Saturday, 30 August 2014

ಮಳವಳ್ಳಿ-ಕೆ.ಎಂ.ದೊಡ್ಡಿ ಸುದ್ದಿಗಳು.

ಮಂಡ್ಯ: ಕ್ರೀಡೆ ಅತಿ ಮುಖ್ಯವಾದುದು. ವಿದ್ಯೆಯಷ್ಟೇ ಕ್ರೀಡೆಗೂ ಸಮಾನತೆಯಿಂದ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದು ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ವಿಜಯಾನಂದ ತಿಳಿಸಿದರು.
ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಬಿಇಓ ಕಚೇರಿ, ತಾಲೂಕು ದೈಹಿಕ ಶಿಕ್ಷಕರ ಸಂಘ ಇವರ ವತಿಯಿಂದ ನಡೆದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಇಂದು ಕ್ರೀಡೆಗೆ ಅನೇಕ ಸೌಲತ್ತುಗಳನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿಯಿಂದ ಪಾಲ್ಗೊಂಡು ವಿದ್ಯಾಭ್ಯಾಸದಷ್ಟೇ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಿ ಭಾಗವಹಿಸಬೇಕು ಎಂದರು.
ಕ್ರೀಡೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಪ್ರತಿಯೊಬ್ಬರ ವಿದ್ಯಾರ್ಥಿಗಳು ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮುವ ಮೂಲಕ ಜಿಲ್ಲೆಯನ್ನು ರಾಷ್ಟ್ರ ಮತ್ತು ಅಂತರ ರಾಷ್ಟ್ರ ಮಟ್ಟದಲ್ಲಿ ಬೆಳಗಿಸುವಂತೆ ಕರೆ ನೀಡಿದರು.
ಜಿ.ಪಂ. ಅಧ್ಯಕ್ಷೆ ಮಂಜುಳಾ ಪರಮೇಶ್ ಧ್ವಜಾರೋಹಣ ನೆರವೇರಿಸಿದರು. ಜಿ.ಪಂ. ಸದಸ್ಯೆ ಚಂದ್ರಕಲಾ ನಂಜುಂಡಾಚಾರ್ ಕ್ರೀಡಾಜ್ಯೋತಿ ಸ್ವೀಕರಿಸಿದರು. ತಾ.ಪಂ. ಅಧ್ಯಕ್ಷ ಟಿ.ಸಿ. ಶಂಕರೇಗೌಡ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಎಂ.ಡಿ. ಶಿವಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹದೇವ, ಕೋದಂಡರಾಮು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ನಾಗೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ. ಶಿವಲಿಂಗಯ್ಯ, ಹನುಮಶೆಟ್ಟಿ, ನಾರಾಯಣಗೌಡ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.




ಮಳವಳ್ಳಿ- ರೈತರ ಅಕ್ರೋಶ-ಕಾವೇರಿ ನಿಗಮಕ್ಕೆ ಮುತ್ತಿಗೆ-ಪ್ರತಿಭಟನೆ
* ಜಲಪಾತೋತ್ಸವಕ್ಕೆ ಕಪ್ಪು ಬಾವುಟ ಪ್ರದರ್ಶನ-ಎಚ್ಚರಿಕೆ ನೀಡಿದ ರೈತರು
ಮಳವಳ್ಳಿ.ವಿಶ್ವೇಶ್ವರಯ್ಯ ನಾಲೆಯ ವ್ಯಾಪ್ತಿಯಲ್ಲಿರುವ 6 ರಿಂದ 14 ತೂಬಿನ ದುಗ್ಗನಹಳ್ಳಿ ಮತ್ತು ಹುಸ್ಕೂರು ನಾಲೆಗಳಿಗೆ ನೀರು ಬಿಟ್ಟಿಲ್ಲದಿರುವುದರ ಬಗ್ಗೆ ಅಚ್ಚುಕಟ್ಟು ಪ್ರದೇಶದ ರೈತರು ಕಾಗೇಪುರದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಛೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ಜರುಗಿದೆ.
