ಎ. ಸಲೀಂ ತಿಳಿಸಿದರು.
 ಇಂದು ಸುದ್ಧಿಘೋಷ್ಟಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ  ಮೈಸೂರು ನಗರದ  ದೇವಸ್ಥಾನಗಳಲ್ಲಿ  ಕಳ್ಳತನ  ಪ್ರಕರಣಗಳು ವರದಿಯಾಗಿದ್ದವು.    ಅಪರಾಧ ಪತ್ತೆಗೆ ಅಪರಾಧ ವಿಭಾಗದ  ಡಿ.ಸಿ.ಪಿ.  ಎಂ.ಎಂ. ಮಹದೇವಯ್ಯ  ಮಾರ್ಗದರ್ಶನದಲ್ಲಿ   ಸಿಸಿಬಿ ಘಟಕದ  ಆಧಿಕಾರಿ ಮತ್ತು  ಸಿಬ್ಬಂಧಿಗಳ ತಂಡವನ್ನು  ರಚಿಸಿ ಆರೋಪಿಗಳ ಪತ್ತೆಗೆ  ನಿರ್ದೇಶನ ನೀಡಲಾಗಿತ್ತು  ಅದರಂತೆ  ಪೊಲೀಸರು ಆಪರಾಧಿಗಳನ್ನು  ಪತ್ತೆಹಚ್ಚಿ  ಪ್ರಕರನ ಭೇದಿಸಿದ್ದಾರೆ ಎಂದು  ಎಂದು ಹೇಳಿದರು.
 ಬಂಧಿತರನ್ನು ಲಕ್ಷ್ಮೀಪುರಂ ವಾಸಿಗಳಾದ  ಕೃಷ್ಣ (34),  ಕಬ್ಬಾಳು (22), ಅರ್ಜುನ, (29), ಬನ್ನಿಮಂಟಪ ವಾಸಿ ಮಯೂರ(28)  ಎಂದು ಹೇಳಲಾಗಿದ್ದು,  ಇವರುಗಳು ಮೈಸೂರಿನ ವಿದ್ಯಾರಣ್ಯಪುರಂನ  ವಿಠಲಧಾಮ, ಬಿಇಎಂಎಲ್ ಲೇಔಟ್‍ನ ರಾಜರಾಜೇಶ್ವರಿ ದೇವಸ್ಥಾನ,  ನಜರ್‍ಬಾದ್‍ನ  ಕಾಳಿಕಾಂಬ ದೆವಸ್ಥಾನ,  ಯರಗನ ಹಳ್ಳಿಯ  ವಿನಾಯಕ ದೇವಸ್ಥಾನ,  ಜೆಸಿ ಲೇಒಔಟ್ನ   ಚಾಂಮುಂಡೇಶ್ವರಿ  ದೇವಸ್ಥಾನ, ಶ್ರೀರಾಂಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ  ವಿಜಯನಗರದ ವಿನಾಯಕ ದೇವಸ್ಥಾನ ಗಳಲ್ಲಿ  ರಾತ್ರಿವೇಳೆ ಕಳ್ಳತನ  ಮಾಡಿರುವುದಾಗಿ ಒಪ್ಪಿಕೊಂಡರುತ್ತಾರೆ ಎಂದು  ವಿವರಿಸಿದರು.
  ಇವರುಗಲಿಂದ  ದೇವಸ್ಥಾನ ಕಳ್ಳತನ ಪ್ರಕರಣಕ್ಕೆ  ಸಂಬಂಧಿಸಿದಂತೆ ರೂ. 70,000 ಮೌಲ್ಯದ 28 ಗ್ರಾಂ ತೂಕದ 14 ಚಿನ್ನದ ತಾಳಿಗಳು,  ರೂ. 4,05,000 ಮೌಲ್ಯದ   9.60 ಕೆಜಿ. ಬೆಳ್ಳಿ ಪದಾರ್ಥಗಳು, ರೂ. 20, 000 ಬೆಲೆ ಬಾಳುವ  ಹಿತ್ತಾಳೆ ಮತ್ತು  ಪೂಜಾ ತಟ್ಟೆ,  ಆಗು ಸುಮಾರು 15,000 ರೂ. ಬೆಲೆಯ ದೇವಸ್ಥಾನದ ಹುಂಡಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಮೈಸೂರು ನಗರದಲ್ಲಿ  ಒಟ್ಟು 8 ಪ್ರಕರನಗಳು  ಪತ್ತೆಯಾಗಿದ್ದು,   ನಜರ್‍ಬಾದ್ನಲ್ಲಿ 3,  ಸರಸ್ವತಿಪುರಂನಲ್ಲಿ 2,  ವಿದ್ಯಾರಣ್ಯಪುರಂನಲ್ಲಿ 1,  ಕುವೆಂಪುನಗರದಲ್ಲಿ 1, ವಿಜಯನಗರದಲ್ಲಿ 1, ಪ್ರಕರನ ದಾಖಲಾಗಿದೆ  ಎಂದು  ವಿವರಿಸಿದರು.
 ಇದಲ್ಲದೆ  ಜಯಲಕ್ಷ್ಮೀಪುರಂ ಮನೆಯಲ್ಲಿ   ನಡೆದಿದ್ದ ಕಳ್ಳತನ ಬೇಧಿಸಿ,  ಒಟ್ಟು  2,75,000 ರೂ ಮೌಲ್ಯದ  ಚಿನ್ನಾಭರಣ ಮತ್ತು ನಗದನ್ನು  ವಶಪಡಿಸಿಕೊಳ್ಳಲಾಗಿದೆ,
ವಿಜಯನಗರ ಪೊಲೀಸರು ಬೇಧಿಸಿದ ಪ್ರಕರನದಲ್ಲಿ  ಇಬ್ಬರನ್ನು ಬಂಧಿಸಿ ಆವರಿಂದ  40,000 ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ, ವಿಜಯನ್ರ ಪೊಲೀಸರು ನಡೆಸಿದ ಪ್ರಕರಣದಲ್ಲಿ 36,000 ರೂ ಬೆಲೆಯ  ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ, ಕುವೆಂಪುನಗರ  ಪೊಲೀಸರು ನಡೆಸಿದ ಪತ್ತೆ ಕಾರ್ಯದಲ್ಲಿ  3 ಜನರನ್ನು ಬಂಧಿಸಿ ನಕಲಿ ರೈಸ್ ಪುಲ್ಲಿಮಗ್ ಮಾಡುತ್ತಿದ್ದ ಆರೋಪದ ಮೇಲೆ  ದಸ್ತಗಿರಿ ಮಾಡಲಾಗಿದೆ  ಎಂದ ಆವರು,  ಒಟ್ಟು 12 ಪ್ರಕರಣಗಳಲ್ಲಿ  8 ಲಕ್ಷದ 61 ಸವಿರ  ರೂ. ಬಲೆಬಾಳುವ ಚಿನ್ನಾಭರಣಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದು  ತಿಳಿಸಿದರು. 

No comments:

Post a Comment