ಭಾರತೀನಗರ.ಆ.23- ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಅತಿಥಿ ಗೃಹದಲ್ಲಿ ಅಧಿಕಾರಿಗಳು ಕಾರ್ಖಾನೆ ಆರಂಭಿಸುವ ಸಂಬಂಧ ರೈತಸಂಘ, ಕಬ್ಬುಬೆಳೆಗಾರರ ಒಕ್ಕೂಟ ಸದಸ್ಯರನ್ನು ಸಭೆಗೆ ಕರೆಯಲಾಗಿದ್ದು, ಹೊಮ್ಮತದ ಅಂತಿಮ ತೀರ್ಮಾನ ಬಾರದ ಹಿನ್ನೆಲೆಯಲ್ಲಿ ಸಭೆ ವಿಫಲಗೊಂಡಿದೆ.
ಆ.28 ರಂದು ಕಾರ್ಖಾನೆ ಆರಂಭಿಸುವ ಮುನ್ನ ಪ್ರತಿ ಟನ್ ಕಬ್ಬಿಗೆ 2500 ಮುಖಂಡ ಹಣವನ್ನಾಗಿ ನೀಡಬೇಕು. ಮತ್ತು ಮೈಷುಗರ್ ಕಾರ್ಖಾನೆ ನೀಡಿರುವಂತೆ ಬಾಕಿ 100 ರೂನನ್ನು ತಕ್ಷಣವೇ ನೀಡಬೇಕೆಂದು ಆಗ್ರಹಿಸಿದರು.
ಜನರಲ್ ಮೇನೇಜರ್ ನಾಗರಾಜು ಇದಕ್ಕೆ ಪ್ರತಿಕ್ರಹಿಸಿ 100 ನೀಡುವ ವಿಚಾರವಾಗಿ ಕೋರ್ಟ್‍ನಲ್ಲಿ ಇರುವುದರಿಂದ ಅಂತಿಮ ತೀರ್ಮಾನ ಬಂದ ಮೇಲೆ ನೀಡಲಾಗುವುದು. ಸರ್ಕಾರ ನಿಗಧಿ ಪಡಿಸಿರುವ ಎಫ್‍ಆರ್‍ಪಿ ದರ 2200 ರೂನಂತೆ ಪ್ರತಿ ಟನ್ನಿಗೆ ಮುಂಗಡ ಹಣ ನೀಡಲಾಗುವುದೆಂದು ತಿಳಿಸಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು ಕಬ್ಬು ನಿಯಂತ್ರಣಾ ಮಂಡಳಿ ಕಾಯ್ದೆ ಪ್ರಕಾರ ಕಬ್ಬು ಹೊಡೆದ ರೈತರಿಗೆ ಸರಿಯಾಗಿ ಏಕೆ ಹಣ ನೀಡಿಲ್ಲ. ಆಗಾದರೆ 6 ತಿಂಗಳು ರೈತರಿಗೆ ಹಣ ನೀಡದಿರುವುದಕ್ಕೆ ಬಡ್ಡಿ ನೀಡಿ ಎಂದು ಪಟ್ಟು ಹಿಡಿದರು.
ಅಧಿಕಾರಿಗಳು ಮತ್ತು ರೈತರ ನಡುವೆ ಹೊಮ್ಮತದ ತೀರ್ಮಾನ ಬಾರದ ಹಿನ್ನಲೆಯಲ್ಲಿ ಸಭೆಯನ್ನು ರದ್ದು ಪಡಿಸಲಾಯಿತು.
ಸಭೆಯಲ್ಲಿ ಕಾರ್ಖಾನೆ ಉಪಾಧ್ಯಕ್ಷ ಎಸ್.ಬ್ರಿಟ್ಟೋ, ಜನರಲ್ ಮೇನೇಜರ್ ವೇಲುಸ್ವಾಮಿ, ಮಣಿ, ಸುರೇಂದ್ರಕಟ್ಟಿ, ಜಯಣ್ಣ ಕಾರ್ಖಾನೆಯನ್ನು 28ರಂದು ಪ್ರಾರಂಭಿಸುವುದಕ್ಕೆ ಮನವಿ ಮಾಡಿದರು. ಇದಕ್ಕೆ ಒಪ್ಪದ ರೈತರು ಬೇಡಿಕೆ ಈಡೇರುವ ವರೆವಿಗೂ ಕಾರ್ಖಾನೆ ಪ್ರಾರಂಭಿಸಲು ಬಿಡುವುದಿಲ್ಲ ಎಂದಾಗ, ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತ್ತು ಸಮಸ್ಯೆಯನ್ನು ಬಗೆಹರಿಸಿಕೊಂಡು ಕಾರ್ಖಾನೆ ಪ್ರಾರಂಭಿಸುತ್ತೇವೆಂದು ಅಧಿಕಾರಿಗಳು ತಿಳಿಸಿದರು.
ಒಕ್ಕೂಟದ ಅಧ್ಯಕ್ಷ ಕೆ.ಎಲ್.ಶಿವರಾಮು, ರೈತ ಸಂಘದ ನಾಯಕ ಅಣ್ಣೂರು ಮಹೇಂದ್ರ, ಶೆಟ್ಟಹಳ್ಳಿ ರವಿ, ದೊಡ್ಡರಸಿನಕೆರೆ ಕೃಷ್ಣ, ಎಚ್.ಎಂ.ಮರಿಮಾದೇಗೌಡ, ಕಾಡುಕೊತ್ತನಹಳ್ಳಿ ಪುಟ್ಟಸ್ವಾಮಿ, ಸಿ.ಎ.ಕೆರೆ ಗಿರೀಶ್, ಎಂ.ಡಿ.ಮರಿಸ್ವಾಮಿ, ಕುರಿಕೆಂಪನದೊಡ್ಡಿ ಕೆ.ಸಿ.ಮಾದೇಗೌಡ, ಹೊಂಬೇಗೌಡನದೊಡ್ಡಿ ಬೋರೇಗೌಡ, ಅಣ್ಣೂರು ಸುಂದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

No comments:
Post a Comment