ಈ ಬಾಗದ ಕೆರೆ-ಕಟ್ಟೆಗಳಿಗೆ ನೀರು ಬಿಟ್ಟಿಲ್ಲ,ನಾಟಿಗೆ ಪೈರು ಬಂದಿವೆ.ಈಗಾಗಲೇ ನೀರು ಬಿಡುವುದು ತಡವಾಗಿದೆ ಇನ್ನು ನೀರು ಬಿಟ್ಟಿಲ್ಲ,ಅಧಿಕಾರಿಗಳ ಕರ್ತವ್ಯ ಲೋಪದಿಂದ ರೈತರು ಸಂಕಷ್ಟದಲ್ಲಿ ಮುಳುಗಿದ್ದು,ಈ ಬಾಗಕ್ಕೆ ನೀರು ಬಿಡುವವರೆಗೂ ನಿರಂತರ ಹೋರಾಟ ಮಾಡುವುದಾಗಿ ರೈತರೆಲ್ಲರೂ ಅಲ್ಲೆ ಆಡುಗೆ ಮಾಡಿಕೊಂಡು ಪ್ರತಿಭಟನೆ ನಡೆಸಿದ ನೂರಾರು ರೈತರು ನೀರು ಬಿಡದಿದ್ದಲ್ಲಿ ಜಲಪಾತೋತ್ಸವಕ್ಕೆ ಆಡ್ಡಿ ಮಾಡುವುಲ್ಲದೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಎಚ್ಚರಿಕೆ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದ್ದಾರೆ.
ನಿಢಘಟ್ಟ ನಾಲಾ ವ್ಯಾಪ್ತಿಯ 6 ರಿಂದ 14ರ ಎಲ್ಲಾ ತೂಬುಗಳಿನ ವ್ಯಾಪ್ತಿ ಅಚ್ಚುಕಟ್ಟು ಪ್ರದೇಶಕ್ಕೆ ಕೂಡಲೇ ನೀರು ಬಿಡಬೇಕು,2 ಬಾರಿ ನೀರು ಬಿಟ್ಟು ಕೊನೆಯ ಬಾಗದ ರೈತರ ಭೂಮಿಗೆ ಮತ್ತು ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ವಿಪಲವಾಗಿರುವ ಅಧಿಕಾರಿಗಳಿಗೆ ವಿರುದ್ದ ಕ್ರಮ ಕೈಗೊಳ್ಳಬೇಕು,ತಡವಾಗಿರುವುದರಿಂದ ಅಗರಿಉವ ನಷ್ಠಕ್ಕೆ ಪರಿಹಾರ ನೀಡಬೇಕು, ಕಟ್ಟು ನೀರಿನ ಪದ್ದತಿಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು,ನಾಟಿ ಅಗುವವರೆಗೆ ನಿರಂತರವಾಗಿ ನೀರು ಬಿಡಬೇಕು,ನಾಲೆಗಳಿಗೆ ಊಳು ತೆಗೆಯುವ ಕೆಲಸವನ್ನು ಅಯಾ ವ್ಯಾಪ್ತಿಯ ರೈತರಿಗೆ ನೀಡಿ ಮೀಸಲಿರುವ ಹಣವನ್ನು ರೈತರಿಗೆ ನೀಡಬೇಕು,ಸಮಸ್ಯೆ ಉಲ್ಬಣಿಸದಂತೆ ಸಮಿತಿ ರಚಿಸಿ ತಿಂಗಳಿಗೊಮ್ಮೆ ರೈತತರ ಸಭೆ ನಡೆಸಿ ರೈತರ ನೆರವಿಗೆ ಮುಂದಾಗಬೇಕೆಂದು ಅವರು ಈ ಸಂದರ್ಬದಲ್ಲಿ ಒತತಾಯಿಸಿದರು.
ರೈತ ಮುಖಂಡ ಸಿದ್ದರಾಜು ಮಾತನಾಡಿ 25 ಕೀ.ಮೀ.ದೂರದಲ್ಲಿರುವ ಹೆಬ್ಬಕವಾಡಿ ನಾಲೆಗೆ  ನೀರು ಬಿಟ್ಟು ಕೇವಲ 15 ಕೀ.ಮೀ. ವ್ಯಾಪ್ತಿಯ ನಮಗೆ ನೀರು ಏಕೆ ಬಿಟ್ಟಿಲ್ಲ ಎನ್ನುವುದು ಪ್ರಶ್ನೆಯಾಗಿದೆ.ನಮ್ಮ ಸಂಕಷ್ಠವನ್ನು ದಯವಿಟ್ಟು ಅರ್ತಮಾಡಕೊಳ್ಳಿ,ತೊಂದರೆ ಕೊಡಬೇಡಿ ,ಈಗಾಗಲೇ ಸಂಕಷ್ಠದಲ್ಲಿದ್ದವೆ.ಕೂಡಲೇ ನೀರು ಬಿಟ್ಟು ನಮ್ಮನ್ನು
ಉಳಿಸುವಂತೆ ಅಗಮಿಸಿದ ಕಾರ್ಯಪಾಲಕ ಇಂಜಿನಿಯರ್ ಮಲ್ಲಿಕಾರ್ಜುನವರಿಗೆ ಮನವಿ ಮಾಡಿದರು.
ಸ್ಥಳಕ್ಕಾಗಮಿಸಿದ ಇಇ ಮಲ್ಲಿಕಾರ್ಜುನಯ್ಯ ನಮಗೆ ನೀಡಿರುವ ನೀರಿನಲ್ಲಿ ಹಂತ-ಹಂತವಾಗಿ ನೀರು ಬಿಡುತ್ತಿದ್ದವೆ.ಕೆಲವೊಂದು ತಾಂತ್ರಿಕ ಕಾರಣದಿಂದ ಈ ಸಮಸ್ಯೆ ಎದುರಾಗಿದ್ದು,ಕೂಡಲೇ ನೀರು ಬಿಡಲು ಕ್ರಮವಹಿಸುತ್ತೆನೆಂದರೂ ಸಹ ರೈತರು ಸಮಸ್ಯೆ ಬಗೆಹರಿಯುವವರೆಗೂ ಪ್ರತಿಭಟನೆ ನಡೆಸುವುದಾಗಿ ಹೋರಾಟ ಮುಂದುವರೆಸಿದ್ದಾರೆ.
ಪ್ರತಿಭಟನೆಯಲಿ ್ಲಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು,ಕಾರ್ಯದರ್ಶಿ ಕೆ.ಬಸವರಾಜು,ಆನಂದ್,ಗ್ರಾ.ಪಂ.ಅಧ್ಯಕ್ಷ ಕೆಂಪರಾಜು,ಮುಖಂಡರಾದ ಲಿಂಗರಾಜು,ವಸಂತಕುಮಾರ್,ಕೃಷ್ಣಅರಸು,ಸಿದ್ದರಾಜು,ಚಿನ್ನ,ಶಿವಮಲ್ಲಯ್ಯ,ಅಂಜನೇಯ,ಬೋರೆಗೌಡ,ವಿಶ್ವಸ್,ಮಾಸ್ತಿ,ನಂಜುಂಡಯ್ಯ,ಸವಕಯ್ಯ,ಸರೋಜಮ್ಮ,ಗುರುಪ್ರಸಾದ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದಾರೆ.ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಸಬ್ ಇನ್ಸೆಪೆಕ್ಟರ್ ಅಶೋಕ್ ಸ್ಥಳದಲ್ಲೆ ಮೊಕ್ಕಂ ಹೂಡಿದ್ದಾರೆ.
ಚಿತ್ರ-30ಎಂಎಲ್‍ವಿ1
ಮಳವಳ್ಳಿ ತಾಲೂಕಿನ ಕಾಗೇಪುರದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಛೇರಿಗೆ ಮುತ್ತಿಗೆ ಹಾಕಿರುವ ನಿಢಘಟ್ಟ ವ್ಯಾಪ್ತಿಯ 36 ರಿಂದ 14 ರವರೆಗಿನ ತೂಬುಗಳ ಅಚ್ಚುಕಟ್ಟು ಪ್ರದೇಶದ ರೈತರು ನೀರು ಬಿಡುವಂತೆ ಅಗ್ರಹಿಸಿ ಪ್ರೆತಿಭಟನೆಯಲ್ಲಿ ತೊಡಗಿರುವುದು.

ಫೋಟೋ30ಬಿಟಿಜಿ1- ಭಾರತೀನಗರ ಸಮೀಪದ ಹಾಗಲಹಳ್ಳಿ ಹಮ್ಮಿಕೊಂಡಿರುವ ಯೋಗಶೀಬಿರವನ್ನು ಮಾಜಿ ಸೈನಿಕ ರಾಜಣ್ಣ ಉದ್ಘಾಟಿಸಿದರು.

   ಭಾರತೀನಗರ.ಆ.30- ಗ್ರಾಮೀಣ ಜನತೆ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮತ್ತು ರೋಗವನ್ನು ನಿಯಂತ್ರಿಸಲು ಯೋಗಾಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕೆಂದು ಯೋಗಗುರು ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.
  ಇಲ್ಲಿಗೆ ಸಮೀಪದ ಎಸ್.ಐ.ಹಾಗಲಹಳ್ಳಿಯಲ್ಲಿ ಪತಾಂಜಲಿ ಯೋಗ್ರಾಶ್ರಮ ಮಳವಳ್ಳಿ ವತಿಯಿಂದ ಹಮ್ಮಿಕೊಳ್ಳಲಾಗಿರುವ ಯೋಗಶಿಬಿರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೋಗ ಇಲ್ಲದ ಮನುಷ್ಯನನ್ನು ಕಾಣದಂತಾಗಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ಸಮಸ್ಯೆಯಲ್ಲಿ ಬದುಕುತ್ತಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಯೋಗ ಒಂದೇ ಮದ್ದಾಗಿದೆ ಎಂದರು.
   ಈ ದೇಹ ಮಲೀನತೆಯ ಬುಟ್ಟಿ. ರೋಗಗಳ ಗೂಡು, ಮೂಳೆಗಳ ಅಂದರ, ರಕ್ತಮಾಂಸಗಳಿಂದ ಕೂಡಿದ್ದು ಸತ್ತು ಸುಣ್ಣವಾಗಿ ಕೊಳೆತು ನಾರುವ ಈ ಶರೀರಕ್ಕೆ ಕೆಲವು ದಿನವಾದರೂ ಶುದ್ದವಾಗಿ ಇಟ್ಟುಕೊಳ್ಳಲು ಯೋಗ ಸಹಾಯಕವಾಗಿದೆ ಎಂದರು.
  ಆಯಸ್ಸು ವಯಸ್ಸು ಯೌವನ ಪ್ರತಿದಿನವೂ ಕಳೆಯುತ್ತಿರುತ್ತದೆ. ಕಾಲವು ಅಮೌಲ್ಯವಾದದ್ದು, ಮೃತ್ಯ ಸಧಾ ಕಾದಿರುತ್ತದೆ. ಕಳೆದ ಕಾಲವು ಮತ್ತೆ ಬರುವುದಿಲ್ಲ. ಆದಷ್ಟು ಬೇಗ-ಬೇಗ ಯೋಗ, ಪ್ರಾಣಯಾಮ ಸೇವೆಯನ್ನ ಸಂಪಾದಿಸಿಕೊಳ್ಳಿ ಎಂದು ಕರೆ ನೀಡಿದರು.
    ಮಾಜಿ ಸೈನಿಕ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನತೆ ತಮ್ಮ ಆರೋಗ್ಯದ ಮೇಲೆ ನಿಗ ವಹಿಸದ ಪ್ರಸ್ತುತ ಸಂದರ್ಭದಲ್ಲಿ ಯೋಗಗುರು ಮಲ್ಲಿಕಾರ್ಜುನಸ್ವಾಮಿಯವರು ಗ್ರಾಮೀಣ ಪ್ರದೇಶದಲ್ಲಿ ನಿರಂತರ ಯೋಗಶಿಬಿರವನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಶಿವಲಿಂಗೇಗೌಡ, ಎಂ.ಪಿ.ಸಿ.ಎಸ್ ಅಧ್ಯಕ್ಷ ರಾಮಣ್ಣ, ಬಿದರಹಳ್ಳಿ ಬಿ.ಎಚ್.ಹನುಮೇಗೌಡ, ಎಸ್.ಡಿ.ಎಂ.ಸಿ.ಅಧ್ಯಕ್ಷ ನಿಂಗೇಗೌಡ, ಎಚ್.ಸಿ.ಪ್ರಕಾಶ್, ಜನನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜಗದೀಶ್, ಕರೀಗೌಡ, ಬಸವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
==========================

 
 ಭಾರತೀನಗರ.ಆ.30- ಅಂಗಡಿಗಳ ಪರಾವನಗಿ ಪಡೆಯಲು ಶುಲ್ಕ ನಿಗಧಿ ಪಡಿಸಿರುವ ವಿಚಾರವಾಗಿ ಗ್ರಾ.ಪಂ ಮತ್ತು ವರ್ತಕರ ಸಂಘದ ನಡುವೆ ಉಂಟಾಗಿದ್ದ ಸಮಸ್ಯೆಯನ್ನು ಪೊಲೀಸ್ ಇಲಾಖೆ ಮಧ್ಯಸ್ಥಿಕೆ ವಹಿಸಿ ಬಗೆಹರಿಸಿದೆ.
    ಇಲ್ಲಿನ ರಾಜೀವ್‍ಗಾಂಧಿ ಸೇವಾಕೇಂದ್ರದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಗೋಪಾಲ್‍ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವರ್ತಕರು ಮತ್ತು ಗ್ರಾ.ಪಂ ನಡುವೆ ಉಂಟಾಗಿದ್ದ ಗೊಂದಲಕ್ಕೆ ತೆರೆಬಿದ್ದಿದೆ.
      ಅಂಗಡಿಗಳಿಗೆ  ಲೈಸನ್ಸ್ ಪಡೆಯಲು ಗ್ರಾ.ಪಂ ಹೆಚ್ಚು ಶುಲ್ಕವನ್ನು ವಿಧಿಸಲಾಗುತ್ತಿದೆ ಎಂದು ವಿರೋಧಿಸಿ ವರ್ತಕರ ಸಂಘವು ಪ್ರತಿಭಟನೆ ನಡೆಸಲಾಗಿತ್ತು.  ಈ ವಿಷಯವಾಗಿ ಗ್ರಾ.ಪಂ ಮತ್ತು ವರ್ತಕರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟು ಲೈಸನ್ಸ್ ಪಡೆಯುವುದರ ಬಗ್ಗೆ ಗೊಂದಲ ಸೃಷ್ಠಿಯಾಗಿತ್ತು.
    ಸಭೆಯಲ್ಲಿ ವರ್ತಕರ ಸಮಸ್ಯೆಯನ್ನು ಆಲಿಸಿದ ಸರ್ಕಲ್ ಇನ್ಸ್‍ಪೆಕ್ಟರ್ ಗೋಪಾಲ್ ಅಂತಿಮ ನಿರ್ಧಾರಕ್ಕೆ ಬಂದು 103 ಅಂಗಡಿ ವ್ಯವಹಾರಗಳಲ್ಲಿ ಮೊಬೈಲ್ ಅಂಗಡಿ, ಬಣ್ಣದ ಅಂಗಡಿ, ಜೆರಾಕ್ಸ್ ಸ್ಟೋರ್, ಜನರಲ್ ಸ್ಟೋರ್ ಸೇರಿದಂತೆ 19 ಅಂಗಡಿಗಳಿಗೆ ಈಗಾಗಲೇ ನಿಗಧಿ ಪಡಿಸಿರುವ ತೆರಿಗೆಯಲ್ಲಿ ಶೇ.20 ರಷ್ಟು ಕಡಿಮೆ ಮಾಡಿ ಲೈಸನ್ಸ್ ಪಡೆಯಬೇಕು. ಇನ್ನುಳಿದ ಅಂಗಡಿಗಳು ಈಗಾಗಲೇ ನಿಗಧಿ ಪಡಿಸಿರುವ ಶುಲ್ಕವನ್ನು ವಿಧಿಸಿ ಲೈಸನ್ಸ್ ಪಡೆಯಬೇಕೆಂದು ತಿಳಿಸಿದಾಗ ಎಲ್ಲರೂ ಒಕ್ಕೋರಲಿನ ತೀರ್ಮಾನವನ್ನು ಕೈಗೊಂಡರು. 
     ಸಭೆಯಲ್ಲಿ ಸಬ್ಬ್‍ಇನ್ಸ್‍ಪೆಕ್ಟರ್ ಗೋವಿಂದರಾಜು, ಗ್ರಾ.ಪಂ ಅಧ್ಯಕ್ಷ ವೆಂಕಟೇಶ್, ಪಿಡಿಓ ಅಧಿಕಾರಿ ಶೀಲ, ವರ್ತಕರ ಸಂಘದ ಅಧ್ಯಕ್ಷ ಕೆಂಪಣ್ಣ, ಕಾರ್ಯದರ್ಶಿ ರವಿ ಸೇರಿದಂತೆ ಗ್ರಾ.ಪಂ ಸದಸ್ಯರು, ವರ್ತಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

No comments:

Post a Comment